Congress President Election: ಖರ್ಗೆ ಕಾಂಗ್ರೆಸ್‌ನಲ್ಲಿ ಯಾವ ಬದಲಾವಣೆಯನ್ನೂ ತರೋದಿಲ್ಲ: ಶಶಿ ತರೂರ್‌

Published : Oct 02, 2022, 06:28 PM IST
Congress President Election: ಖರ್ಗೆ ಕಾಂಗ್ರೆಸ್‌ನಲ್ಲಿ ಯಾವ ಬದಲಾವಣೆಯನ್ನೂ ತರೋದಿಲ್ಲ: ಶಶಿ ತರೂರ್‌

ಸಾರಾಂಶ

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಶಶಿ ತರೂರ್ ಹೇಳಿಕೆ ಮತ್ತೊಮ್ಮೆ ಬಂದಿದೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಶಿ ತರೂರ್ ಅವರು ನಾವು ಶತ್ರುಗಳಲ್ಲ, ಇದು ಯುದ್ಧವಲ್ಲ ಎಂದು ಹೇಲಿದ್ದರು.  ಇದು ನಮ್ಮ ಪಕ್ಷದ ಭವಿಷ್ಯಕ್ಕಾಗಿ ನಡೆಯುತ್ತಿರುವ ಚುನಾವಣೆ. ಕಾಂಗ್ರೆಸ್ ಪಕ್ಷದ ಪ್ರಮುಖ 3 ನಾಯಕರಲ್ಲಿ ಖರ್ಗೆ ಅವರು ಕೂಡ ಒಬ್ಬರು ಎಂದು ಹೇಳಿದ್ದಾರೆ.  

ನವದೆಹಲಿ (ಅ.2): ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಸಂಸದ ಶಶಿ ತರೂರ್ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ನಾಮಪತ್ರ ಹಿಂಪಡೆಯುವ ದಿನಾಂಕ ಅಕ್ಟೋಬರ್ 8 ಆಗಿದ್ದು, ನಂತರ ಅಧ್ಯಕ್ಷ ಚುನಾವಣೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿಯಲಿದೆ. ಈ ನಡುವೆ ಶಶಿ ತರೂರ್‌ ಕೆಲವೊಂದು ಮಾತುಗಳನ್ನು ಖಡಾಖಂಡಿತವಾಗಿ ಹೇಳಿದ್ದು, ತಮ್ಮನ್ನು ಬೆಂಬಲಿಸುವವರಿಗೆ ಯಾವುದೇ ದ್ರೋಹ ಬಗೆಯುವುದಿಲ್ಲ. ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ, ಖರ್ಗೆ ಅವರು ರಬ್ಬರ್‌ ಸ್ಟಾಂಪ್‌ ಅಧ್ಯಕ್ಷರಾಗಿರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ ಶಶಿ ತರೂರ್‌, ಖರ್ಗೆ ಅವರಂಥ ನಾಯಕನಿಂದ ಕಾಂಗ್ರೆಸ್‌ನಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಸುದ್ದಿಸಂಸ್ಥೆಯ ವರದಿಯ ಪ್ರಕಾರ, ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಶಿ ತರೂರ್ ನಾವು ಶತ್ರುಗಳಲ್ಲ, ಇದು ಯುದ್ಧವಲ್ಲ ಎಂದು ಹೇಳಿದ್ದಾರೆ. ಇದು ನಮ್ಮ ಪಕ್ಷದ ಭವಿಷ್ಯಕ್ಕಾಗಿ ನಡೆಯುತ್ತಿರುವ ಚುನಾವಣೆ ಕಾಂಗ್ರೆಸ್ ಪಕ್ಷದ ಪ್ರಮುಖ 3 ನಾಯಕರಲ್ಲಿ ಖರ್ಗೆ ಕೂಡ ಒಬ್ಬರು. ಅವರಂತಹ ನಾಯಕರಿಂದ ಬದಲಾವಣೆ ತರಲು ಸಾಧ್ಯವಿಲ್ಲ, ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸುತ್ತಾರೆ. ಆದರೆ, ತಾವಯ ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ತರುತ್ತೇನೆ ಎಂದು ಹೇಳಿದ್ದಾರೆ.

ಕಾರ್ಯಕರ್ತರ ಬೆಂಬಲವಿದೆ: ನಾಗ್ಪುರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ತಿರುವನಂತಪುರಂ (thiruvananthapuram MP) ಸಂಸದ, 'ದೊಡ್ಡ' ನಾಯಕರು ಸ್ವಾಭಾವಿಕವಾಗಿ ಇತರ 'ದೊಡ್ಡ' ನಾಯಕ ಬೆಂಬಲಕ್ಕೆ ನಿಲ್ಲುತ್ತಾರೆ, ಆದರೆ ತಮಗೆ ರಾಜ್ಯಗಳ ಪಕ್ಷದ ಕಾರ್ಯಕರ್ತರ (Congress Party Workers) ಬೆಂಬಲವಿದೆ ಎಂದು ಹೇಳಿದರು. ದೊಡ್ಡ ನಾಯಕರಿಗೆ ಗೌರವ ಕೊಡುತ್ತೇವೆ ಆದರೆ ಪಕ್ಷದಲ್ಲಿ ಯುವಕರ ಮಾತು ಕೇಳುವ ಕಾಲ ಬಂದಿದೆ’ ಎಂದು ಹೇಳಿದರು. ಪಕ್ಷದ ಸಾಂಸ್ಥಿಕ ರಚನೆಯನ್ನು ಬದಲಾಯಿಸಲು ನಾವು ಕೆಲಸ ಮಾಡುತ್ತೇವೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಈ ಪ್ರಾಮುಖ್ಯತೆ ನೀಡಬೇಕು. ವಿಶೇಷವೆಂದರೆ, ಶಶಿ ತರೂರ್ ಕೂಡ G-23 ಗುಂಪಿನ ಭಾಗವಾಗಿದ್ದರು, ಇದು 2020 ರಲ್ಲಿ ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳು ಮತ್ತು ಚುನಾವಣೆಗಳನ್ನು ತರಲು ಒತ್ತಾಯ ಮಾಡಿತ್ತು.

News Hour: ಮಲ್ಲಿಕಾರ್ಜುನ ಖರ್ಗೆಗೆ 'ಕೈ' ಸಾರಥ್ಯ ಫಿಕ್ಸ್: ಕರ್ನಾಟಕ ಕಾಂಗ್ರೆಸ್ಸಲ್ಲಿ ಪವರ್‌ ಸೆಂಟರ್‌ ಆಗ್ತಾರಾ?

ಪಕ್ಷದ ಅಧ್ಯಕ್ಷರ ಆಯ್ಕೆಯ ನಂತರ ಗಾಂಧಿ ಕುಟುಂಬದ (Congress President Election) ಪಾತ್ರದ ಬಗ್ಗೆ ಕೇಳಿದಾಗ, ಶಶಿ ತರೂರ್ (Shashi Taroor), "ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್‌ನ ಡಿಎನ್‌ಎ ಒಂದೇ ಆಗಿದ್ದು, ಗಾಂಧಿ ಕುಟುಂಬಕ್ಕೆ 'ವಿದಾಯ' ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಅಧ್ಯಕ್ಷರು ಅಷ್ಟು ಮೂರ್ಖರಲ್ಲ, (Gandhi Family) ಅವರು ನಮಗೆ ದೊಡ್ಡ ಆಸ್ತಿ ಎಂದು ಹೇಳಿದ್ದಾರೆ.

ಜಗತ್ತಿನ ಅತ್ಯಂತ ಹಳೇ ರಾಜಕೀಯ ಪಕ್ಷಕ್ಕೆ ಕನ್ನಡಿಗ ಅಧ್ಯಕ್ಷ, ರಬ್ಬರ್ ಸ್ಟಾಂಪ್ ಆಗ್ತಾರಾ ? ಖದರ್ ತೋರಿಸ್ತಾರಾ?

ಮತ್ತೊಂದೆಡೆ ಭಾನುವಾರವೇ ಪತ್ರಿಕಾಗೋಷ್ಠಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ‘ಒಬ್ಬ ವ್ಯಕ್ತಿ ಒಂದೇ ಹುದ್ದೆ’ ಸೂತ್ರದಡಿ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ 50 ವರ್ಷಗಳ ರಾಜಕೀಯ (Politics) ಜೀವನದ ಬಗ್ಗೆ ನಿಮಗೆ ತಿಳಿದಿದೆ. ನಾನು ಬಾಲ್ಯದಿಂದಲೂ ಇಲ್ಲಿಯವರೆಗೆ ತತ್ವ ಮತ್ತು ಸಿದ್ಧಾಂತಕ್ಕಾಗಿ ಹೋರಾಡುತ್ತಿದ್ದೇನೆ. ಬಾಲ್ಯದಿಂದಲೂ ನನ್ನ ಜೀವನದಲ್ಲಿ ಹೋರಾಟವಿದೆ. ವರ್ಷಗಟ್ಟಲೆ ಸಚಿವನಾಗಿದ್ದ ನಾನು ವಿರೋಧ ಪಕ್ಷದ ನಾಯಕನೂ ಆಗಿದ್ದೆ. ಸದನದಲ್ಲಿ ಬಿಜೆಪಿ ಮತ್ತು ಸಂಘದ ಸಿದ್ಧಾಂತದ ವಿರುದ್ಧ ಹೋರಾಟ ಮಾಡಿದ್ಧೇನೆ. ನಾನು ಮತ್ತೆ ಹೋರಾಡಲು ಬಯಸುತ್ತೇನೆ ಮತ್ತು ಹೋರಾಟದ ಮೂಲಕ ತತ್ವಗಳನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ