ಕೃಷಿ ಇಲಾಖೆಯ ಅಧಿಕಾರಿಗಳು ಕಳ್ಳರಾದರೆ, ನಮ್ಮ ಸರ್ಕಾರವೇ ಇವರಿಗೆ ಲೀಡರ್‌: ಬಿಹಾರ ಸಚಿವ ಸುಧಾಕರ್‌ ಸಿಂಗ್‌!

By Santosh NaikFirst Published Oct 2, 2022, 4:43 PM IST
Highlights

ಬಿಹಾರದಲ್ಲಿ 32 ದಿನಗಳ ಅಂತರದಲ್ಲಿ ಮಹಾಘಟಬಂದನ್‌ ಸರ್ಕಾರದಲ್ಲಿ 2ನೇ ವಿಕೆಟ್‌ ಪತನವಾಗಿದೆ. ಕೃಷಿ ಸಚಿವ ಸುಧಾಕರ್ ಸಿಂಗ್‌, ಅವರ ಹೇಳಿಕೆ ಸರ್ಕಾರಕ್ಕೆ ಮುಜುಗರ ತಂದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಂದ ರಾಜೀನಾಮೆ ಪಡೆದುಕೊಂಡಿದ್ದಾರೆ.
 

ಪಾಟ್ನಾ (ಅ.2): ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಸಮಾಧಾನದ ಹಿನ್ನೆಲೆಯಲ್ಲಿ ಬಿಹಾರದ ಕೃಷಿ ಸಚಿವ ಸುಧಾಕರ್ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಭಾನುವಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ನನ್ನ ಇಲಾಖೆಯಲ್ಲಿ ದೊಡ್ಡ ದೊಡ್ಡ ಕಳ್ಳರಿದ್ದಾರೆ, ಈ ಎಲ್ಲಾ ಕಳ್ಳರಿಗೆ ನಾನೇ ಮುಖ್ಯಸ್ಥ ಎಂದು ಅವರು ಹೇಳಿಕೆ ನೀಡಿದ್ದರು. ಅವರು ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ವಿವಾದಗಳನ್ನು ಎದುರಿಸುತ್ತಿದ್ದರು. ಮಹಾಘಟಬಂಧನದ ಸರ್ಕಾರದಲ್ಲಿ 32 ದಿನಗಳಲ್ಲಿ ಎರಡನೇ ಸಚಿವರ ರಾಜೀನಾಮೆ ಇದಾಗಿದೆ. ಇಬ್ಬರೂ ಆರ್‌ಜೆಡಿ ಕೋಟಾದಲ್ಲಿ ಸಚಿವರಾಗಿದ್ದರು. ಇದಕ್ಕೂ ಮುನ್ನ ಆಗಸ್ಟ್ 31 ರಂದು ಮಾಜಿ ಕಾನೂನು ಸಚಿವ ಕಾರ್ತಿಕ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಪಹರಣ ಪ್ರಕರಣದಲ್ಲಿ ನ್ಯಾಯಾಲಯದ ಕಣ್ಣೆದುರೇ ಅವರು ತಲೆಮರೆಸಿಕೊಂಡು ಓಡಾಡುತ್ತಿದ್ದರು. ಇದೀಗ ಕೃಷಿ ಸಚಿವರು ರಾಜೀನಾಮೆ ಪತ್ರ ನೀಡಿದ್ದಾರೆ. ಆದರೆ, ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಇದನ್ನು ಆರ್ ಜೆಡಿ ರಾಜ್ಯಾಧ್ಯಕ್ಷ ಹಾಗೂ ಸುಧಾಕರ್ ಸಿಂಗ್ ಅವರ ತಂದೆ ಜಗದಾನಂದ್ ಸಿಂಗ್ ಕೂಡ ಖಚಿತಪಡಿಸಿದ್ದಾರೆ. ಕೃಷಿ ಸಚಿವರು ರೈತರ ಪರ ದನಿ ಎತ್ತುತ್ತಿದ್ದರೂ ಇದರ ಹೋರಾಟ ಮುಂದಿವರಿಯುತ್ತಿಲ್ಲ ಆ ಕಾರಣಕ್ಕಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಜಗದಾನಂದ್ ಸಿಂಗ್ ಹೇಳಿದ್ದಾರೆ.

ಬಿಹಾರದ ಕೃಷಿ ಸಚಿವರು ತಮ್ಮ ರಾಜೀನಾಮೆ ಪತ್ರವನ್ನು ಸರ್ಕಾರಕ್ಕೆ ನೀಡಿದ್ದಾರೆ ಎಂದು ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ (RJD state president Jagdanand Singh) ಹೇಳಿದ್ದಾರೆ. ಯಾವುದೇ ಹೋರಾಟ ತೀವ್ರಗೊಳ್ಳುವುದನ್ನು ನಾವು ಬಯಸುವುದಿಲ್ಲ. ರೈತ ಮತ್ತು ಜವಾನರ ಪಾತ್ರವನ್ನು ಎಂದಿಗೂ ಅಲ್ಲಗಳೆಯುವಂತಿಲ್ಲ. ಈ ದಿನದಂದು ಬಿಹಾರದ ಕೃಷಿ ಸಚಿವರು ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ, ಇದರಿಂದ ಸರ್ಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. 2 ತಿಂಗಳಲ್ಲಿ ಬಿಹಾರ ಸರ್ಕಾರದ ಎರಡನೇ ವಿಕೆಟ್ ಪತನವಾಗಿದೆ ಎಂದು ಸುಶೀಲ್ ಮೋದಿ ಟ್ವಿಟರ್‌ನಲ್ಲಿ ಬರೆದಿದ್ದಾರೆ. ನಿತೀಶ್ ಕುಮಾರ್ ಇನ್ನೂ ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ. ಈ ಹೋರಾಟ ಈಗ ಜಗತಾ ಬಾಬು ವರ್ಸಸ್ ನಿತೀಶ್ ಕುಮಾರ್ ಹೋರಾಟವಾಗಿ ಮಾರ್ಪಟ್ಟಿದೆ. ಜಗತಾ ಬಾಬು ಕೂಡ ಮುಂದಿನ ವಿಕೆಟ್ ಆಗಬಹುದೇ? ಎಂದು ಬರೆದಿದ್ದಾರೆ.

ಬಿಹಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್‌ ಜೈಸ್ವಾಲ್‌ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಿಹಾರದಲ್ಲಿ ರೈತರು ಅಸಮಾಧಾನ ಹೊಂದಿದ್ದಾರೆ. ಕೃಷಿ ಇಲಾಖೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳು ಸರ್ಕಾರವನ್ನು ಆಳುತ್ತಿದ್ದಾರೆ. ನಿತೀಶ್‌ ಕುಮಾರ್‌, ತೇಜಸ್ವಿ ಯಾದವ್‌ ಜೈಲಿಗೆ ಹೋಗಲಿ ಎಂದು ಕಾಯುತ್ತಿದ್ದಾರೆ. ಆ ಮೂಲಕ ತಾವೊಬ್ಬರೇ ಸಿಎಂ ಆಗಿರಬೇಕು ಎಂದು ಬಯಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಉಚಿತ ಸ್ಯಾನಿಟರಿ ಪ್ಯಾಡ್ ಕೇಳಿದ ಬಾಲಕಿ: ನಾಳೆ ____ ಕೇಳ್ತೀರಾ ಎಂದ ಮಹಿಳಾ ಅಭಿವೃದ್ಧಿ ನಿಗಮದ ನಿರ್ದೇಶಕಿ

ನೂತನ ನಿತೀಶ್-ತೇಜಸ್ವಿ ಸರ್ಕಾರದಲ್ಲಿ (Nitish-Tejashwi government) ಕೃಷಿ ಇಲಾಖೆ ಸಚಿವ ಸುಧಾಕರ್ ಸಿಂಗ್ ಅವರು ತಮ್ಮ ಇಲಾಖೆಯ ಅಧಿಕಾರಿಗಳನ್ನು ಕಳ್ಳರು, ತಾವೇ ಕಳ್ಳರ ಸರದಾರರು ಎಂಬ ಹೇಳಿಕೆಯಿಂದ ದೊಡ್ಡ ವಿವಾದ ನಿರ್ಮಾಣವಾಗಿದೆ. ಸಂಪುಟ ಸಭೆಯಲ್ಲಿ ಅಜೆಂಡಾ ಕುರಿತು ಮಾತುಕತೆ ಮುಗಿದ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸುಧಾಕರ್ ಸಿಂಗ್ ಅವರಿಗೆ ಮಾತುಗಳಿಗೆ ಅಡ್ಡಿಪಡಿಸಿದರು ಎಂದು ಮೂಲಗಳು ಬಹಿರಂಗಪಡಿಸಿವೆ. ಅದಲ್ಲದೆ,  ಸುಧಾಕರ್ ಕೂಡ ಇಲಾಖೆಯಲ್ಲಿ ಅಧಿಕಾರಶಾಹಿಯದ್ದೇ ಪ್ರಾಬಲ್ಯ ಎಂದು ನೇರವಾಗಿ ಉತ್ತರಿಸಿದರು.

ಬಿಹಾರಕ್ಕೆ ಭೇಟಿ ನೀಡಲು ಅಮಿತ್ ಶಾಗೆ ನಿತೀಶ್ ಮತ್ತು ಲಾಲು ಅವರಿಂದ ಪಾಸ್‌ಪೋರ್ಟ್‌ ಅಗತ್ಯವಿಲ್ಲ!

ಬಿಹಾರ ಸರ್ಕಾರದ ಕೃಷಿ ಸಚಿವ ಸುಧಾಕರ್ ಸಿಂಗ್  (Agriculture Minister Sudhakar Singh)ತಮ್ಮದೇ ಸರ್ಕಾರದೊಳಗೆ ನಡೆಯುತ್ತಿರುವ ಭ್ರಷ್ಟಾಚಾರವನ್ನು (corruption ) ಬಯಲಿಗೆಳೆದಿದ್ದರು. ನಾವು ಕಳ್ಳರ ಸರದಾರರು ಎಂದು ಕೈಮೂರಿನಲ್ಲಿ ಹೇಳಿದರು. ಅಷ್ಟೇ ಅಲ್ಲ ಸೀಡ್ ಕಾರ್ಪೊರೇಷನ್ ವಿರುದ್ಧ ಆರೋಪ ಮಾಡಿದ ಅವರು, ನಿಗಮದ ಬೀಜಗಳು ನಕಲಿ ಎಂದು ಹೇಳಿದ್ದಾರೆ. 250 ಕೋಟಿ ರೂಪಾಯಿಗಳ ಬೀಜವನ್ನು ಪಾಲಿಕೆಯೇ ತಿನ್ನುತ್ತದೆ. ಈ ಸಮಯದಲ್ಲಿ, ಅವರು ಸಚಿವಾಲಯದ ಅಳತೆ ಮತ್ತು ತೂಕದ ಇಲಾಖೆಯನ್ನು ರಿಕವರಿ ಇಲಾಖೆ ಎಂದು ಕರೆದಿದ್ದರು.
 

click me!