ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಪಾಕ್ ಏಜೆಂಟ್ ಎಂದು ಕರೆದು ವಿವಾದ ಕಿಡಿ ಹೊತ್ತಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು, (ಮಾ.06): ಮಹಾಭಾರತವನ್ನು ಬರೆದಿದ್ದು ಕೀಳುಜಾತಿಯ ವಾಲ್ಮೀಕಿ ಎಂದು ಹೇಳಿವ ಮೂಲಕ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವಿವಾದಕ್ಕೆ ಕಾರಣರಾಗಿದ್ದಾರೆ.
ಇಂದು (ಶುಕ್ರವಾರ) ಸದನದಲ್ಲಿ ಸಂವಿಧಾನದ ಕುರಿತು ಚರ್ಚೆಗಳು ನಡೆಯುತ್ತಿದ್ದ ವೇಳೆ ಮಾತನಾಡಿದ ಯತ್ನಾಳ್, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಭಾಷಣ ಒಂದನ್ನು ಉಲ್ಲೇಖ ಮಾಡಿದ ಯತ್ನಾಳ್, ಹಿಂದೂಗಳಿಗೆ ವೇದಗಳು ಬೇಕಾಗಿದ್ದವು. ಆಗ ಅವರು ವ್ಯಾಸನನ್ನು ಕರೆದರು. ಅವರಿಗೊಂದು ಮಹಾ ಕಾವ್ಯ ಮಹಾಭಾರತ ಬೇಕಾಗಿತ್ತು. ಆವಾಗ ಅಸ್ಪೃಶ್ಯನಾದ ವಾಲ್ಮೀಕಿ ಬೇಕಾದ. ಇದೀಗ ಸಂವಿಧಾನದ ಅಗತ್ಯವಿದೆ ಅದಕ್ಕಾಗಿ ನನ್ನನ್ನು ಕರೆದರು ಎಂದು ಅಂಬೇಡ್ಕರ್ ಮಾತನ್ನು ಸದನದಲ್ಲಿ ತಪ್ಪಾಗಿ ಉಲ್ಲೇಳಿಸಿದರು.
ದೊರೆಸ್ವಾಮಿ ಡೋಂಗಿ ಹೋರಾಟಗಾರ : ಯತ್ನಾಳ್
ಯತ್ನಾಳ್ ಅವರ ತಪ್ಪನ್ನು ಗಮನಿಸಿದ ಇತರ ಸದಸ್ಯರು ಮಹಾಭಾರತವನ್ನು ಬರೆದಿದ್ದು ವ್ಯಾಸ ಮಹರ್ಷಿ ಹಾಗೂ ರಾಮಾಯಣ ಬರೆದಿದ್ದು ವಾಲ್ಮೀಕಿ ಎಂದು ತಪ್ಪನ್ನು ತಿದ್ದಿದರು.
ಡಾ. ಬಿಆರ್ ಅಂಬೇಡ್ಕರ್ ಅವರನ್ನು ದಲಿತ ನಾಯಕ ಎಂದು ಸೀಮಿತಗೊಳಿಸಿದ್ದು ದೇಶದ ದುರಂತ. ಮಹಾಪುರುಷರ ಹುಟ್ಟುಹಬ್ಬಕ್ಕೆ ಆಯಾ ಜಾತಿಯ ಜನರು ಮಾತ್ರ ಹೋಗುತ್ತಾರೆ. ಅಲ್ಲೂ ಜಾತಿ ಬಂದು ಬಿಟ್ಟಿದೆ ಎಂದರು.
ಸ್ಪೀಕರ್, ಯತ್ನಾಳ್ ವಿರುದ್ಧ ಗೌರ್ನರ್‌ಗೆ ಕಾಂಗ್ರೆಸ್ ದೂರು
ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಪಾಕ್ ಏಜೆಂಟ್ ಎಂದು ಕರೆದು ವಿವಾದದ ಕಿಡಿ ಹೊತ್ತಿಸಿದ್ದನ್ನ ಇಲ್ಲಿ ಸ್ಮರಿಸಬಹುದು. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.