ಬಿಜೆಪಿ ಸಂಪರ್ಕದಲ್ಲಿ ಹಲವರು : ಕಾಂಗ್ರೆಸ್ ಮುಖಂಡನಿಂದ ಸೀಕ್ರೇಟ್ ರಿವೀಲ್

By Web DeskFirst Published Nov 20, 2018, 1:11 PM IST
Highlights

ಸೀಕ್ರೇಟ್ ಆಗಿ ಹಲವರು ಬಿಜೆಪಿ ಸಂಪರ್ಕದಲ್ಲಿ ಇರುವ ಬಗ್ಗೆ ಇದೀಗ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಪಿಪ್ಲಾನಿ :  ಮಧ್ಯ ಪ್ರದೇಶದಲ್ಲಿ ಇನ್ನೇನು ಕೆಲವೇ ದಿನದಲ್ಲಿ ಚುನಾವಣೆ ನಡೆಯುತ್ತಿದೆ. ಪರಸ್ಪರ ವಿರೋಧಿ ಪಕ್ಷಗಳೆಂದು ಬಿಂಬಿಸಲಾಗಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಗೆಲುವಿಗಾಗಿ ವಿವಿಧ ತಂತ್ರಗಳನ್ನು ಹೆಣೆಯುತ್ತಿವೆ. 

ಇದೇ ವೇಳೆ ಮಧ್ಯ ಪ್ರದೇಶ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಹಲವು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಲವು ಸರ್ಕಾರಿ ಅಧಿಕಾರಿಗಳು ಬಿಜೆಪಿಯೊಂದಿಗೆ ಗುಪ್ತವಾಗಿ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಇವರೆಲ್ಲಾ ಸೂಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಇದೇ ನವೆಂಬರ್ 28 ರಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು ಇನ್ನೇನಿದ್ದರು ರಾಜ್ಯದಲ್ಲಿ ಕೇವಲ 15 ದಿನಗಳಷ್ಟೇ ಬಿಜೆಪಿ ಆಡಳಿದಲ್ಲಿರಲಿದೆ ಎಂದಿದ್ದಾರೆ. 

ಕೆಲವು ಅಧಿಕಾರಿಗಳು ತಾವು ಗಮನಿಸಿದಂತೆ ಪಕ್ಷದ ಬ್ಯಾಡ್ಜ್ ಅನ್ನು ಮೇಲೆ ಅಂಟಿಸಿಕೊಳ್ಳದಿದ್ದರೂ ಸೀಕ್ರೇಟ್ ಆಗಿ ತಮ್ಮ ಪಾಕೆಟ್ ಗಳಲ್ಲಿ ಇರಿಸಿಕೊಂಡಿರುವುದು ತಿಳಿದು ಬಂದಿದೆ. ಅವರು ತಮ್ಮ ಸಮವಸ್ತ್ರಕ್ಕಾದರೂ ಗೌರವ ನೀಡುವುದನ್ನು ಕಲಿಯಲಿ ಎಂದು ಪರೋಕ್ಷವಾಗಿ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

28ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗಲಿದ್ದು, ಕಾಂಗ್ರೆಸ್ ರಾಜ್ಯದಲ್ಲಿ ಡಿಸೆಂಬರ್ 12 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದೆ ಎಂದು ಕಮಲ್ ನಾಥ್ ಹೇಳಿದ್ದಾರೆ. 

click me!