ಇದೇನಿದು ಅಚ್ಚರಿ ! ಕಾಂಗ್ರೆಸ್ ನೊಂದಿಗೆ ಮೈತ್ರಿಗೆ ಮುಂದಾದ ಬಿಜೆಪಿ?

By Web DeskFirst Published Nov 20, 2018, 12:42 PM IST
Highlights

ದೇಶದಲ್ಲಿ ಸದ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಲವು ಪಕ್ಷಗಳು ಮುಂದಿನ ಚುನಾವಣೆಗೆ ಸಿದ್ಧತೆಯಲ್ಲಿ ತೊಡಗಿವೆ. ಇದೇ ವೇಳೆ ಬಿಜೆಪಿಯು ಮಿಜೋರಾಂನಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿಗೆ ಮನಸು ಮಾಡಿದೆ. 

ಮಿಜೋರಾಂ :  ದೇಶದ ಪಂಚ ರಾಜ್ಯಗಳಲ್ಲಿ ಚುನಾವನಡೆ ನಡೆಯುತ್ತಿದ್ದು, ವಿವಿಧ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದು, ಅಧಿಕಾರಕ್ಕಾಗಿ ಮತದಾರರ ಮನಗೆಲ್ಲುವ ಯತ್ನಗಳು ನಡೆಯುತ್ತಿವೆ. ಇದರ ನಡುವಿನಲ್ಲೇ ಪಕ್ಷಗಳು ಹೊಸ ರೀತಿಯ ತಂತ್ರಗಳನ್ನು ಹೆಣೆಯುತ್ತಿವೆ. 

ಮಿಜೋರಾಂನಲ್ಲಿ ಇದೇ 28 ರಂದು ವಿಧಾನಸಭೆ ಚುನಾವಣೆ ನಡೆಯುತ್ತಿದ್ದು ಆದರೆ ಸಿದ್ಧಾಂತಗಳು ಹೊಂದಾಣಿಕೆಯಾಗದ 2 ರಾಷ್ಟ್ರೀಯ ಪಕ್ಷಗಳು ಒಂದಾಗುತ್ತಿವೆಯಾ ಎನ್ನುವ  ಸುದ್ದಿ ಹರಿದಾಡುತ್ತಿವೆ.

ಸದ್ಯ ಮಿಜೋರಾಂನಲ್ಲಿ ಕಾಂಗ್ರೆಸ್ ಹಾಗೂ ಎಂಎನ್ ಎಫ್ ಮೈತ್ರಿ ಅಧಿಕಾರದಲ್ಲಿ ಇದ್ದು, ಇದೀಗ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಮುಖಂಡರೇ ಸ್ವತಃ ಸಿದ್ಧವಾಗಿದ್ದೇವೆ. ಮೖತ್ರಿಗೆ ನಮ್ಮ ಸ್ವಾಗತ ಎನ್ನುವಂತೆ ಹೇಳಿಕೆ ನೀಡಿದ್ದಾರೆ.  

ಆದರೆ ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿ ಇರುವ 2 ಪಕ್ಷಗಳಾದ ಐಎಂಎಫ್   ಹಾಗೂ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಸದ್ಯ ತಯಾರಿಯಲ್ಲಿವೆ.  

ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೂ ಕೂಡ ಮುಂದಿನ ಕ್ರಿಸ್ಮಸ್ ಹಬ್ಬವನ್ನು ರಾಜ್ಯದ ಜನತೆ ಬಿಜೆಪಿ ಸರ್ಕಾರದ ಜೊತೆಗೆ ಮಾಡುತ್ತಾರೆ ಎಂದು ಹೇಳಿದ್ದಾರೆ. 

ರಾಜ್ಯ ಬಿಜೆಪಿ ಉಸ್ತುವಾರಿ ಹಿಮಂತ್ ಬಿಸ್ವಾಸ್ ಅವರೂ ಕೂಡ  ಪಕ್ಷವೂ ಮೈತ್ರಿಗೆ ಸದಾ ಸಿದ್ಧವಾಗಿದೆ ಎಂದಿದ್ದಾರೆ. ಆದರೆ ರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಗಳೆಂದು ಬಿಂಬಿಸಲಾಗಿರುವ ಪಕ್ಷಗಳು ಒಂದಾಗುವುದು ಮಾತ್ರ ಕನಸಿನ ಮಾತೇ ಆಗಿದ್ದು, ಇದರಲ್ಲಿ ಎಷ್ಟು ಸತ್ಯಾಸತ್ಯತೆ ಇದೆ ಎನ್ನುವುದು ಮಾತ್ರ ಕಾದು ನೋಡಬೇಕಿದ್ದು, ಇದೊಂದು ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುವ ವಿಚಾರವೇ ಆಗಿದೆ. 

click me!