ಮೈಸೂರಿನ ಅತಿ ಬಡವ ಅಭ್ಯರ್ಥಿ ಇವರೇ ನೋಡಿ: ಜೆಡಿಎಸ್ ಅಭ್ಯರ್ಥಿ ಬಳಿ ಸ್ಕೂಟರ್ ಬಿಟ್ಟರೆ ಬೇರೆನಿಲ್ಲ!

Published : Apr 18, 2023, 11:15 PM IST
ಮೈಸೂರಿನ ಅತಿ ಬಡವ ಅಭ್ಯರ್ಥಿ ಇವರೇ ನೋಡಿ: ಜೆಡಿಎಸ್ ಅಭ್ಯರ್ಥಿ ಬಳಿ ಸ್ಕೂಟರ್ ಬಿಟ್ಟರೆ ಬೇರೆನಿಲ್ಲ!

ಸಾರಾಂಶ

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ವಿ. ಮಲ್ಲೇಶ್ ಅವರು ಕೇವಲ 1.15 ಲಕ್ಷ ರೂ. ಆಸ್ತಿ ಹೊಂದಿದ್ದಾರೆ. ಇವರ ಬಳಿ ಸ್ಕೂಟರ್ ಬಿಟ್ಟರೆ ಬೇರೆ ವಾಹನ ಇಲ್ಲ, ಸಾಲವೂ ಇಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು (ಏ.18): ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಂದ ನಾಮಪತ್ರ ಸಲ್ಲಿಕೆ ಮಾಡಲಾಗುತ್ತಿದ್ದು, ಇಲ್ಲಿ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನೂ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿಯೂ ಕೋಟ್ಯಾಧಿಪತಿ ಎಮದು ಘೋಷಣೆ ಮಾಡಿಕೊಳ್ಳುತ್ತಿರುವ ನಡುವೆ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ವಿ. ಮಲ್ಲೇಶ್ ಅವರು ಕೇವಲ 1.15 ಲಕ್ಷ ರೂ. ಆಸ್ತಿ ಹೊಂದಿದ್ದಾರೆ. ಇವರ ಬಳಿ ಸ್ಕೂಟರ್ ಬಿಟ್ಟರೆ ಬೇರೆ ವಾಹನ ಇಲ್ಲ, ಸಾಲವೂ ಇಲ್ಲ.

ಇನ್ನು ಜೆಡಿಎಸ್‌ ವರಿಷ್ಠ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಳಿ 181 ಕೋಟಿ ರೂ. ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಬಳಿ 104 ಕೋಟಿ ರೂ. ಆಸ್ತಿಯಿದೆ. ಶತಕೋಟಿ ವೀರರ ಪಕ್ಷವಾಗಿರುವ ಜೆಡಿಎಸ್‌ ಅಭ್ಯರ್ಥಿ ಕೆವಿ. ಮಲ್ಲೇಶ್‌ ಅವರು ತಮ್ಮ ಬಳಿ ಕೇವಲ  1.15 ಲಕ್ಷ ರೂ. ಆಸ್ತಿ ಇರುವುದಾಗಿ ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇನ್ನು ಚುನಾವಣೆಗೆ ಇವರ ಖರ್ಚು ವೆಚ್ಚಗಳು ಏನು ಎಂಬುದು ತೀವ್ರ ಕುತೂಹಲವಾಗಿದೆ. ಆದರೆ, ಇವರು ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಕೃಷ್ಣರಾಜ ಕ್ಷೇತ್ರದಲ್ಲಿ ತನ್ನದೇ ಮತದಾರರನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದನ್ನು ಕಾದು ನೊಡಬೇಕಿದೆ.

ಕಾಂಗ್ರೆಸ್‌ ನಾಯಕನ ಪುತ್ರನಿಗೆ 881 ಕೋಟಿ ಸಾಲ ಕೊಟ್ಟ ಬ್ಯಾಂಕ್‌ಗಳು: ಮತ್ತೊಬ್ಬ ಮಲ್ಯ ಎನ್ನಬೇಡಿ!

ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಕವೀಶ್‌ಗೌಡ ಕೋಟ್ಯಧಿಪತಿಯಾದರೂ ಕಾರ್ ಇಲ್ಲ. ಕವೀಶ್ ಅವರು 1.13 ಕೋಟಿ ರೂ. ಮೊತ್ತ ಚರಾಸ್ತಿ, 1.85 ಕೋಟಿ ರೂ. ಮಾರುಕಟ್ಟೆ ಬೆಲೆಯ ಸ್ಥಿರಾಸ್ತಿ ಹೊಂದಿದ್ದಾರೆ. 43.16 ಲಕ್ಷ ರೂ. ಮೊತ್ತ ಚರಾಸ್ತಿ ಹೊಂದಿರುವ ಇವರ ಪತ್ನಿ ಪ್ರಗ್ಯಾ ಪ್ರಕಾಶ್ ಹೆಸರಿನಲ್ಲಿ ಸ್ಥಿರಾಸ್ತಿ ಇಲ್ಲ. ಇವರ ಹೆಸರಿನಲ್ಲಿ 5 ಲಕ್ಷ ರೂ, ಮೊತ್ತದ ವೋಕ್ಸ್ ವ್ಯಾಗನ್ ಪೋಲೋ ಕಾರ್ ಇದೆ. 

ಮತ್ತೊಂದೆಡೆ ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಹರ್ಷವರ್ಧನ್ ಅವರು 67.64 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. 6.97 ಲಕ್ಷ ರೂ. ಸಾಲ ಹೊಂದಿದ್ದಾರೆ. ಸ್ಥಿರಾಸ್ತಿ ಇಲ್ಲ. ಆದರೆ ಇವರ ಪತ್ನಿ ಹೆಸರಿನಲ್ಲಿ 59.58 ಲಕ್ಷ ರೂ. ಚರಾಸ್ತಿ, 41.62 ಲಕ್ಷ ರೂ. ಸ್ಥಿರಾಸ್ತಿ ಹೊಂದಿದ್ದಾರೆ.

ಪತಿಗಿಂತ ಪತ್ನಿ ಸಿರಿವಂತೆ- ಶಾಸಕಿ ಹೆಬ್ಬಾಳ್ಕರ್ ಆದಾಯ ಗಣನೀಯ ಏರಿಕೆ! ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆದಾಯದಲ್ಲಿ ಗಣನೀಯ ಏರಿಕೆ ಕಂಡಿದೆ. 2018ರಲ್ಲಿ 36.58 ಲಕ್ಷ ಆದಾಯ ಹೊಂದಿದ್ದ ಅವರು, 2022ರ ಹೊತ್ತಿಗೆ 7.15 ಕೋಟಿ ಏರಿಸಿಕೊಂಡಿದ್ದಾರೆ. ಅಂದರೆ ಐದು ವರ್ಷಗಳಲ್ಲಿ 6.70 ಕೋಟಿ ಆದಾಯ ಏರಿಕೆ ಕಂಡಿದೆ. 2019ರಲ್ಲಿ 41.67 ಲಕ್ಷ, 2020ರಲ್ಲಿ 43.71 ಲಕ್ಷ, 2021ರಲ್ಲಿ 42.14 ಲಕ್ಷ ಆದಾಯ ಹೊಂದಿದ್ದಾಗಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, 2022ರಲ್ಲಿ ಏಕಾಏಕಿ ಆದಾಯದಲ್ಲಿ ಏರಿಕೆಯಾಗಿದೆ.

ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದ ಚುನಾವಣಾಧಿಕಾರಿ, ಶವಾಗಾರದಲ್ಲಿ ಎದ್ದುಕೂತ!

5.63 ಕೋಟಿ ರೂ. ಸಾಲವಿದೆ: ವಿವಿಧ ಬ್ಯಾಂಕುಗಳಲ್ಲಿ 10.86 ಕೋಟಿ ಇದ್ದು, ಕೈಯಲ್ಲಿ 11.51 ಲಕ್ಷ ಹಣ ಇಟ್ಟುಕೊಂಡಿದ್ದಾರೆ. ಅವರ ಪತಿ ಹೆಸರಲ್ಲಿ ಕೇವಲ 26.80 ಲಕ್ಷದ ಆಸ್ತಿ ಇದೆ. 27.55 ಲಕ್ಷ ಬೆಲೆಬಾಳುವ ಕೃಷಿ ಭೂಮಿ, 18 ಲಕ್ಷದಷ್ಟು ಕೃಷಿಯೇತರ ಜಮೀನು ಹೊಂದಿದ್ದಾರೆ. 10.86 ಕೋಟಿ ಮೌಲ್ಯದ ಚರಾಸ್ತಿ, 1.90 ಕೋಟಿ ಮೌಲ್ಯದ ಸ್ಥಿರಾಸ್ತಿ ಅವರಿಗಿದೆ. ಲಕ್ಷ್ಮೀ ಒಬ್ಬರೇ ಒಟ್ಟು 5.63 ಕೋಟಿಗೂ ಅಧಿಕ ಸಾಲ ಪಡೆದಿದ್ದಾರೆ. ಇದರಲ್ಲಿ ಗೃಹಸಾಲ 72.58 ಲಕ್ಷ, ವಾಹನ ಸಾಲ 8.19 ಲಕ್ಷ ಸೇರಿದಂತೆ ವಿವಿಧ ಬ್ಯಾಂಕುಗಳು, ಸಹಕಾರ ಸಂಘ, ಖಾಸಗಿ ಮೂಲಗಳಿಂದಲೂ ಸಾಲ ಮಾಡಿದ್ದಾರೆ. ಅಲ್ಲದೇ, 1.20 ಕೋಟಿಯಷ್ಟು ಸರ್ಕಾರಿ ಕಟಬಾಕಿ ಉಳಿಸಿಕೊಂಡಿದ್ದಾರೆ. ಲಕ್ಷ್ಮೀ ಮೇಲೆ ಮೂರು ಅಪರಾಧ ಪ್ರಕರಣಗಳು ದಾಖಲಾಗಿದ್ದು, ಯಾವುದರಲ್ಲೂ ತೀರ್ಪು ಬಂದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ