ಅರಮನೆ ರಾಜ್ಯ ಬಿಜೆಪಿ ಜೊತೆ ಸದಾ ಸಂಪರ್ಕದಲ್ಲಿ ಇತ್ತು. ಸಾಮಾನ್ಯ ಅಭ್ಯರ್ಥಿ ರೀತಿಯೇ ನನ್ನ ಆಯ್ಕೆ ಆಯ್ತು ಎಂದು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಮೈಸೂರು (ಮಾ.15): ಅರಮನೆ ರಾಜ್ಯ ಬಿಜೆಪಿ ಜೊತೆ ಸದಾ ಸಂಪರ್ಕದಲ್ಲಿ ಇತ್ತು. ಸಾಮಾನ್ಯ ಅಭ್ಯರ್ಥಿ ರೀತಿಯೇ ನನ್ನ ಆಯ್ಕೆ ಆಯ್ತು ಎಂದು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ನನ್ನ ಸಿದ್ದಾಂತ, ಅಭಿವೃದ್ಧಿ ದೃಷ್ಟಿಕೋನ ನೋಡಿದಾಗ ಅದು ಬಿಜೆಪಿ ಕಡೆ ಇತ್ತು. ಹಾಗಾಗಿ ರಾಜಕೀಯಕ್ಕೆ ಬಂದ್ರೆ ಬಿಜೆಪಿ ಪಕ್ಷದ ಅಭ್ಯರ್ಥಿ ಆಗಬೇಕು ಎಂಬುದು ನನ್ನ ಆಸೆ ಆಗಿತ್ತು. ರಾಜಸ್ಥಾನದ ಮೂಲದಿಂದ ಟಿಕೇಟ್ ಪ್ರಯತ್ನ ಆಗಿದೆ ಎಂಬುದೆಲ್ಲ ಸುಳ್ಳು. ನಿಮಗೆಲ್ಲ ಗೊತ್ತಾದಾಗಲೇ ನನ್ನ ಮಾವನವರಿಗೂ ಗೊತ್ತಾಗಿದೆ. ನಮ್ಮ ಪರವಾಗಿ ಯಾರೂ ಲಾಭಿ ಮಾಡುವ ಅವಶ್ಯಕತೆ ಇಲ್ಲ ಎಂದರು.
ನನ್ನ ಪ್ರಕಾರಣದಲ್ಲಿ ರಾಜಪ್ರಭುತ್ವಕ್ಕೂ ರಾಜಕಾರಣಕ್ಕೂ ವ್ಯತ್ಯಾಸ ಇಲ್ಲ. ಹಿಂದಿನ ರಾಜರೂ ಕೂಡ ರಾಜಕೀಯದ ಮೂಲಕ ಕೆಲಸ ಮಾಡಿದ್ದಾರೆ. ಸಮಾಜದಲ್ಲಿ ಅಭಿವೃದ್ಧಿ ತರಬೇಕಾದರೆ ರಾಜಕಾರಣವೇ ಮಾರ್ಗ. ಟೀಕೆಗಳನ್ನು ಸ್ವೀಕರಿಸಿ ಮಾನ್ಯ ಇರೋದನ್ನ ತಗೋಬೇಕು. ಮೈಸೂರು ಕೊಡಗು ಕ್ಷೇತ್ರ ರಾಜ ಪ್ರಭುತ್ವದಿಂದಲೂ ಎಲ್ಲಾ ಕ್ಷೇತ್ರ ಅಭಿವೃದ್ಧಿ ಕಂಡಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಅದರ ಜೊತೆಗೆ ನನ್ನದೇ ಆದ ಫ್ಲೇವರ್ ಸೇರಿಸಬೇಕಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ದಕ್ಷಿಣ ಭಾರತದ ಕೇಂದ್ರವಾಗಿ ಮೈಸೂರನ್ನು ಮಾಡಬೇಕು ಎಂದು ಹೇಳಿದರು.
ಆಧುನಿಕ ಯೋಗ ಕೇಂದ್ರವಾಗಿ ಮೈಸೂರು ಮಾಡುವ ಯೋಜನೆ ಇದೆ. ಕೇಂದ್ರದ ಯೋಜನೆಯನ್ನು ಚಿಕ್ಕ ಗ್ರಾಮಕ್ಕೂ ಮುಟ್ಟಿಸುವ ಕೆಲಸ ಮಾಡುತ್ತೇನೆ. ರಾಜಕಾರಣದಲ್ಲಿ ಬೇಕಾದಷ್ಟು ಸಮಾವಲು ಬಂದಿದೆ, ಮುಂದೆ ಬರುತ್ತೆ. ಅವೆಲ್ಲವನ್ನೂ ಸ್ವೀಕರಿಸಿ ನಾನು ಮುಂದುವರಿಯುತ್ತೇನೆ. ಧಾರ್ಮಿಕ, ಸಾಂಸ್ಕೃತಿಕ ದೃಷ್ಟಿಯಿಂದ ಅಭಿವೃದ್ಧಿ ಆಗಬೇಕು. ಆರೋಪ ಪತ್ಯಾರೋಪಕ್ಕೆ ಸಿದ್ದ ಆಗಿದ್ದೇನೆ, ಬಂದರೆ ಎದುರಿಸುತ್ತೇನೆ. ಪಕ್ಷ ತೀರ್ಮಾನ ಮಾಡಿದಂತೆ ಇತರ ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇನೆ ಎಂದರು.
ಇನ್ನಷ್ಟು ಬಿಜೆಪಿ ಸಂಸದರಿಗೆ ಲೋಕಸಭಾ ಟಿಕೆಟ್ ಸಿಗಲ್ಲ: ಡಿ.ಕೆ.ಶಿವಕುಮಾರ್
ಸೋಲು ಗೆಲುವು ರಾಜಕರಣದಲ್ಲಿ ಇರುತ್ತೆ. ಅದನ್ನು ಸ್ವೀಕರಿಸಿ ನಾನು ಮುಂದುವರಿಯಬೇಕು. ಎಲ್ಲಾ ಸಮಯದಲ್ಲೂ ನಾವು ಸಿಹಿಯನ್ನು ಬಯಲು ಆಗಲ್ಲ. ಸ್ಥಳೀಯ ನಾಯಕರ ಸಹಕಾರ ಕೋರಿದ್ದೇನೆ. ಸಂಸದ ಪ್ರತಾಪ್ ಸಿಂಹ ಕೂಡ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಮಾತನಾಡಿದ್ರು. ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.