
ಭಾಲ್ಕಿ (ಮಾ.15): ತಾಲೂಕಿನಲ್ಲಿ ವಿವಿಧ ಯೋಜನೆಯಡಿ ಸುಮಾರು 225 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. ಮಳಚಾಪೂರ ಗ್ರಾಮದಲ್ಲಿ ಬಹುಗ್ರಾಮ ಯೋಜನೆಯಡಿ 91.22ಕೋಟಿ ರು. ವೆಚ್ಚದಲ್ಲಿ 54 ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆ ಕಾಮಗಾರಿ ಸೇರಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಯೋಜನೆಯಡಿ 100ಕೋಟಿ ರು, ಎನ್‌ಎಚ್‌ಡಿಪಿ 25 ಮತ್ತು ಲೋಕೋಪಯೋಗಿ ಇಲಾಖೆಯ ಯೋಜನೆಯಡಿ 8 ಕೋಟಿ ರು., ಮೊತ್ತದ ವಿವಿಧೆಡೆ ಸರ್ಕಾರಿ ಶಾಲೆ ಕೋಣೆ, ಆಸ್ಪತ್ರೆ, ವಸತಿ ನಿಲಯ ಕಟ್ಟಡ, ರಸ್ತೆ, ಬೀದಿ ದೀಪ, ಚರಂಡಿ, ಕುಡಿಯುವ ನೀರು ಸೇರಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ನಿರೀಕ್ಷೆಯಂತೆ ಆಡಳಿತ ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯ ದಾಖಲೆ ರೀತಿಯಲ್ಲಿ 3.71 ಲಕ್ಷ ಕೋಟಿ ರು. ಮೊತ್ತದ ಬಜೆಟ್ ಮಂಡಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರದ ಕಾರ್ಯಕ್ರಮ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆಯಿಲ್ಲ ಎಂದರು. ಮಳಚಾಪೂರ ಗ್ರಾಮದಲ್ಲಿ ಬಹುಗ್ರಾಮ ಯೋಜನೆಯಡಿ 91.22 ಕೋಟಿ ರು, ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಡಿ 54 ಗ್ರಾಮಗಳು ಒಳಪಡಲಿವೆ. ಮುಂಬರುವ ದಿನಗಳಲ್ಲಿ ಕಾರಂಜಾ ಜಲಾಶಯದ ಮೂಲಕ ಸುತ್ತಮುತ್ತಲಿನ ಗ್ರಾಮಗಳಿಗೆ ನಿರಂತರವಾಗಿ ನೀರು ಸರಬರಾಜು ಆಗಲಿದೆ.
ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸದೃಪಾನಂದ ಸ್ವಾಮೀಜಿ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟೆ, ಅಮೃತರಾವ ಚಿಮಕೋಡೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ್, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಮಡಿವಾಳಪ್ಪ ಮಂಗಲಗಿ, ಮಲ್ಲಿಕಾರ್ಜುನ ಪ್ರಭಾ, ಸಂತೋಷ ಪಾಟೀಲ್, ರಾಹುಲ್ ಪೂಜಾರಿ ಸೇರಿದಂತೆ ಹಲವರು ಇದ್ದರು.
ಪಿಎಸ್ಐ ನೇಮಕಾತಿ ಹಗರಣ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟದ ನಿರ್ಧಾರ
ಕಾಮಗಾರಿ ವಿವರ: ಮಳಚಾಪೂರ ಗ್ರಾಮದಲ್ಲಿ ಬಹುಗ್ರಾಮ ಯೋಜನೆ 91.22 ಕೋಟಿ ರು., ಕೆಕೆಆರ್‌ಡಿಬಿ ಯೋಜನೆಯಡಿ ಸುಮಾರು 100 ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣ, ಶಾಲಾ ಕೋಣೆ, ವಸತಿ ನಿಲಯ, ಆಸ್ಪತ್ರೆ ಕಟ್ಟಡ, ಚರಂಡಿ ಸೇರಿ ಮುರಾಳ-ಕೋಟಗ್ಯಾಳ 3ಕೋಟಿ ರು, ವಳಸಂಗ ಬೀರಿ(ಕೆ) 5 ಕೋಟಿ ರೂ, ನಾಗರಾಳ-ಕೂಡ್ಲಿ ರಸ್ತೆ 4 ಕೋಟಿ ರು., ಮೇಹಕರ ಗ್ರಾಮದಲ್ಲಿ ಮಾದರಿ ಸರ್ಕಾರಿ ಪ್ರೌಢ ಶಾಲೆ ಕಟ್ಟಡ 3.5 ಕೋಟಿ ರು., ಡೋಣಗಾಪೂರ-ಆಳಂದಿ ರಸ್ತೆ 3 ಕೋಟಿ ರು., ಬಿಸಿಎಂ ವಿದ್ಯಾರ್ಥಿ ವಸತಿ ನಿಲಯ 2.68 ಕೋಟಿ ರು., ಸಿದ್ದೇಶ್ವರ ರಸ್ತೆ 2 ಕೋಟಿ ರೂ, ಬಾತಲ್ ನಾಲಾ ರಸ್ತೆ 80 ಲಕ್ಷ ರು., ದಾಡಗಿ ಬೇಸ್ ಸೇರಿ ವಿವಿಧ ಕಾಮಗಾರಿಗಳು ಒಳಗೊಂಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.