Loksabha Elections 2024: ಕಾಂಗ್ರೆಸ್‌ 2ನೇ ಪಟ್ಟಿ ಮಾರ್ಚ್‌ 18ಕ್ಕೆ: ಸಚಿವ ದಿನೇಶ್‌ ಗುಂಡೂರಾವ್‌

By Kannadaprabha News  |  First Published Mar 16, 2024, 10:23 AM IST

ಕಾಂಗ್ರೆಸ್‌ ಪಕ್ಷದ ಸಿಇಸಿ ಮೀಟಿಂಗ್ ನಾಳೆ ಆಗಬಹುದು. ಬಹುಶಃ 18ಕ್ಕೆ ಎರಡನೇ ಪಟ್ಟಿ ಬಿಡುಗಡೆ ಆಗಬಹುದು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು. 


ಹುಬ್ಬಳ್ಳಿ (ಮಾ.16): ಕಾಂಗ್ರೆಸ್‌ ಪಕ್ಷದ ಸಿಇಸಿ ಮೀಟಿಂಗ್ ನಾಳೆ ಆಗಬಹುದು. ಬಹುಶಃ 18ಕ್ಕೆ ಎರಡನೇ ಪಟ್ಟಿ ಬಿಡುಗಡೆ ಆಗಬಹುದು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಕೂಡ ಇದೀಗ ಪ್ರಶ್ನೆಯಾಗಿದೆ. ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತ ಕೆಲಸ ಮಾಡುತ್ತಿದೆ ಎನ್ನುವುದೇ ಪ್ರಶ್ನೆಯಾಗಿದೆ. ಚುನಾವಣಾ ಆಯೋಗದ ಅಧಿಕಾರಿ ರಾಜೀನಾಮೆ ನೀಡಿರುವುದು ಇದಕ್ಕೆಲ್ಲ ಕಾರಣ ಎಂದರು. ಮೋದಿ ಸರ್ಕಾರ ಬಂದ ಮೇಲೆ ನ್ಯಾಯಾಧೀಶರನ್ನು ಹೊರಹಾಕಿದ್ದಾರೆ. ಚುನಾವಣಾ ಆಯೋಗದಿಂದಲೂ ಹೊರ ಹಾಕಿದ್ದಾರೆ. 

ಹೀಗಾಗಿ ಅದು ನಿಷ್ಪಕ್ಷಪಾತ ಆಗುವುದಕ್ಕೆ ಎಲ್ಲಿ ಸಾಧ್ಯ. ಸ್ವಾಯತ್ತ ಸಂಸ್ಥೆಗಳು ಬಿಜೆಪಿ ಅನುಸಾರ ನಡೆಯಬೇಕು.‌ ಇದು ದೇಶದಲ್ಲಿ ನಡೆಯುತ್ತಿದೆ. ಆಯೋಗ, ಸಂಸ್ಥೆ ಎಲ್ಲವೂ ಬಿಜೆಪಿ ಪರವಾಗಿದೆ. ಇದರಲ್ಲಿ ಚುನಾವಣಾ ಆಯೋಗವೂ ಒಂದು. ಚುನಾವಣಾ ಆಯೋಗ ಬಿಜೆಪಿ ಪರವಾಗಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.  ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ₹ 6 ಸಾವಿರ ಕೋಟಿಗೂ ಅಧಿಕ ಹಣ ಬಿಜೆಪಿಗೆ ದೇಣಿಗೆ ಹೋಗಿದೆ. ಬಿಜೆಪಿಗೆ ಅನೇಕ ದೊಡ್ಡ ದೊಡ್ಡ ಕಂಪನಿಗಳು ದೇಣಿಗೆ ಕೊಟ್ಟಿವೆ. ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇದು ಭ್ರಷ್ಟಾಚಾರದ ಪರಮಾವಾಧಿ. ಅತ್ಯಂತ ಭ್ರಷ್ಟ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ. 

Latest Videos

undefined

ದೇಶದ ಪ್ರಗತಿಗೆ ಮಹಿಳೆಯರ ಕೊಡುಗೆ ಮಹತ್ವದ್ದು: ಸಚಿವ ಕೃಷ್ಣ ಬೈರೇಗೌಡ

ನಮ್ಮ‌ ಮುಂದೆ ಯಾರೂ ನಿಲ್ಲಬಾರದು ಅನ್ನುವುದು ಇವರ ಉದ್ದೇಶ. ಪಕ್ಷಾಂತರ ಮಾಡಲು ಇಡಿ, ಐಟಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಮಾತನಾಡುವುದಕ್ಕೆ ನೈತಿಕತೆ ಇಲ್ಲ. ಎಲ್ಲ ಕಡೆ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ದಿನವೂ ಕಾಂಗ್ರೆಸ್ ನಾಯಕರ ಮನೆ ಮೇಲೆ ರೇಡ್ ಆಗುತ್ತಿದೆ. ಈ ತರಹದ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ. ಚುನಾವಣಾ ಬಾಂಡ್‌ನಿಂದ ಅನೇಕ ವಿಚಾರ ಹೊರ ಬರುತ್ತಿದೆ. ಅದನ್ನುಮುಚ್ಚಿ ಹಾಕಲು ಮೋದಿ ಸರ್ಕಾರ ಮಾಡುತ್ತಿದೆ ಎಂದರು. ಯಡಿಯೂರಪ್ಪ ಪೊಕ್ಸೋ ಕೇಸ್ ವಿಚಾರದ ಬಗ್ಗೆ ನಾನು ಹೆಚ್ಚು ಮಾತಾಡಲ್ಲ, ಕಾನೂನು ಪ್ರಕಾರ ತನಿಖೆ ಆಗಬೇಕು. ದೂರು ದಾಖಲಾದ ಕೂಡಲೇ ದೋಷಿ- ನಿರ್ದೋಷಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ನಾವು ಯಾರನ್ನೂ ತೇಜೋವಧೆ ಮಾಡಬಾರದು. ಸರಿಯಾದ ತನಿಖೆಯಾಗಬೇಕು ಎಂದರು.

20 ಸೀಟ್‌ ಗ್ಯಾರಂಟಿ: ನಾವು ರಾಜ್ಯದಲ್ಲಿ ಸುಮಾರು 20 ಸೀಟ್ ಗೆಲ್ಲುತ್ತೇವೆ. ಸುಮ್ಮನೆ ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಇದೀಗ ಸಿಎಎ ತೆಗೆದುಕೊಂಡು ಬಂದರು. ಮೋದಿ ಬರುವವರೆಗೂ ದೇಶದಲ್ಲಿ ಏನು ಆಗಿರಲಿಲ್ಲವಾ? ಮೋದಿ ಬರುವವರೆಗೂ ದೇಶ ನರಕ ಆಗಿತ್ತು. ಇದೀಗ ಸ್ವರ್ಗ ಆಗಿದೆಯಾ? ಎಂದು ಟೀಕಿಸಿದರು. ನಾವು ಏನು ಹೇಳಿದ್ದೇವೆ ಅದನ್ನು ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ ಎಂದ ಅವರು, ಸಿಲಿಂಡರ್ ದರ ₹ 100 ಇಳಿಸಿದ್ದಾರೆ. 

ಜೆಡಿಎಸ್‌ ಈಗ ಇದೆಯೇ? ಇದ್ದರೆ ಎಲ್ಲಿದೆ?: ಡಿಸಿಎಂ ಡಿಕೆಶಿ ವ್ಯಂಗ್ಯ

ಮೋದಿಗೆ ನೈತಿಕತೆ ಇದ್ದರೆ ₹ 1000 ಇಳಿಸಬೇಕಿತ್ತು. ಚುನಾವಣೆ ಮುಂಚೆ ₹ 100 ರೂಪಾಯಿ ಇಳಿಸುವುದು ಜನ ಮರಳು ಮಾಡುವುದಕ್ಕೆ ಎಂದು ಕಿಡಿಕಾರಿದರು. ಮೈಸೂರಿನಲ್ಲಿ ಎರಡ್ಮೂರು ಹೆಸರಿವೆ. ಇಷ್ಟರಲ್ಲಿ ಟಿಕೆಟ್ ಫೈನಲ್ ಆಗುತ್ತದೆ. ಸಿದ್ದರಾಮಯ್ಯ ಅವರ ಜಿಲ್ಲೆ ಅದು. ಅಲ್ಲಿ ಕೆಲ ಹೆಸರುಗಳು ರೇಸ್‌ನಲ್ಲಿವೆ. ಯತೀಂದ್ರ ಸ್ಪರ್ಧೆ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.

click me!