ಬಿಜೆಪಿಯಿಂದ ಉಚ್ಚಾಟನೆ; ಕೆಎಸ್ ಈಶ್ವರಪ್ಪ ಹೇಳಿದ್ದೇನು?

By Ravi Janekal  |  First Published Apr 22, 2024, 11:28 PM IST

ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಆದೇಶ ನನಗಿನ್ನೂ ಬಂದಿಲ್ಲ. ಆದರೆ ನಾನಿದ್ದನ್ನು ನಿರೀಕ್ಷೆ ಮಾಡಿದ್ದೆ ಎಂದು ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ ತಿಳಿಸಿದರು.


ಶಿವಮೊಗ್ಗ (ಏ.22): ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಆದೇಶ ನನಗಿನ್ನೂ ಬಂದಿಲ್ಲ. ಆದರೆ ನಾನಿದ್ದನ್ನು ನಿರೀಕ್ಷೆ ಮಾಡಿದ್ದೆ ಎಂದು ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ ತಿಳಿಸಿದರು.

ಬಿಜೆಪಿಯಿಂದ ಉಚ್ಚಾಟಿತಗೊಂಡಿರುವ ವಿಚಾರ ಸಂಬಂಧ ಇಂದು ಶಿವಮೊಗ್ಗದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಚ್ಚಾಟನೆ ಮಾಡಲ್ಲ ಮಾಡಲ್ಲ ಎಂದು ಕಾಯುತ್ತಿದ್ದರು. ನಾನು ಯಾವುದೇ ಉಚ್ಚಾಟನೆಗೂ ಹೆದರುವುದಿಲ್ಲ. ಸ್ಪರ್ಧೆ ಮಾಡುವುದು ಖಚಿತ, ಗೆಲ್ಲುವುದು ಖಚಿತ ಎಂದು ಹೇಳಿದ್ದೆ. ಈ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತೇನೆ ಬಿಜೆಪಿಯ ತಾಯಿಯ ಪಾದಕ್ಕೆ ಮತ್ತೆ ಹೋಗುತ್ತೇನೆ ಎಂದರು.

Tap to resize

Latest Videos

undefined

ಬಿಜೆಪಿ ವಿರುದ್ಧ ಪ್ರಚಾರಕ್ಕೆ ಬಂದಿದ್ದ ರೈತ ಸಂಘದ ಕಾರ್ಯಕರ್ತರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆ!

ಈ ಚುನಾವಣೆಯಲ್ಲಿ ನಾನು ಗೆದ್ದು ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುತ್ತೇನೆ. ನನಗೆ ಚುನಾವಣಾ ಆಯೋಗ ಚಿಹ್ನೆ ನೀಡಿದೆ. ಕಬ್ಬು ಹಿಡಿದ ರೈತನ ಚಿಹ್ನೆ ಸಿಕ್ಕಿರುವುದು ನನಗೆ ತುಂಬಾ ಸಂತೋಷವಾಗಿದೆ. ನಾನು ಅನೇಕ ವರ್ಷಗಳಿಂದ ರೈತರ ಪರ ಹೋರಾಟ ಮಾಡಿದ್ದೆ. ನನ್ನ ಚುನಾವಣೆ ಚಿಹ್ನೆಯೂ ಕೂಡ ರೈತ ಆಗಿರುವುದು ತುಂಬಾ ಸಂತೋಷವಾಗಿದೆ. ರೈತನ ಹೆಸರಿನಲ್ಲಿ ಮತ ಕೇಳಲು ಸಂತೋಷವಾಗುತ್ತದೆ. ಒಂದು ಕಡೆ ರೈತ ಮತ್ತೊಂದು ಕಡೆ ಮೋದಿ ಎರಡನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ ಎಂದರು.

ನಾನು ಸ್ಪರ್ಧೆ ಮಾಡೊಲ್ಲ ಎನ್ನುತ್ತಾ ಬಿಜೆಪಿಯವರು ಷಡ್ಯಂತ್ರ ಮಾಡುತ್ತಿದ್ದರು. ಅವರು ಸುಳ್ಳು ಹೇಳುತ್ತಿದ್ದರು. ನಾನು ಸ್ಪರ್ಧೆ ಮಾಡುತ್ತೇನೆ ಎನ್ನುವುದು ಸತ್ಯವಾಗಿದೆ. ಅಪ್ಪ ಮಕ್ಕಳು ನನ್ನ ಸ್ಪರ್ಧೆ ಇಲ್ಲ ಎಂದು ಮತ್ತೊಂದು ಸುಳ್ಳು ಹೇಳಿದ್ದರು. ಯಡಿಯೂರಪ್ಪ ಯಾವ ಮುಖ ಇಟ್ಟುಕೊಂಡು ನನ್ನ ಬಗ್ಗೆ ಉತ್ತರ ಕೊಡುತ್ತಾರೆ? ರಾಜ್ಯದಲ್ಲಿನ ಹಿಂದುತ್ವವಾದಿಗಳನ್ನು ಪಕ್ಕಕ್ಕೆ ಸರಿಸಿದ್ದಾರೆ ಎನ್ನುವುದು ಸುಳ್ಳಾ ? ಅಪ್ಪ ಮಕ್ಕಳ ಕೈಯಲ್ಲಿ ಪಕ್ಷ  ಸಿಲುಕಿ ಒದ್ದಾಡುತ್ತಿದೆ ಎಂದು ಬಿಎಸ್‌ವೈ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು. 

ಬಂಡಾಯ ಅಭ್ಯರ್ಥಿ ಕೆಎಸ್‌ ಈಶ್ವರಪ್ಪಗೆ ಪ್ರತ್ಯೇಕ ಚಿಹ್ನೆ ನೀಡಿದ ಚುನಾವಣಾ ಆಯೋಗ!

ಕಮಲ ಚಿಹ್ನೆಯಂತೆ ಬಿಜೆಪಿ ಶುದ್ಧೀಕರಣ ಆಗಬೇಕು ಎಂಬುವುದು ನನ್ನ ಅಪೇಕ್ಷೆ.  ವಿಜಯೇಂದ್ರ ಹಾಗೂ ಬಿಎಸ್‌ವೈ ವಾಪಸ್ ತೆಗೆದುಕೊಳ್ಳುತ್ತಾರೆ ಎಂದು ಸುಳ್ಳು ಹೇಳುತ್ತಿದ್ದರೇ ಇಡೀ ರಾಜ್ಯದ ಕಾರ್ಯಕರ್ತರು ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದರು. ಸಿದ್ಧಾಂತರದ ಪರ  ಹೋರಾಟಕ್ಕೆ ಇಳಿದಿರುವುದು ನನಗೆ ಸಂತೋಷವಾಗಿದೆ.  ತಾತ್ಕಾಲಿಕವಾಗಿ ಕಮಲ ಚಿಹ್ನೆಯಿಂದ ಸ್ಪರ್ಧಿಸಲು ಆಗಲಿಲ್ಲ ಎಂಬುದನ್ನು ಬಿಟ್ಟರೆ ಎಲ್ಲವೂ ಮೊದಲಿನಂತೆಯೇ ಇದೆ. ನೀವು ಸ್ಪರ್ಧೆ ಮಾಡಬೇಕು ಗೆಲ್ಲಬೇಕು ಎಂಬ ಭಾವನೆ ಬಿಜೆಪಿ ಕಾರ್ಯಕರ್ತರಲ್ಲಿದೆ. ಪರಿವಾರದ ಪ್ರಮುಖರು ಕೂಡ ನನ್ನ ಸ್ಪರ್ಧೆ ಮಾಡಬೇಕು ಎಂದಿದ್ದಾರೆ. ನೇರವಾಗಿ ಮತ್ತು ಪರೋಕ್ಷವಾಗಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚಿನ ಕಾರ್ಯಕರ್ತರು ನನ್ನ ಜೊತೆ ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋಲುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಹ ನನ್ನ ಜೊತೆಗೆ ಬರುತ್ತಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಕಾರ್ಯಕರ್ತರು ನನಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

click me!