ಬಿಜೆಪಿ ವಿರುದ್ಧ ಪ್ರಚಾರಕ್ಕೆ ಬಂದಿದ್ದ ರೈತ ಸಂಘದ ಕಾರ್ಯಕರ್ತರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆ!

By Ravi Janekal  |  First Published Apr 22, 2024, 10:55 PM IST

ಬಿಜೆಪಿ ವಿರುದ್ಧ ಪ್ರಚಾರ ಮಾಡಲು ಬಂದಿದ್ದ ರೈತರ ಸಂಘದ ಕಾರ್ಯಕರ್ತರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಚಾಮರಾಜನಗರ ತಾಲೂಕಿನ ನಂಜೇದೇವವನಪುರದಲ್ಲಿ ನಡೆದಿದೆ.


ಚಾಮರಾಜನಗರ (ಏ.22): ಬಿಜೆಪಿ ವಿರುದ್ಧ ಪ್ರಚಾರ ಮಾಡಲು ಬಂದಿದ್ದ ರೈತರ ಸಂಘದ ಕಾರ್ಯಕರ್ತರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಚಾಮರಾಜನಗರ ತಾಲೂಕಿನ ನಂಜೇದೇವವನಪುರದಲ್ಲಿ ನಡೆದಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ವೋಟು ಹಾಕಬೇಡಿ ಎಂದು ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ನಡೆಸುತ್ತಿರುವ ರೈತ ಸಂಘದ ಕಾರ್ಯಕರ್ತರು ಇಂದು ನಂಜೇದೇವನಪುರಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಬಿಜೆಪಿಗೆ ವೋಟು ಹಾಕಬೇಡಿ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಗ್ರಾಮಸ್ಥರು, 'ಮೋದಿಗೆ ಓಟ್ ಹಾಕ್ಬೇಡ ಅನ್ನೋದಕ್ಕೆ ನೀನು ಯಾವನಯ್ಯ? ಹೋಗಿ ಮಣ್ಣು ತಿನ್ನು ನಾನು ಮೋದಿಗೇನೆ ಓಟು ಹಾಕೋದು' ಎಂದು ಗದರಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕಾರ್ಯಕರ್ತರು. ಮೋದಿಗೆ ಓಟು ಹಾಕಿದರೆ ದೇಶ ಏನಾಗುತ್ತಾ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ, ಅದಕ್ಕೆ ಗ್ರಾಮಸ್ಥರು, 'ಜಾಸ್ತಿ ಮಾತಾಡಬೇಡ, ಹೋಗ್ತಾ ಇರು, ನಾವು ಮೋದಿಗೆನೇ ಓಟು ಹಾಕೋದು ಇಲ್ಲಿಂದ ಜಾಗ ಖಾಲಿ ಮಾಡಿ ಅಂತಾ ವಾರ್ನಿಂಗ್ ಮಾಡಿದ್ದಾರೆ.

Tap to resize

Latest Videos

undefined

ದೇಶವನ್ನ ಉಳಿಸುವ ಒಬ್ಬನೇ ಒಬ್ಬ ವ್ಯಕ್ತಿಯೆಂದರೆ ಅದು ಮೋದಿ: ಎಚ್‌ಡಿ ದೇವೇಗೌಡ

ಮಾತಿಗೆ ಮಾತು ಬೆಳೆದು ಗ್ರಾಮಸ್ಥರು ರೊಚ್ಚಿಗೆಳುವ ಮುನ್ನ ರೈತ ಸಂಘದ ಕಾರ್ಯಕರ್ತರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಗ್ರಾಮದಿಂದ ವಾಪಸ್ ಹೋಗಿದ್ದಾರೆ.

click me!