ದೇವೇಗೌಡರನ್ನ ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ: ಸಿಎಂ ಸಿದ್ದರಾಮಯ್ಯ

By Suvarna NewsFirst Published Apr 22, 2024, 9:08 PM IST
Highlights

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಏನಾದರೂ ಪ್ರಧಾನಿ ಮಂತ್ರಿ ಅಭ್ಯರ್ಥಿ ಅಂತಾ ಪ್ರೊಜೆಕ್ಟ್ ಮಾಡಿದ್ದಾರೆಯೇ? ಅವರು ಆಕಸ್ಮಿಕವಾಗಿ ಪ್ರಧಾನಮಂತ್ರಿಯಾಗಿದ್ದು, ನಾನು ಆ ಸಂದರ್ಭದಲ್ಲಿ ದೇವೇಗೌಡರ ಜತೆ ಇದ್ದೆ. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷವೆಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಳಿ ನಡೆಸಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.22) : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಏನಾದರೂ ಪ್ರಧಾನಿ ಮಂತ್ರಿ ಅಭ್ಯರ್ಥಿ ಅಂತಾ ಪ್ರೊಜೆಕ್ಟ್ ಮಾಡಿದ್ದಾರೆಯೇ? ಅವರು ಆಕಸ್ಮಿಕವಾಗಿ ಪ್ರಧಾನಮಂತ್ರಿಯಾಗಿದ್ದು, ನಾನು ಆ ಸಂದರ್ಭದಲ್ಲಿ ದೇವೇಗೌಡರ ಜತೆ ಇದ್ದೆ. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷವೆಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಳಿ ನಡೆಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ  ಪಟ್ಟಣದಲ್ಲಿ ಇಂದು ಪ್ರಜಾಧ್ವನಿ _2 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಯಾದ  INDIA ನಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ  ದೇವೇಗೌಡರನ್ನು ನಾವು ಮುಂದಿನ ಪ್ರಧಾನ ಮಂತ್ರಿ ಅಂತ ಆಗ ನಾವು ಪ್ರಾಜೆಕ್ಟ್ ಮಾಡಿದ್ವಾ, ಕಾಂಗ್ರೆಸ್  ಬೆಂಬಲದಿಂದಲೇ ಪ್ರಧಾನಮಂತ್ರಿಯಾಗಿದ್ದು, ನಾನು ದೇವೇಗೌಡರು ಒಟ್ಟಿಗೆ ಇರಲಿಲ್ಲವೇ ಎಂದು ಪ್ರಶ್ನಿಸಿ, ಕಾಂಗ್ರೆಸ್ ಬೆಂಬಲದಿಂದ ಪ್ರಧಾನಿಯಾಗಿದ್ದು, ಎಂಬುದನ್ನು ಮರೆಯಬಾರದು ಎಂದರು.ಇತಿಹಾಸ ತಿಳಿದುಕೊಳ್ಳಬೇಕು, INDIA ನಲ್ಲಿ ಬಹಳಷ್ಟು ಜನ ಪ್ರಧಾನಮಂತ್ರಿ ಅಭ್ಯರ್ಥಿಗಳಿದ್ದಾರೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇಲ್ವಾ ಎಂದು ದೇವೇಗೌಡರ ವಾಗ್ದಳಿ ನಡೆಸಿದರು. 

ದೇಶವನ್ನ ಉಳಿಸುವ ಒಬ್ಬನೇ ಒಬ್ಬ ವ್ಯಕ್ತಿಯೆಂದರೆ ಅದು ಮೋದಿ: ಎಚ್‌ಡಿ ದೇವೇಗೌಡ

ಕಾವೇರಿ ವಿವಾದ ಸಂಬಂಧ ಹೆಚ್‌ಡಿಡಿ ಕುಟುಂಬದ ಪಾತ್ರವೇನು 
ಬಿಜೆಪಿಯವರು ಸಮಾಜ ಒಡೆಯುವ ಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ನಾವು ಭಾರತ್ ಜೋಡೋಯಾತ್ರೆ ಮಾಡಿದ್ದು ದೇಶದಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಿದವರು ಯಾರು? ಕಾವೇರಿ ವಿವಾದ ಸಂಬಂಧ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಪಾತ್ರವೇನು? ಅವರು ಏನು ಮಾಡಿದ್ದಾರೆಂದು ಪ್ರಶ್ನಿಸಿದರು.ಪ್ರಧಾನಮಂತ್ರಿ ಕೆಲಸವೇ ದೇಶ ಕಾಯುವುದು, ದೇಶ ರಕ್ಷಣೆ ಮಾಡುವುದು. ಇಂದಿರಾಗಾಂಧಿ, ನೆಹರು, ರಾಜೀವ್ಗಾಂಧಿ, ನರಸಿಂಹರಾವ್ ದೇಶರಕ್ಷಣೆ ಮಾಡುವ ಕೆಲಸ ಮಾಡಲಿಲ್ಲವೇ ಇವರು ಮಾತ್ರ ಮಾಡುತ್ತಿರುವುದೇ ಎಂದು ಕೇಳಿದರು.

ಬಿಜೆಪಿಯವರಿಗೆ ರಾಜಕೀಯ ಮಾಡಲು ಒಂದು ಹೆಣ ಬೇಕು; ಹಳದಿಪುರದಲ್ಲಿ ನಾಲಗೆ ಹರಿಬಿಟ್ಟ ಸಚಿವ ಮಾಂಕಾಳು ವೈದ್ಯ!

ಗ್ಯಾರಂಟಿ ಯೋಜನೆಗಳು ಚಿಪ್ಪೇ?:

ರಾಜ್ಯ ಸರ್ಕಾರದ ವಿರುದ್ಧ ಚಿಪ್ಪು ಜಾಹೀರಾತು ಕೊಡುತ್ತೇವೆಂಬ ಮಾಜಿ ಸಚಿವ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಕೊಟ್ಟ ಮೇಲೆ ಅವರು ಯೋಚನೆ ಮಾಡುತ್ತಿರುವುದು ಬೇರೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಚೊಂಬು ಕೊಟ್ಟರು ಎಂದು ನಾವು ಹೇಳಿದ ಮೇಲೆ ಅವರು ಈ ಚಿಪ್ಪು ಕೊಡುವ ಬಗ್ಗೆ ಹೇಳುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಎರಡು ಸಾವಿರ ರೂ. ಕೊಡುತ್ತಿದ್ದೇವೆ ಅದು ಚಿಪ್ಪೇ? ಹೆಣ್ಣುಮಕ್ಕಳು ಬಸ್ನಲ್ಲಿ ಉಚಿತವಾಗಿ ಓಡಾಡುತ್ತಿದ್ದರಲ್ಲ ಅದು ಚಿಪ್ಪೇ? ಎಲ್ಲರಿಗೂ ಉಚಿತ ವಿದ್ಯುತ್ ಕೊಡುತ್ತಿರುವುದು ಚಿಪ್ಪೇ? ಯುವ ನಿಧಿಯಡಿಯಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಹಣ ನೀಡುತ್ತಿರುವುದು ಚಿಪ್ಪೇ ? ಎಂದು ಪ್ರಶ್ನಸಿ ಬಿಜೆಪಿ ವಿರುದ್ದ ಹರಿಹಾಯ್ದರು.

click me!