ಗೀತಾ ಶಿವರಾಜಕುಮಾರ್ ಬಳಿ ಇರುವ ಒಟ್ಟು ಆಸ್ತಿ ಇಷ್ಟೊಂದಾ?: ಅಫಿಡವಿಟ್‌ನಲ್ಲಿ ಕೊಟ್ಟ ಮಾಹಿತಿಯಲ್ಲಿ ಏನೇನಿದೆ?

By Govindaraj SFirst Published Apr 15, 2024, 9:20 PM IST
Highlights

ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಶಿವರಾಜ್‌ ಕುಮಾರ್‌ ಪತ್ನಿ, ಮಾಜಿ ಸಿಎಂ ದಿ. ಎಸ್‌. ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. 

ಶಿವಮೊಗ್ಗ (ಏ.15): ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಶಿವರಾಜ್‌ ಕುಮಾರ್‌ ಪತ್ನಿ, ಮಾಜಿ ಸಿಎಂ ದಿ. ಎಸ್‌. ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಬರೋಬ್ಬರಿ 40 ಕೋಟಿ 04 ಲಕ್ಷದ 36 ಸಾವಿರದ 321 ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಪತಿ ಶಿವರಾಜ್ ಕುಮಾರ್ ಹೆಸರಿನಲ್ಲಿ 49 ಕೋಟಿ 82 ಸಾವಿರದ 893 ರೂ. ಆಸ್ತಿ ಇರುವುದಾಗಿ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಒಟ್ಟಾರೆ ಪತಿ-ಪತ್ನಿ ಬಳಿ 89.04 ಕೋಟಿ ರೂ. ಆಸ್ತಿ ಇರುವುದಾಗಿ ಹೇಳಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಕೈಯಲ್ಲಿರುವ ನಗದು 3 ಲಕ್ಷ ಇದ್ದು, ಶಿವರಾಜ್ ಕುಮಾರ್ ಹೆಸರಿನಲ್ಲಿರುವ ನಗದು 22 ಲಕ್ಷದ 58 ಸಾವಿರದ 338 ಇದೆ. ಗೀತಾ ಹೆಸರಿನಲ್ಲಿ ಸಾಲ 7 ಕೋಟಿ 14 ಲಕ್ಷದ 95 ಸಾವಿರ, ಶಿವರಾಜ್ ಕುಮಾರ್ ಹೆಸರಿನಲ್ಲಿ ಸಾಲ 17 ಕೋಟಿ 01 ಲಕ್ಷದ 12 ಸಾವಿರ, ಗೀತಾ ಹೆಸರಿನಲ್ಲಿ ಚಿನ್ನಾಭರಣ 11, 542 ಗ್ರಾಂ ಚಿನ್ನಾಭರಣ ಮೌಲ್ಯ 3 ಕೋಟಿ 50 ಲಕ್ಷ, 30 ಕೆಜಿ ಬೆಳ್ಳಿ ಮೌಲ್ಯ 3 ಲಕ್ಷದ 40 ಸಾವಿರ, ಗೀತಾ ಹೆಸರಿನಲ್ಲಿ ಟಯೋಟೋ ಹೈಬ್ರೀಡ್ ಕಾರು ಮೌಲ್ಯ 1 ಕೋಟಿ 07 ಲಕ್ಷ. ಅಲ್ಲದೇ ಶಿವರಾಜ್ ಕುಮಾರ್ ಹೆಸರಿನಲ್ಲಿ ಟೊಯೋಟಾ ಫಾರ್ಚುನರ್ ಕಾರು, ಮಾರುತಿ ಎರಿಟಿಗಾ, ವೊಲ್ವೋ ಕಾರು ಒಟ್ಟು ಮೌಲ್ಯ 87 ಲಕ್ಷದ 70 ಸಾವಿರ ಇದೆ.

ಚುನಾವಣಾ ಕಣ ದಿನೇ ದಿನೇ ರಂಗು: ಬಿಸಿಲಿನ ಧಗೆ, ಮುಂಜಾನೆ ಪ್ರಚಾರದ ಮೊರೆ ಹೋದ ಅಭ್ಯರ್ಥಿಗಳು!

ಗೀತಾ ಹೆಸರಿನಲ್ಲಿ ಕನಕಪುರ ಬಳಿ 05 ಎಕರೆ 05 ಗುಂಟೆ ಕೃಷಿ ಭೂಮಿ ಇದ್ದು, ಶಿವರಾಜ್ ಕುಮಾರ್ ಹೆಸರಿನಲ್ಲಿ ಬೆಂಗಳೂರಿನ ಕೋರಮಂಗಲ ಬಳಿ 03 ಎಕರೆ 26 ಗುಂಟೆ ಜಮೀನಿದೆ. ಶಿವರಾಜ್ ಕುಮಾರ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಾಸದ ಮನೆ ಕೂಡಾ ಇದೆ. ಗೀತಾ ಶಿವರಾಜ್ ಕುಮಾರ್ ಹೆಸರಿನಲ್ಲಿ ಸಾಲ 07 ಕೋಟಿ 14 ಲಕ್ಷ ಇದ್ದು, ಶಿವರಾಜ್ ಕುಮಾರ್ ಹೆಸರಿನಲ್ಲಿ ಸಾಲ 17 ಕೋಟಿ 01 ಲಕ್ಷ ಇದೆ. ಗೀತಾ ಶಿವರಾಜ್ ಕುಮಾರ್ ಹೆಸರಿನಲ್ಲಿ 05 ಕೋಟಿ 54 ಲಕ್ಷದ ಚರಾಸ್ಥಿಯಿದ್ದು, ಶಿವರಾಜ್ ಕುಮಾರ್ ಹೆಸರಿನಲ್ಲಿ 18 ಕೋಟಿ 82 ಲಕ್ಷದ  ಚರಾಸ್ಥಿಯಿದೆ. ಗೀತಾ ಶಿವರಾಜ್ ಕುಮಾರ್ ಹೆಸರಿನಲ್ಲಿ ಸ್ಥಿರಾಸ್ಥಿ 5 ಕೋಟಿ 92 ಲಕ್ಷ ಇದ್ದು, ಶಿವರಾಜ್ ಕುಮಾರ್ ಹೆಸರಿನಲ್ಲಿ ಸ್ಥಿರಾಸ್ಥಿ 4 ಕೋಟಿ 37 ಲಕ್ಷ ಇದೆ.

click me!