ಸಿಎಂ, ಡಿಸಿಎಂ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ: ಆರ್.ಅಶೋಕ್

By Govindaraj S  |  First Published Jun 4, 2024, 4:34 PM IST

ಸಿಎಂ ಡಿಸಿಎಂ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ. ಕರ್ನಾಟಕದ ರಿಸಲ್ಟ್ ಅನ್ನು ತುಂಬು ಹೃದಯದಿಂದ ಸ್ವಾಗತ ಮಾಡ್ತೀವಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.


ಬೆಂಗಳೂರು (ಜೂ.04): ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ. ಕರ್ನಾಟಕದ ರಿಸಲ್ಟ್ ಅನ್ನು ತುಂಬು ಹೃದಯದಿಂದ ಸ್ವಾಗತ ಮಾಡ್ತೀವಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು. ಡಿ.ಕೆ.ಶಿವಕುಮಾರ್ ಅವರ ಸ್ವಂತ ತಮ್ಮನೇ ಸೋತಿದಾರೆ. ಮೈಸೂರಲ್ಲಿ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಸೋಲಾಗಿದೆ. ಇಬ್ಬರೂ ಸೋಲು ಒಪ್ಕೋಬೇಕು. ರಾಜ್ಯದಲ್ಲಿ ಈ ಸರ್ಕಾರದ ವಿರುದ್ಧವಾದ ಅಲೆ ಇದೆ. ಒಂದು ವರ್ಷದ ಆಡಳಿತ ಶೂನ್ಯ. ಭ್ರಷ್ಟಾಚಾರ ಉತ್ತೇಜನ ಮಾಡ್ತಿದಾರೆ. ಮುಸ್ಲಿಂ ಓಲೈಕೆ ಮಾಡೋದು. ಇವೆಲ್ಲದರ ವಿರುದ್ಧ ಕಾಂಗ್ರೆಸ್ ವಿರೋಧಿ ಅಲೆ ಎದ್ದಿದೆ ಎಂದರು.

ನಾವು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ಬೇಕು ಎಂದು ನಾಲ್ನೂರು ಪ್ಲಸ್ ಸೀಟ್ ಗೆಲ್ಬೇಕು ಅಂತ ಅಜೆಂಡಾ ರೂಪಿಸಿದ್ದೇವು. ಒಂದು ಪಾಸಾಗಿದ್ದೇವೆ, ಒಂದು ಫೇಲಾಗಿದ್ದೇವೆ. ವಾಜಪೇಯಿ ಅವರ ಕಾಲದಿಂದಲೂ ನಾವು 16-19 ಗೆಲ್ತಿದ್ವಿ. ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಫೇಲ್ ಅಗಿತ್ತು. ನಾವು ಹೊಂದಾಣಿಕೆ ಮಾಡಿಕೊಂಡಿದ್ದು ನಮಗೆ ಪ್ಲಸ್ ಆಗಿದೆ. ನಮ್ಮ ಪಕ್ಷದಲ್ಲೇ ಸ್ವಲ್ಪ ಗೊಂದಲ ಆಗಿತ್ತು. ಸ್ಥಳೀಯ ನಾಯಕರ ಜೊತೆ ಹೊಂದಾಣಿಕೆ ಕೊರತೆ ಇತ್ತು. ಹಾಗಾಗಿ ಕಡಿಮೆ ಸೀಟು ಬಂದಿದೆ ಎಂದು ಅಶೋಕ್ ತಿಳಿಸಿದರು.

Latest Videos

undefined

ಡಿ.ಕೆ.ಸುರೇಶ್‌ ಸೋಲು ಅಘಾತ ತಂದಿದೆ: ಆಪರೇಶನ್ ಹಸ್ತದ ಮುನ್ಸೂಚನೆ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ

ಮತದಾರ ದೇವರುಗಳ ಋಣದಲ್ಲಿ ನಾನಿದ್ದೇನೆ: ಬಹಳ ಖುಷಿ ಆಗುತ್ತಿದೆ, ಗ್ರಾಮಾಂತರದಲ್ಲಿ ಗೆದ್ದಿದ್ದೇವೆ. 3 ಲಕ್ಷ ಲೀಡ್‌ನಲ್ಲಿ ಒಂದು ಲಕ್ಷ ನಮ್ಮ ಕ್ಷೇತ್ರದಿಂದ ಬಂದಿದೆ. ಮುಂದಿನ ದಿನಗಳಲ್ಲಿ ಮಂಜುನಾಥ್ ಅವರ ಜೊತೆಗೂಡಿ ಕೆಲಸ ಮಾಡುತ್ತೇನೆ. RR ನಗರದ ಮತದಾರ ದೇವರುಗಳ ಋಣದಲ್ಲಿ ನಾನಿದ್ದೇನೆ ಎಂದು RR ನಗರ ಶಾಸಕ ಮುನಿರತ್ನ ಹೇಳಿದ್ದಾರೆ.

ನಾಗೇಂದ್ರ ರಾಜೀನಾಮೆವರೆಗೂ ಹೋರಾಟ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಡಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುವವರೆಗೆ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ದಲಿತರ 187 ಕೋಟಿ ರು. ಹಣವನ್ನು ನುಂಗಿ ನೀರು ಕುಡಿದಿದೆ. ಸಿದ್ದರಾಮಯ್ಯ ಅವರು ಸಚಿವರ ರಾಜೀನಾಮೆ ಪಡೆಯದೆ ಭಂಡತನ ಮೆರೆಯುತ್ತಿದ್ದಾರೆ ಎಂದು ಟೀಕಿಸಿದರು.

ಲೋಕ ಕದನದಲ್ಲಿ ಜಾರಕಿಹೊಳಿ ಬ್ರದರ್ಸ್ ಸಕ್ಸಸ್: ಹೊಸ ಇತಿಹಾಸ ನಿರ್ಮಿಸಿದ ಶೆಟ್ಟರ್; ಸಂಸತ್ ಪ್ರವೇಶಿಸಿದ ಪ್ರಿಯಂಕಾ

ಮತ್ತೆ ಮೋದಿ ಪ್ರಧಾನಿ ಆಗಲಿದ್ದು, ಆಮೇಲೆ ತೀರ್ಮಾನ ಮಾಡೋಣ ಎಂದು ಕಾಂಗ್ರೆಸ್ಸಿಗರು ಕಾಯುತ್ತಿದ್ದಾರೆ. ಕಳ್ಳ- ಖದೀಮರಾದ ಕಾಂಗ್ರೆಸ್ಸಿಗರು ಒಂದು ದಿನದ ಹೋರಾಟಕ್ಕೆ ಬಗ್ಗುವುದಿಲ್ಲ. ಆದ್ದರಿಂದ ರಾಜ್ಯಪಾಲರ ಭೇಟಿ, ಶಾಸಕರಿಂದ ಗಾಂಧಿ ಪ್ರತಿಮೆ ಎದುರು ಹೋರಾಟ, ಜಿಲ್ಲೆ, ಜಿಲ್ಲೆಗಳಲ್ಲಿ ಹೋರಾಟ ಮಾಡುವ ಕುರಿತು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

click me!