
ಕಲಬುರಗಿ (ಜೂ.04): ನಮ್ಮ ಸರಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಿದ್ದೇವೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನೀಲಿನಕ್ಷೆ ರೂಪಿಸಿದ್ದೇವೆ. ನಾವು ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದೇವೆ. ನಾವು ಜಾತಿ, ದೇವರು, ಧರ್ಮದ ಹೆಸರಿನಲ್ಲಿ ಚುನಾವಣೆ ಮಾಡಿಲ್ಲ ಇದನ್ನು ನೋಡಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಐದಕ್ಕೆ ಐದು ಸ್ಥಾನ ಗೆದ್ದಿರುವುದು ಸಂತೋಷ ತಂದಿದೆ. ರಾಜ್ಯದಲ್ಲಿ ಇನ್ನಷ್ಟು ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು ಆದರೆ ಆಗಿಲ್ಲ. ಏಕೆಂದು ಸಮಾಲೋಚನೆ ಮಾಡುತ್ತೇವೆ ಎಂದರು. ಹೋದ ಬಾರಿಯಂತೆ ನಾಲ್ಕು ಲಕ್ಷ, ಮೂರು ಲಕ್ಷ ಅಂತರದಿಂದ ಬಿಜೆಪಿಯವರು ಗೆಲ್ಲಲು ಸಾಧ್ಯವಾಗಿಲ್ಲ. ಜೆಡಿಎಸ್ ಬಿಜೆಪಿ ಮೈತ್ರಿಯಿಂದಾಗಿ ನಮಗೆ ಹಿನ್ನಡೆ ಆಗಿರಬಹುದು ಅಂತ ಮೇಲ್ನೋಟಕ್ಕೆ ಅನ್ನಿಸುತ್ತೆ. ಆದರೆ ಜೆಡಿಎಸ್ ನವರು ಒಂದು ಸ್ಥಾನ ಕಳೆದುಕೊಂಡಿದ್ದಾರೆ, ಬಿಜೆಪಿಯವರು ಹಲವಾರು ಕಳೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ ಸೋಲು ಅಘಾತ ತಂದಿದೆ.
ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಹೆಟ್ ಮಾಡಿದಂತೆ ಈ ಬಾರಿ ಬಿಜೆಪಿಯವರು ಡಿಕೆ ಸುರೇಶ ಅವರನ್ನು ಟಾರ್ಗೆಟ್ ಮಾಡಿದ್ರು. ಖರ್ಗೆ ಅವರನ್ನು ಕಳೆದುಕೊಂಡು ಕಲಬುರಗಿ ಅಭಿವೃದ್ಧಿ ಕಾಣದಂತೆ ಆಯಿತೋ ಅದೇ ರೀತಿ ಬೆಂಗಳೂರು ಗ್ರಾಮಾಂತರ ಜನರೂ ಅನುಭವಿಸ್ತಾರೆ ಎಂದು ಹೇಳಿದರು. ದೇಶದಲ್ಲಿ 295 ಸ್ಥಾನ ಗೆಲ್ಲುವ ನಿರೀಕ್ಷೆ ಹುಸಿಯಾಗಿರುವ ಬಗ್ಗೆ ಮಾತನಾಡಿದ ಅವರು, ಜನ ನಮ್ಮ ನಿರೀಕ್ಷೆಯಂತೆ ಕೈ ಹಿಡಿಲಿಕ್ಕಿಲ್ಲ ಆದ್ರೆ ಬಿಜೆಪಿಯವರಿಗೂ ಜನ ಕೈ ಹಿಡಿದಿಲ್ಲ. ಅವರು ಚಾರಸೋ ಪಾರ್ ಅಂತಿದ್ರು..ಅಷ್ಟು ಆಗಿಲ್ಲ ಅಂದ್ರೆ ಜನ ಅವರಿಗೂ ಕೈ ಹಿಡಿದಿಲ್ಲ.
ಲೋಕ ಕದನದಲ್ಲಿ ಜಾರಕಿಹೊಳಿ ಬ್ರದರ್ಸ್ ಸಕ್ಸಸ್: ಹೊಸ ಇತಿಹಾಸ ನಿರ್ಮಿಸಿದ ಶೆಟ್ಟರ್; ಸಂಸತ್ ಪ್ರವೇಶಿಸಿದ ಪ್ರಿಯಂಕಾ
ಕೇಂದ್ರದಲ್ಲಿ ಅಧಿಕಾರ ಹಿಡಿಯಲು ನಾವು ಖಂಡಿತ ಪ್ರಯತ್ನ ಮಾಡ್ತಿವಿ, ನಾವು ಚುನಾವಣೆ ನಡೆಸುವುದೇ ಅಧಿಕಾರಕ್ಕೆ ಬರುವುದಕ್ಕೋಸ್ಕರ. ಅಧಿಕಾರ ಪಡೆಯುವುದು ಜನ ಸೇವೆ ಮಾಡಲು ಸಂವಿಧಾನ ಉಳಿಸಲು ಹಾಗಾಗಿ ನಾವು ಅಧಿಲಾರಕ್ಕೆ ಬರಲು ಏನೇನು ಮಾಡಬೇಕೋ ಮಾಡ್ತಿವಿ. ನಮ್ಮ ಹಳೆಯ ಸ್ನೇಹಿತರ ಭೇಟಿ ಮಾಡ್ತಿವಿ, ಅವರೂ ನಮ್ಮ ಜೊತೆ ಬರಬಹುದು ಬಿಜೆಪಿಯವರೂ ನಮ್ಮ ಜೊತೆ ಬರಬಹುದು. ಕಾದು ನೋಡೋಣ ಏನೇನಾಗುತ್ತೇ ಅಂತ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಆಪರೇಶನ್ ಹಸ್ತದ ಮುನ್ಸೂಚನೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.