ರುಚಿಯಿದ್ದ 2 ವಡೆ ತಿಂದಿದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಎದೆನೋವು ಕಾಣಿಸಿಕೊಂಡಿತು: ಸಚಿವ ಜಮೀರ್ ಅಹ್ಮದ್

By Govindaraj SFirst Published Apr 15, 2024, 9:36 PM IST
Highlights

ಬೆಳಗ್ಗೆ ಬೆಂಗಳೂರಿನಿಂದ ತುಮಕೂರಿಗೆ ಬಂದಿದ್ದೆನು, ಮಾಜಿ ಶಾಸಕ ರಫೀಕ್ ಮನೆಯಲ್ಲಿ ರುಚಿಯಿದ್ದ ಎರಡು ಒಡೆ ತಿಂದೆನು. ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ನೋವು ಕಾಣಿಸಿಕೊಂಡಿತು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರು, ಕಾರ್ಯಕರ್ತರ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. 
 

ಚಿತ್ರದುರ್ಗ (ಏ.15): ಬೆಳಗ್ಗೆ ಬೆಂಗಳೂರಿನಿಂದ ತುಮಕೂರಿಗೆ ಬಂದಿದ್ದೆನು, ಮಾಜಿ ಶಾಸಕ ರಫೀಕ್ ಮನೆಯಲ್ಲಿ ರುಚಿಯಿದ್ದ ಎರಡು ವಡೆ ತಿಂದೆನು. ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ನೋವು ಕಾಣಿಸಿಕೊಂಡಿತು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರು, ಕಾರ್ಯಕರ್ತರ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. ನಂತರ ಮಾತನಾಡಿದ ಅವರು, ನಾನು ಕಾರ್ಯಕ್ರಮಕ್ಕೆ ಹೋಗೋಣ ಎಂದು ಹೇಳಿದೆನು. ಆದರೆ ಜತೆಗಿದ್ದವರು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಹೋಗೋಣ ಎಂದರು. ಬಸವೇಶ್ವರ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಯಿತು. ಅಷ್ಟರಲ್ಲೇ ಟಿವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಬಂತು. ಜನರ ಆಶೀರ್ವಾದದಿಂದ ಜಮೀರ್‌ಗೆ ಏನೂ ಆಗಲ್ಲ ಎಂದರು.

ನಾನು ಮೊದಲು ಹಿಂದೂಸ್ತಾನಿ, ಕನ್ನಡಿಗ ಆಮೇಲೆ ಮುಸ್ಲಿಂ, ಸಮಯ ಅಭಾವದಿಂದ ಕನ್ನಡ ಬದಲು ಹಿಂದಿಯಲ್ಲಿ ಮಾತನಾಡುತ್ತೇನೆ. ಜೈ ಭೀಮ್ ಎಂದು ಘೋಷಣೆ ಕೂಗಿದರು. ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರು, ದಲಿತರ ಕಂಟಕ, ಕಾಂಗ್ರೆಸ್ ಆಡಳಿತ ಎಲ್ಲವನ್ನೂ ನೀಡಿದೆ ಎಂದು ನಾನು ಹೇಳಲ್ಲ. ನಮ್ಮ ಆಡಳಿತದಲ್ಲಿ ಶಾಂತಿ ಸುಖ ನೆಲೆಸಿದೆ. ಬಿಜೆಪಿ ಆಡಳಿತದಲ್ಲಿ ಹಿಂದೂ ಮುಸ್ಲಿಂ ಸಂಘರ್ಷ ಸೃಷ್ಠಿಯಾಗಿದ್ದು, ನಮ್ಮ ಇಸ್ಲಾಂನಲ್ಲಿ ಜಾತಿ ಬೇಧ ಹೇಳಿಕೊಟ್ಟಿಲ್ಲ. ಸಾರೇ ಜಂಹಾಸೇ ಅಚ್ಛಾ ಹಿಂದೂಸ್ತಾನ್ ಹಮಾರಾ ಎಂದು ಜಮೀರ್ ಹೇಳಿದರು.

ರಾಜ್ಯ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. 2013ರಲ್ಲಿ ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಮನೆಗಳನ್ನು ಕೊಟ್ಟಿದ್ದೆವು. ಬಳಿಕ ಬಂದ ಹೆಚ್ ಡಿಕೆ, ಬಿಎಸ್ ವೈ, ಬೊಮ್ಮಾಯಿ ಸರ್ಕಾರ 1 ಮನೆಯೂ ಕೊಟ್ಟಿಲ್ಲ. ಈಗ ನಮ್ಮ ಸರ್ಕಾರ ಬಂದ ಬಳಿಕ 36.780ಮನೆ ಮಂಜೂರಾಗಿದೆ. ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಆವಾಜ್ ಯೋಜನೆಗೆ 1 ಲಕ್ಷ 50 ಸಾವಿರ ರೂ.‌ ಗೃಹ ನಿರ್ಮಾಣಕ್ಕೆ ಕೊಡುತ್ತಾರೆ. ಜಿಎಸ್ಟಿ ಹಾಕಿ 1ಲಕ್ಷ 38 ಸಾವಿರ ವಾಪಸ್ ಕಿತ್ತುಕೊಳ್ತಾರೆ. ಕೇವಲ 12ಸಾವಿರ ರೂಪಾಯಿ ಮಾತ್ರ ಕೊಡುತ್ತಾರೆಂದು ಆರೋಪ ಮಾಡಿದರು.ಜೊತೆಗೆ 3 ಸಾವಿರ150 ಕೋಟಿ ಅಲ್ಪಸಂಖ್ಯಾತರಿಗೆ ನಮ್ಮ ಸರ್ಕಾರ ಅನುದಾನ ನೀಡಿದೆ ಎಂದರು.

ಗೀತಾ ಶಿವರಾಜಕುಮಾರ್ ಬಳಿ ಇರುವ ಒಟ್ಟು ಆಸ್ತಿ ಇಷ್ಟೊಂದಾ?: ಅಫಿಡವಿಟ್‌ನಲ್ಲಿ ಕೊಟ್ಟ ಮಾಹಿತಿಯಲ್ಲಿ ಏನೇನಿದೆ?

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮುಸ್ಲಿಂ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡುತ್ತಿದ್ದರು. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ‌ ಬಂದ ಬಳಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನಿಲ್ಲಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ಸ್ಕಾಲರ್ ಶಿಪ್ ನೀಡುತ್ತಿದ್ದೇವೆ. ಭಾಯಿಯೋ ಔರ್ ಬಹೆನೋ ಎಂದು ಮೋದಿ ಭಾಷಣದ ಮಿಮಿಕ್ರಿ ಮಾಡಿದರು. ಅಚ್ಚೇದಿನ್, ಬೆಲೆ ಏರಿಕೆ, ಕಪ್ಪು ಹಣ ವಾಪಸ್, 15ಲಕ್ಷ ಹಾಕುವುದಾಗಿ ಹೇಳಿದ್ರು. ಯಾವುದೂ ಭರವಸೆಯನ್ನು ಮೋದಿ ಈಡೇರಿಸಿಲ್ಲ. ರೈಲ್ವೆ ಸ್ಟೇಷನ್‌ನಲ್ಲಿ ಚಹಾ ಮಾರುವ ವ್ಯಕ್ತಿ ಲಕ್ಷಾಂತರ ಮೌಲ್ಯದ ಸೂಟ್ ಬೂಟ್ ಧರಿಸಿ ಓಡಾಡುತ್ತಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಿ ವ್ಯಂಗ್ಯ ಮಾಡಿದರಲ್ಲದೇ ಕಿಸ್ ಕಾ ಸಾಥ್‌ ಕಿಸ್ ಕಾ ವಿಕಾಸ್ ಎಂದು ಪ್ರಶ್ನೆ ಮಾಡಿದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪಗೆ ಮತ ನೀಡುವಂತೆ ಜಮೀರ್ ಮನವಿ ಮಾಡಿದರು.

click me!