ಬಿಎಸ್‌ವೈ ವಿರುದ್ಧ ಹಗುರ ಮಾತಾಡುವುದು ನಿಲ್ಲಿಸಲಿ; ಕೆಎಸ್ ಈಶ್ವರಪ್ಪ ವಿರುದ್ಧ ಶಾಸಕ ಚನ್ನಬಸಪ್ಪ ಕಿಡಿ

By Ravi Janekal  |  First Published Mar 31, 2024, 10:15 PM IST

ಶಿವಮೊಗ್ಗದಲ್ಲಿ ಸಂಘಟನೆ ಶಕ್ತಿ ಆಧಾರದ ಮೇಲೆ ಗೆದ್ದಿದ್ದೇವೆ. ಇದನ್ನು ಯಾರೂ ಈ ಜನ್ಮದಲ್ಲಿ ಮರೆಯಬಾರದು. ಪಾರ್ಟಿ ಬಿಟ್ಟು ಸೋತು ಹೋದ ಮೇಲೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಮಾಜಿ ಎಂಎಲ್ಸಿ ಅಯನೂರು ಮಂಜುನಾಥ್ ವಿರುದ್ಧ ಶಾಸಕ ಚನ್ನಬಸಪ್ಪ ವಾಗ್ದಾಳಿ ನಡೆಸಿದರು.


ಶಿವಮೊಗ್ಗ (ಮಾ.31): ಶಿವಮೊಗ್ಗದಲ್ಲಿ ಸಂಘಟನೆ ಶಕ್ತಿ ಆಧಾರದ ಮೇಲೆ ಗೆದ್ದಿದ್ದೇವೆ. ಇದನ್ನು ಯಾರೂ ಈ ಜನ್ಮದಲ್ಲಿ ಮರೆಯಬಾರದು. ಪಾರ್ಟಿ ಬಿಟ್ಟು ಸೋತು ಹೋದ ಮೇಲೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಮಾಜಿ ಎಂಎಲ್ಸಿ ಅಯನೂರು ಮಂಜುನಾಥ್ ವಿರುದ್ಧ ಶಾಸಕ ಚನ್ನಬಸಪ್ಪ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ನಡೆದ ಶಿವಮೊಗ್ಗ ನಗರ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಿಂದಲೇ ಗೆದ್ದು, ಅಧಿಕಾರ ಅನುಭವಿಸಿ ಇದೀಗ ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಇವರ ಸವಾಲನ್ನು ಸ್ವೀಕರಿಸಲು ನಾವು ಸಭೆ ಸೇರಿದ್ದೇವೆ. ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಇದನ್ನು ಎದುರಿಸುವ ತಾಕತ್ತು ನಮಗೂ ಇದೆ ಎಂದು ಎಚ್ಚರಿಕೆ ನೀಡಿದರು.

Tap to resize

Latest Videos

undefined

ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ನೇತೃತ್ವದ ಸಮಾವೇಶ!

ಬಿಎಸ್‍ವೈ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಬಿಎಸ್‌ವೈ ಋಣ ಮತ್ತು ಸಂಘಟನೆ ಋಣ ನಿಮ್ಮ ಮೇಲೆ ಇಲ್ಲವಾ? ಕೆಲವರು ಹಿಂದೂ ಹಿಂದೂ ಎಂದು ಮಾತನಾಡ್ತಾರೆ. ಆದರೆ ಹಿಂದುತ್ವದ ಆಧಾರದ ಮೇಲೆ ರಾಷ್ಟ್ರೀಯ ಸ್ವಯಂ ಸ್ವೇವಕ ಸಂಘ ಸ್ಥಾಪನೆಯಾಗಿ ನೂರು ವರ್ಷ ಕಳೆದಿವೆ. ಯಾವುದೋ ಕಾರಣಕ್ಕೆ ಬಿಜೆಪಿ ಸಂಘಟನೆ ಬಗ್ಗೆ, ನಾಯಕರ ಬಗ್ಗೆ ಮಾತನಾಡುವುದಿದ್ದರೆ ಸಹಿಸಿಕೊಳ್ಳುವ ಕಾರ್ಯಕರ್ತರ ಪಡೆ ನಮ್ಮಲ್ಲಿಲ್ಲ. ಏ.18 ರಂದು ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ನಾಮಪತ್ರ ಸಲ್ಲಿಸುತ್ತಾರೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಮತಗಳನ್ನು ಪಡೆದು ಜಿಲ್ಲೆಯಲ್ಲಿ ಅತೀ ಹೆಚ್ಚಿನ ಲೀಡ್ ಕೊಡುತ್ತೇವೆ ಎಂದರು. 

click me!