ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ನೇತೃತ್ವದ ಸಮಾವೇಶ!

By Ravi Janekal  |  First Published Mar 31, 2024, 9:07 PM IST

: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನಲ್ಲಿ ಬಿಜೆಪಿಯ ಬಂಡಾಯ ನಾಯಕ ಕೆಎಸ್ ಈಶ್ವರಪ್ಪ ಅದ್ದೂರಿಯಾಗಿಯೇ ಚುನಾವಣಾ ಡಂಗುರ ಹೊಡೆದಿದ್ದಾರೆ. ಬಿಜೆಪಿ ಅಪ್ಪ ಮಕ್ಕಳ ಪಕ್ಷ ವಾಗುವುದನ್ನು ತಪ್ಪಿಸಲು ಸ್ವತಹ ಮೋದಿ ಹಾಗೂ ಅಮಿತ್ ಶಾ ಮೌನ ಸಮ್ಮತಿ ನೀಡಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ!


ಉಡುಪಿ (ಮಾ.31): ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನಲ್ಲಿ ಬಿಜೆಪಿಯ ಬಂಡಾಯ ನಾಯಕ ಕೆಎಸ್ ಈಶ್ವರಪ್ಪ ಅದ್ದೂರಿಯಾಗಿಯೇ ಚುನಾವಣಾ ಡಂಗುರ ಹೊಡೆದಿದ್ದಾರೆ. ಬಿಜೆಪಿ ಅಪ್ಪ ಮಕ್ಕಳ ಪಕ್ಷ ವಾಗುವುದನ್ನು ತಪ್ಪಿಸಲು ಸ್ವತಹ ಮೋದಿ ಹಾಗೂ ಅಮಿತ್ ಶಾ ಮೌನ ಸಮ್ಮತಿ ನೀಡಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ!

ಶಿವಮೊಗ್ಗ ಜಿಲ್ಲೆಯ ಬಳಿಕ ಇದೀಗ ಉಡುಪಿ ಜಿಲ್ಲೆಗೆ ಕೆ ಎಸ್ ಈಶ್ವರಪ್ಪ ಎಂಟ್ರಿ ಕೊಟ್ಟಿದ್ದಾರೆ. ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಕಳೆದ ಚುನಾವಣೆಯಲ್ಲಿ ಬಿವೈ ರಾಘವೇಂದ್ರಗೆ ಅತಿ ದೊಡ್ಡ ಅಂತರದ ಮತಗಳನ್ನು ಕೊಡುವ ಮೂಲಕ ಗೆಲುವಿಗೆ ಕಾರಣವಾಗಿತ್ತು. ಇದೀಗ ಬಿಜೆಪಿಯ ಭದ್ರಕೋಟೆಗೆ ಕೆಎಸ್ ಈಶ್ವರಪ್ಪ ಹಿಂದುತ್ವದ ಬಾವುಟ ಹಿಡಿದು ಲಗ್ಗೆ ಇಟ್ಟಿದ್ದಾರೆ. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಈಶ್ವರಪ್ಪ ಅಭಿಮಾನಿಗಳು ಸ್ವತಃ ಈಶ್ವರಪ್ಪಗೆ ಅಚ್ಚರಿ ಮೂಡಿಸಿದ್ದಾರೆ. ಹಿಂದುತ್ವದ ಭದ್ರಕೋಟೆಯಲ್ಲಿ ಈ ಬಾರಿ ನನಗೆ ಜಯ ಎಂದು ಈಶ್ವರಪ್ಪ ಭೀಗಿದ್ದಾರೆ. ಬಿಜೆಪಿ ಅಪ್ಪ ಮಕ್ಕಳ ಪಕ್ಷವಾಗುತ್ತಿದೆ. ತನ್ನ ಸ್ಪರ್ಧೆಯ ಬಗ್ಗೆ ಮೌನ ವಹಿಸುವ ಮೂಲಕ ಮೋದಿ ಹಾಗೂ ಅಮಿತ್ ಶಾ ಮೌನ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಪ್ರತಾಪ್ ಸಿಂಹ, ಯತ್ನಾಳ್, ಸಿಟಿ ರವಿ ರಂತಹ ಹಿಂದುತ್ವದ ಕಟ್ಟಾಳುಗಳು ಟೆಲಿಫೋನ್ ಕರೆ ಮೂಲಕ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದುತ್ವದ ಪ್ರತಿನಿಧಿಯಾಗಿ ಈ ಬಾರಿ ಗೆದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರಧಾನಿ ನರೇಂದ್ರ ಮೋದಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

Tap to resize

Latest Videos

undefined

'ನಮ್ಮವರೇ ನಮಗೆ ಸೆಡ್ಡು ಹೊಡೆದಿದ್ದಾರೆ..' ಕೆಎಸ್ ಈಶ್ವರಪ್ಪ ವಿರುದ್ಧ ಮಾಜಿ ಶಾಸಕ ಕಿಡಿ

ಇದೇ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ, ಅಂದು ಹಿಂದುಳಿದ ಯುವಕರನ್ನು ಸಂಘ ಪರಿವಾರಕ್ಕೆ ಸೆಳೆಯುವ ನಿಟ್ಟಿನಲ್ಲಿ ರಾಯಣ್ಣ ಬ್ರಿಗೇಡ್ ಮಾಡಿದಾಗಲು ಯಡಿಯೂರಪ್ಪ ಅಡ್ಡಿಪಡಿಸಿದರು. ಅಮಿತ್ ಶಾ ಗೆ ದೂರು ನೀಡಿದರು. ಇದರಿಂದ ನಾನು ಹಿಂದೆ ಸರಿಯಬೇಕಾಯಿತು. ಇದು ನಾನು ಇಟ್ಟ ತಪ್ಪು ಹೆಜ್ಜೆ ಎಂದು ವಿಷಾದಿಸಿದರು. ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಡಮ್ಮಿ ಕ್ಯಾಂಡಿಡೇಟ್ ಹಾಕುವಂತೆ ಯಡಿಯೂರಪ್ಪ ನೋಡಿಕೊಂಡಿದ್ದಾರೆ. ಇಲ್ಲಿ ಸ್ಪರ್ಧೆ ಏನಿದ್ದರೂ ರಾಘವೇಂದ್ರ ಮತ್ತು ತನ್ನ ನಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ತಾನು ನೀಡಿರುವ ಹೇಳಿಕೆ ಬಗ್ಗೆ ಪ್ರಮಾಣ ಮಾಡಲು ದೇವಸ್ಥಾನಕ್ಕೆ ಬಂದು ಗಂಟೆ ಹೊಡೆಯುವಂತೆ ಸವಾಲ್ ಎಸೆದಿರುವ ರಾಘವೇಂದ್ರ ಗೆ ತಿರುಗೇಟು ನೀಡಿದ ಈಶ್ವರಪ್ಪ. ಈಗಲೂ ನನ್ನ ಹೇಳಿಕೆಗೆ ನಾನು ಬದ್ಧ. ಲಿಂಗಾಯಿತ ಸ್ವಾಮಿಗಳು ಹಾಗೂ ಈ ವೀರಶೈವ ಮಹಿಳೆಯರು ಕಣ್ಣೀರು ಹಾಕುವಂತೆ ಬಿ.ವೈ.ರಾಘವೇಂದ್ರ ನಡೆದುಕೊಂಡಿದ್ದಾರೆ. ಇದನ್ನು ನಾನು ಸವಾಲಾಗಿ ಸ್ವೀಕರಿಸಿ ಬೇಕಿದ್ದರೆ ಅಯೋಧ್ಯೆಗೆ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ನನ್ನ ಮಗ ಕಾಂತೇಶ್ ಗೆ ಟಿಕೆಟ್ ತೆಗೆಸಿಕೊಟ್ಟು , ಗೆಲುವಿಗೆ ಪ್ರಯತ್ನಿಸುವುದಾಗಿ ಹೇಳಿಲ್ಲ ಎಂದು ಯಡಿಯೂರಪ್ಪ ಬಂದು ಪ್ರಮಾಣ ಮಾಡುವರೇ ಎಂದು ಸವಾಲು ಹಾಕಿದ್ದಾರೆ.

'ಇನ್ನೊಬ್ಬರ ಬಳಿ ಹಿಂದೂತ್ವ ಕಲಿಯುವ ಅಗತ್ಯ ಇಲ್ಲ': ಕೆಎಸ್ ಈಶ್ವರಪ್ಪಗೆ ಸಂಸದ ರಾಘವೇಂದ್ರ ತಿರುಗೇಟು

ಬೈಂದೂರಿನಲ್ಲಿ ನಡೆದ ಅದ್ದೂರಿ ಸಮಾವೇಶದಲ್ಲಿ ಸುಮಾರು ಒಂದುವರೆ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು. ಸ್ಥಳೀಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ನೇತೃತ್ವ ವಹಿಸಿದ್ದರು. ಸಮನಸದ ಬಿ.ವೈ.ರಾಘವೇಂದ್ರ ಹಾಗೂ ಹಾಲಿ ಶಾಸಕ ಗುರುರಾಜ ಗಂಟಿಹೊಳೆ ಅವರಿಂದ ಮುನಿಸಿಕೊಂಡ ಕೆಲ ನಾಯಕರು ಭಾಗಿಯಾಗಿದ್ದರು.

click me!