Latest Videos

ಕುಮಾರಣ್ಣ ಕೇಂದ್ರ ಸಚಿವರಾಗಿ ಮಂಡ್ಯಕ್ಕೆ ಬಂದು ಸಭೆ ಮಾಡಿದ್ರೆ ಚಲುವಣ್ಣನೂ ಬರಬೇಕು; ಸುಮಲತಾ ಆಪ್ತ ಸಚ್ಚಿದಾನಂದ

By Sathish Kumar KHFirst Published Mar 31, 2024, 8:56 PM IST
Highlights

ಹೆಚ್.ಡಿ. ಕುಮಾರಣ್ಣ ಗೆದ್ದು ಕೆಂದ್ರ ಸಚಿವರಾಗಿ ಮಂಡ್ಯಕ್ಕೆ ಬಂದು ದಿಶಾ ಸಭೆ ನಡೆಸಿದರೆ, ಚಲುವಣ್ಣನೂ ಬಂದು ಸಭೆಯಲ್ಲಿ ಕೂರಬೇಕು ಎಂದು ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಹೇಳಿದರು. 

ಮಂಡ್ಯ (ಮಾ.31): ಈ ಚುನಾವಣೆ ರಾಷ್ಟ್ರೀಯತೆ ಚುನಾವಣೆಯಾಗಿದೆ. ಈ ಚುನಾವಣೆ ಕುಮಾರಣ್ಣ-ಸ್ಟಾರ್ ಚಂದ್ರು ನಡುವಿನ ಚುನಾವಣೆಯಲ್ಲ. ಕುಮಾರಣ್ಣಗೆ ಸ್ಟಾರ್ ಚಂದ್ರುಗೆ ಸಮನೇ ಅಲ್ಲ. ಹೆಚ್.ಡಿ. ಕುಮಾರಣ್ಣ ಗೆದ್ದು ಕೇಂದ್ರ ಸಚಿವರಾಗಿ ದಿಶಾ ಸಭೆ ಮಾಡಿದರೆ, ಚಲುವಣ್ಣ ನೀವು ಬಂದು ಕೂರಬೇಕು. ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬೇಡಿ ಎಂದು ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಹೇಳಿದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಇಂಡುವಾಳು ಸಚ್ಚಿದಾನಂದ, ದೇಶ ಸುಭದ್ರವಾಗಬೇಕೆಂದ್ರೆ NDA ಮೈತ್ರಿ ಕೂಟ 400 ಸೀಟು ಗೆಲ್ಲಬೇಕು. ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು. ಅದಕ್ಕೆ ಮುನ್ನುಡಿಯಾಗಿ ಕುಮಾರಣ್ಣರನ್ನ ಪಾರ್ಲಿಮೆಂಟ್ ಗೆ ಗೆಲ್ಲಿಸಿ ಕಳುಹಿಸಬೇಕು. ಈ ಚುನಾವಣೆ ಕುಮಾರಣ್ಣ-ಸ್ಟಾರ್ ಚಂದ್ರು ನಡುವಿನ ಚುನಾವಣೆಯಲ್ಲ.ಕುಮಾರಣ್ಣಗೆ ಸ್ಟಾರ್ ಚಂದ್ರುಗೆ ಸಮನೇ ಅಲ್ಲ. ಈ ಚುನಾವಣೆ ರಾಷ್ಟ್ರೀಯತೆ ಚುನಾವಣೆಯಾಗಿದೆ. ಕುಮಾರಣ್ಣ ಮಂಡ್ಯದಿಂದ ಗೆದ್ದು ಹೋದರೇ ಸಚಿವರಾಗ್ತಾರೆ. ಚಲುವಣ್ಣ ನಾನು‌ ನಡೆಸುವ ಕೆಡಿಪಿ ಸಭೆಗೆ ಕುಮಾರಣ್ಣ ಬಂದು ಕೂರ್ತಾರಾ ಅಂತಾ ಕೇಳ್ತಾರೆ. ಆದರೆ, ಕುಮಾರಣ್ಣ ಕೇಂದ್ರ ಸಚಿವರಾಗಿ ದಿಶಾ ಸಭೆ ಮಾಡಿದ್ರೆ ಚಲುವಣ್ಣ ನೀವು ಬಂದು ಕೂರಬೇಕು. ಚಲುವಣ್ಣ ನೀವು ಯಾರ ಬಗ್ಗೆಯೂ ಲಘುವಾಗಿ ಮಾತನಾಡಬೇಡಿ. ಇದು ಹಣವಂತರು, ಗುಣವಂತರ ಚುನಾವಣೆಯಾಗಿದೆ ಎಂದು ಹೇಳಿದರು.

2019ರ ಚುನಾವಣೆಯ ಬದ್ಧ ವೈರಿ, 2024ರಲ್ಲಿ ಮೈತ್ರಿ ಸ್ನೇಹಿತರು; ಸುಮಲತಾ ಭೇಟಿಯಾದ ಕುಮಾರಸ್ವಾಮಿ

ಮಂಡ್ಯದಲ್ಲಿ ಕುಮಾರಣ್ಣ ಅವರನ್ನು 5 ಲಕ್ಷ ಮತಗಳ ಅಂತರಗಳಿಂದ ಗೆಲ್ಲಿಸಬೇಕು. ಆ ಮೂಲಕ ದೇಶದ ಉಜ್ವಲ ಭವಿಷ್ಯಕ್ಕೆ ಮುನ್ನಡಿ ಬರೆಯಬೇಕು. ಮಾಜಿ ಪ್ರಧಾನಿ ದೇವೇಗೌಡರು 60 ವರ್ಷ ರಾಜಕೀಯ ಬದುಕು ಸಾಗಿಸಿದ್ದಾರೆ. ರೈತರು, ದೀನ ದಲಿತರು, ಯುವಕರು, ಹಿಂದುಳಿದವರ ಪರವಾಗಿ ಶ್ರಮಿಸಿದ್ದಾರೆ. ಆದ್ರೆ ಅವರು ಅಧಿಕಾರ ಮಾಡಿದ್ದು ಕೇವಲ 2 ವರ್ಷಗಳು ಮಾತ್ರ. ರಾಜ್ಯಕ್ಕೆ, ದೇಶಕ್ಕೆ ತನ್ನನ್ನ ತಾನೂ ಸಮರ್ಪಣೆ ಮಾಡಿಕೊಂಡ ಮಣ್ಣಿನ ಮಗ ಇದ್ದರೇ ಅದು ದೇವೇಗೌಡರಾಗಿದ್ದಾರೆ. 91 ವರ್ಷ ವಯಸ್ಸಿನಲ್ಲಿಯೂ ಕಾವೇರಿಗಾಗಿ ದೆಹಲಿಗೆ ಹೋಗ್ತಾರೆ ಎಂದು ಹಾಡಿ ಹೊಗಳಿದರು.

ರಾಜ್ಯದ ತಾಯಂದಿರು ಚನ್ನಾಗಿ ಇರಲಿ ಎಂದು ಕುಮಾರಣ್ಣ ಸಾರಾಯಿ, ಲಾಟರಿ ನಿಷೇಧ ಮಾಡಿದರು. ರೈತರ ಬದುಕು ಚನ್ನಾಗಿರಲಿ ಎಂದು ಸಾಲಮನ್ನಾ ಮಾಡಿದರು. ಅದನ್ನ ತಾಯಂದಿರಿಗೆ ತಿಳಿಸುವ ಕೆಲಸ ಆಗಬೇಕು. ಕುಮಾರಣ್ಣಗೆ ಶ್ರೀರಂಗಪಟ್ಟಣ ಕ್ಷೇತ್ರವೊಂದರಲ್ಲೆ 50 ಸಾವಿರ ಲೀಡ್ ಕೊಡ್ತೇವೆ. ಕುಮಾರಣ್ಣಗೆ ಬೆಂಬಲ ಕೊಡಲು ಏ.2ನೇ ತಾರೀಖು ಬಿಜೆಪಿಯಿಂದ ಸಭೆ ಕರೆದಿದ್ದೇವೆ. ಕುಮಾರಣ್ಣ ಕೇವಲ ಜೆಡಿಎಸ್ ಅಭ್ಯರ್ಥಿಯಲ್ಲ. ಬಿಜೆಪಿ, ಎನ್ ಡಿಎ ಹಾಗೂ ಗುಣವಂತ ಅಭ್ಯರ್ಥಿಯಾಗಿದ್ದಾರೆ. ಎಲ್ಲರೂ ಅವರ ಗೆಲ್ಲಿಗೆ ಶ್ರಮಿಸೋಣ. ಆದರೆ, ಈಗಾಗಲೇ ಕಾಂಗ್ರೆಸ್ ನಾಯಕರು ಬ್ಲಾಕ್ ಮೇಲ್ ಮಾಡ್ತಿದ್ದಾರೆ. ವೋಟ್ ಹಾಕಲಿಲ್ಲ ಎಂದರೇ ಗ್ಯಾರಂಟಿ ನಿಲ್ಲಿಸುತ್ತೇವೆ ಅಂತಿದ್ದಾರೆ. ಇದಕ್ಕೆ ಯಾಋಒಬ್ಬರೂ ಕಿವಿಗೊಡುವುದು ಬೇಡ ಎಂದು ಹೇಳಿದರು.

ಜೆಡಿಎಸ್‌-ಬಿಜೆಪಿ ಕಾರ್ಯಕರ್ತರಲ್ಲಿ ಅಂಡರ್‌ಕರೆಂಟ್‌ ಅಲೆ ಎದ್ದಿದೆ: ನಿಖಿಲ್ ಕುಮಾರಸ್ವಾಮಿ

ಕೈ ಶಾಸಕನ ವಿರುದ್ದ ಸುಮಲತಾ ಆಪ್ತ ಸಚ್ಚಿದಾನಂದ ಕಿಡಿ: ಕುಮಾರಸ್ವಾಮಿ ಹಾರ್ಟ್ ಆಪರೇಷನ್ ಅಣಕಿಸಿದ ಶಾಸಕ ರಮೇಶ್‌ ಬಾಬು ಬಂಡಿಸಿದ್ದೇಗೌಡ ಹೇಳಿಕೆ ಕುರಿತು ಮಾತನಾಡಿ, ಬಂಡಿಸಿದ್ದೇಗೌಡ ಕುಟುಂಬ ರಕ್ಷಣೆ ಹೇಗೆ ಮಾಡಿದ್ರು ಎಂದು ದೇವೇಗೌಡರು ಹೇಳಬೇಕು. ಅದಕ್ಕಾಗಿ ನಿಖಿಲ್‌ ಕುಮಾರಸ್ವಾಮಿ ಅವರು ಒಮ್ಮೆಯಾದರೂ ಶ್ರೀರಂಗಪಟ್ಟಣಕ್ಕೆ ದೇವೇಗೌಡರನ್ನ ಕರೆತರಬೇಕು. ಶಾಸಕ ರಮೇಶ್ ಬಾಬು ತಂದೆ‌ ಸಚಿವರಾಗಿದ್ದರು. ಅವರ ತಾಯಿ ಕೂಡ ಚೇರ್ ಮೇನ್ ಆಗಿದ್ದರು. ದೇವೇಗೌಡರ ಕುಟುಂಬಕ್ಕೆ ಚೂರಿಹಾಕಿದ ಬಳಿಕ 50 ಸಾವಿರ ಮತದಿಂದ ಸೋತಿದ್ದರು ಎಂದು ತಿರುಗೇಟು ನೀಡಿದರು.

click me!