ವ್ಯಕ್ತಿಗತವಾಗಿ ಯಾವತ್ತೂ ಮೋದಿಗೆ ಬೈದಿಲ್ಲ, ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ದಿಕ್ಕು ತಪ್ಪಿಸುತ್ತಿದ್ದಾರೆ: ಸಂತೋಷ್ ಲಾಡ್

Published : Mar 24, 2024, 07:32 PM IST
ವ್ಯಕ್ತಿಗತವಾಗಿ ಯಾವತ್ತೂ ಮೋದಿಗೆ ಬೈದಿಲ್ಲ, ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ದಿಕ್ಕು ತಪ್ಪಿಸುತ್ತಿದ್ದಾರೆ: ಸಂತೋಷ್ ಲಾಡ್

ಸಾರಾಂಶ

ನಮ್ಮ ಎದುರಾಳಿ ಅಭ್ಯರ್ಥಿ ಬಹಳ ಸಲ ಗೆದ್ದವರು. ಕಳೆದ ನಾಲ್ಕು ಚುನಾವಣೆಯಲ್ಲೂ ಗೆದ್ದಿದ್ದಾರೆ. ಹೀಗಾಗಿ ನಾವು ಅವರ ಬಗ್ಗೆ ಗೇಲಿ ಮಾಡುವುದಿಲ್ಲ. ಆದರೆ ಇರುವ ಪರಿಸ್ಥಿತಿ ಬೇರೆ ಇದೆ. ಮಾಧ್ಯಮಗಳಲ್ಲಿ ಪ್ರಧಾನಿ ಮೋದಿ ಮಿಂಚುತ್ತಲೇ ಇದ್ದಾರೆ. ಮಾಧ್ಯಮಗಳ ಮೂಲಕ ಅವರು ಪ್ರಚಾರ ಮಾಡುತ್ತಿದ್ದಾರೆ ಬಿಜೆಪಿ ವಿರುದ್ಧ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.

ಧಾರವಾಡ (ಮಾ.24): ಇಂದಿನಿಂದ ಧಾರವಾಡ ಕ್ಷೇತ್ರದಲ್ಲಿ ನಮ್ಮ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ್ದೇವೆ. ಹತ್ತು ವರ್ಷ ಮೋದಿ ಹೇಳಿದ ಸುಳ್ಳುಗಳಿವೆ. ಅದನ್ನು ಜನರಿಗೆ ತಿಳಿಸುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಧಾರವಾಡದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಾವು ಬಡಜನರಿಗಾಗಿ ಮಾಡಿದ ಕಾರ್ಯಕ್ರಮ, ಯೋಜನೆಗಳ ಬಗ್ಗೆ  70 ವರ್ಷದ ಇತಿಹಾಸ ಹೇಳುತ್ತೇವೆ. ಜನರ ಮನೆಮನೆಗೆ ಭೇಟಿ ನೀಡಿ ತಿಳಿಸುತ್ತೇವೆ. ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಯುವ ನಾಯಕ ರಜತ್ ಸಹ ಟಿಕೆಟ್ ಕೇಳಿದ್ದರು. ಆಕಾಂಕ್ಷಿಗಳೆಲ್ಲ ಒಪ್ಪಿ ವಿನೋದ ಅಸೂಟಿ ಪರ ಬಂದಿದ್ದಾರೆ. ಎಲ್ಲರೂ ಜವಬ್ದಾರಿ ವಹಿಸಿ ಕೆಲಸ ಮಾಡುತ್ತಿದ್ದೇವೆ ಹೀಗಾಗಿ ಒಂದು ಸರಪ್ರೈಸ್ ಫಲಿತಾಂಶ ಬರುತ್ತದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸೇರಿ ಕಾಂಗ್ರೆಸ್ ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಕೈಯಲ್ಲಿದೆ ಅಂತಾ ಮೋದಿ ಹೇಳ್ತಾರೆ, ಆದ್ರೆ ರಾಜ್ಯ ಬಿಜೆಪಿ ಯಾರ ಕೈಯಲ್ಲಿದೆ? ಈಶ್ವರಪ್ಪ ವಾಗ್ದಾಳಿ!

ನಮ್ಮ ಎದುರಾಳಿ ಅಭ್ಯರ್ಥಿ ಬಹಳ ಸಲ ಗೆದ್ದವರು. ಕಳೆದ ನಾಲ್ಕು ಚುನಾವಣೆಯಲ್ಲೂ ಗೆದ್ದಿದ್ದಾರೆ. ಹೀಗಾಗಿ ನಾವು ಅವರ ಬಗ್ಗೆ ಗೇಲಿ ಮಾಡುವುದಿಲ್ಲ. ಆದರೆ ಇರುವ ಪರಿಸ್ಥಿತಿ ಬೇರೆ ಇದೆ. ಮಾಧ್ಯಮಗಳಲ್ಲಿ ಪ್ರಧಾನಿ ಮೋದಿ ಮಿಂಚುತ್ತಲೇ ಇದ್ದಾರೆ. ಮಾಧ್ಯಮಗಳ ಮೂಲಕ ಅವರು ಪ್ರಚಾರ ಮಾಡುತ್ತಿದ್ದಾರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪಾಕ್ ಪರ ಘೋಷಣೆ ಕೂಗಿದವರು ಯಾವ ಪಕ್ಷದವರಾದ್ರೂ ಶಿಕ್ಷೆ ಆಗಬೇಕು: ಸಂತೋಷ್ ಲಾಡ್

ಮೋದಿಯವರನ್ನು ಬೈಯೋಕೆ ಇಟ್ಟಿದ್ದಾರೆಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ಪ್ರಸ್ತಾಪಿಸಿದ ಸಚಿವರು, ಇಲ್ಲಿವರೆಗೆ ನಾನು ಮೋದಿಯವರನ್ನ ವೈಯಕ್ತಿಕವಾಗಿ ಬೈದಿಲ್ಲ. ನರೇಂದ್ರ ಮೋದಿಯವರಿಗಾಗಲಿ, ಜೋಶಿಯವರಿಗೆ ಆಗಲಿ ವ್ಯಕ್ತಿಗತವಾಗಿ ಬೈದಿಲ್ಲ. ಆ ಮಟ್ಟಕ್ಕೆ ನಾನು ಬೆಳೆದಿಲ್ಲ. ರಾಜಕೀಯ ಜೀವನದಲ್ಲಿ ವೈಯಕ್ತಿಕವಾಗಿ ಯಾರಿಗೂ ಬೈದಿಲ್ಲ. ನಾವು ಪ್ರಶ್ನೆ ಕೇಳಿದ್ದೇವೆ. ಆದರೆ ಉತ್ತರ ಕೊಡಲು ಅವರಿಗೆ ಆಗಿಲ್ಲ. ಹೀಗಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್