ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಕೈಯಲ್ಲಿದೆ ಅಂತಾ ಮೋದಿ ಹೇಳ್ತಾರೆ, ಆದ್ರೆ ರಾಜ್ಯ ಬಿಜೆಪಿ ಯಾರ ಕೈಯಲ್ಲಿದೆ? ಈಶ್ವರಪ್ಪ ವಾಗ್ದಾಳಿ!

By Ravi Janekal  |  First Published Mar 24, 2024, 6:56 PM IST

ನಾನು ಬಿಜೆಪಿಯಲ್ಲಿ ಹಲವು ಹುದ್ದೆ ಅನುಭವಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷ ಕುಟುಂಬದ ಕೈಯಲ್ಲಿ ಇದೆ ಅಂತಾರೆ. ಆದ್ರೆ ರಾಜ್ಯ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿಲ್ಲವೇ? ರಾಜ್ಯ  ಬಿಜೆಪಿಯಲ್ಲಿ ಸಹ ಕಾಂಗ್ರೆಸ್ ಸಂಸ್ಕೃತಿ ಇದೆ ಎಂದು ಮಾಜಿ ಸಚಿವ, ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ  ವಾಗ್ದಾಳಿ ನಡೆಸಿದರು.


ಶಿಕಾರಿಪುರ (ಮಾ.24): ನಾನು ಬಿಜೆಪಿಯಲ್ಲಿ ಹಲವು ಹುದ್ದೆ ಅನುಭವಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷ ಕುಟುಂಬದ ಕೈಯಲ್ಲಿ ಇದೆ ಅಂತಾರೆ. ಆದ್ರೆ ರಾಜ್ಯ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿಲ್ಲವೇ? ರಾಜ್ಯ  ಬಿಜೆಪಿಯಲ್ಲಿ ಸಹ ಕಾಂಗ್ರೆಸ್ ಸಂಸ್ಕೃತಿ ಇದೆ ಎಂದು ಮಾಜಿ ಸಚಿವ, ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ  ವಾಗ್ದಾಳಿ ನಡೆಸಿದರು.

ಶಿಕಾರಿಪುರದಲ್ಲಿ ಇಂದು ಬೈಕ್ ರಾಲಿ ಬಳಿಕ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ 6 ತಿಂಗಳು ಅಧ್ಯಕ್ಷ ಹುದ್ದೆ ಖಾಲಿ ಇತ್ತು. ಯಾಕೆ ಅರ್ಹತೆ ಇದ್ದವರು ರಾಜ್ಯದಲ್ಲಿ ಯಾರೂ ಇರಲಿಲ್ವಾ? ಲಿಂಗಾಯ್ತರಿಗೆ ಕೊಡಬೇಕಾ? ಹಿಂದು ಹುಲಿ ಯತ್ನಾಳ್ ‌ಇದ್ದರು. ಸಿ.ಟಿ.ರವಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಗೋವಾ, ಮುಂಬೈ, ತಮಿಳುನಾಡು ಉಸ್ತುವಾರಿ ಆಗಿದ್ದರು. ಸಿ.ಟಿ.ರವಿ ಅವರನ್ನು ಅಧ್ಯಕ್ಷರಾಗಿ ಮಾಡಬಹುದಿತ್ತು. ಸಂಸದ ಪ್ರತಾಪ್ ಸಿಂಹ ಇದ್ದರು. ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದಿತ್ತು. ಆದರೆ ಯಾಕೆ ಮಾಡಲಿಲ್ಲ. ಒಂದೇ ಕುಟುಂಬದವರೇ ಅಧ್ಯಕ್ಷರಾಗಬೇಕೆಂಬ ನಿಯಮವಿದೆಯೇನು? ಹಾಗಾದರೆ ಕಾಂಗ್ರೆಸ್ ಸಂಸ್ಕೃತಿಗೂ ರಾಜ್ಯ ಬಿಜೆಪಿಗೂ ಏನು ವ್ಯತ್ಯಾಸ ಇದೆ ಎಂದು ಬಿಜೆಪಿ ನಾಯಕರ ವಿರುದ್ಧ ಅಬ್ಬರಿಸಿದರು.

Tap to resize

Latest Videos

undefined

ಅಧಿಕಾರಿಗಳ ವರ್ಗಾವಣೆಯಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ, ಮಾಹಿತಿ ಬಹಿರಂಗಪಡಿಸಿದ ಮುಡಾ ಮಾಜಿ ಅಧ್ಯಕ್ಷ!

ಇಂದು ಶಿಕಾರಿಪುರದಲ್ಲಿ ಇಷ್ಟೊಂದು ಜನ ಸೇರಿದ್ದಾರೆ. ಈ ದೃಶ್ಯವನ್ನು ನಾನು ಜೀವನದಲ್ಲಿ ಮರೆಯೊಲ್ಲ. ಸಿಟಿ ರವಿ, ಸದಾನಂದಗೌಡ, ಅನಂತಕುಮಾರ ಹೆಗ್ಡೆ, ಯತ್ನಾಳ್, ಈಶ್ವರಪ್ಪ ನವರು ಹಿಂದು ಹುಲಿಗಳು. ಈ ಹಿಂದು ಹುಲಿಗಳು ಬೆಳೆಯಬಾರದು. ಹಿಂದು ಹುಲಿಗಳು ಬೆಳೆದರೆ ಅವರ ಮುಖ್ಯಮಂತ್ರಿ ಆಗೊಲ್ಲ. ಅದಕ್ಕಾಗಿ ನಮ್ಮನ್ನು ಪಕ್ಕಕ್ಕೆ ಸರಿಸಿದರು. ಶಿಕಾರಿಪುರದಲ್ಲಿ ಅನೇಕ ಕಾರ್ಯಕರ್ತರು ನೋವು ಅನುಭವಿಸಿದ್ದಾರೆ. ಆದರೆ ಮುಂದೆ ಬಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ ಎಂದರು.

ಹಾವೇರಿಗೆ ಬೊಮ್ಮಾಯಿ, ಚಿಕ್ಕಮಗಳೂರುಗೆ ಶೋಭಾ ಅಂತೆ ಇಬ್ಬರಿಗೂ ಟಿಕೆಟ್ ಕೊಡಿಸಲು ಹಠ ಹಿಡಿದಿದ್ದರಂತೆ. ನಿಮಗೂ ಬೊಮ್ಮಾಯಿಗೂ ಏನು ಸಂಬಂಧ? ನಿಮಗೂ ಶೋಭಾ ಕರಂದ್ಲಾಜೆಗೂ ಏನು ಸಂಬಂಧ? ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರನ್ನು ಸೋಲಿಸಿಯೇ ಸೋಲಿಸುತ್ತೇನೆ. ನಾನು ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೇನೆ. ಸ್ಪರ್ಧೆ ಮಾಡಿಯೇ ಮಾಡ್ತೇನೆ. ಪಕ್ಷ ಉಳಿಯಬೇಕು, ಹಿಂದುತ್ವ ಉಳಿಯಬೇಕು ಅದಕ್ಕಾಗಿ ನನ್ನ ಸ್ಪರ್ಧೆ ಎಂದರು.

ಚಿಕ್ಕಮಗಳೂರಿನಲ್ಲಿ ಶೋಭಾ ಸ್ಪರ್ಧೆ ಮಾಡ್ತಾರೆ, ನೀವು ಗೆಲ್ಲಿಸಬೇಕು ಅಷ್ಟೇ ಅಂತಾರೆ. ನಿಮಗೆ ಯಾರು ಅಧಿಕಾರ ಕೊಟ್ಟವರು? ಕೇಂದ್ರದವರು ಕೊಟ್ಟಿರುವ ಅಧಿಕಾರ ದುರುಪಯೋಗ ಮಾಡಿ ಕೊಳ್ಳುತ್ತೀರಾ?  ನಿಮಗೆ ಬೇಕಾದವರಿಗೆ ಟಿಕೇಟ್ ಕೊಡ್ತೀರಾ? ನನಗೆ ಬೇಡ ಆರೋಗ್ಯ ಸರಿಯಿಲ್ಲ ಕಾಂತೇಶ್‌ಗೆ ಟಿಕೆಟ್ ಕೊಡಿ ಅಂತಾ ಬೊಮ್ಮಾಯಿ ಹೇಳಿದ್ರು. ಆದ್ರೂ ಬೊಮ್ಮಾಯಿಗೆ ಟಿಕೆಟ್ ಕೊಡಿಸಿದರು. ಇನ್ನೊಬ್ಬರು ಬೆಳೆಯಬಾರದು ಎಂಬುದು ಇದರ ಉದ್ದೇಶ. ಸೊಂಗಳ್ಳಿ

ನಾನು ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡ್ದೆ. ಲಕ್ಷಾಂತರ ಜನ ಕೂಡಲ ಸಂಗಮದಲ್ಲಿ ಸೇರಿದರು. ಸಮಾವೇಶ ನೋಡಿ, ಹಿಂದುಳಿದ ಸಂಘಟನೆ ನೋಡಿ ಯಡಿಯೂರಪ್ಪ ಖುಷಿ ಪಡಬೇಕಾಗಿತ್ತು. ಆದರೆ ಅಮಿತ್ ಶಾಗೆ ದೂರು ಕೊಟ್ಟರು. ಅಮಿತ್ ಶಾ ದೆಹಲಿಗೆ ಕರೆಸಿಕೊಂಡರು ಸಭೆಯಲ್ಲಿ ರಾಯಣ್ಣ ಬ್ರಿಗೇಡ್ ಬೇಡ ಅಂದ್ರು ಯಡಿಯೂರಪ್ಪ. ನಾನು ಆಗ ಅವರಿಗೆ ಹೇಳಿದ್ದೆ,  ಯಡಿಯೂರಪ್ಪ ಅವರೇ ಬಿಜೆಪಿಗೆ ನಿಮಗೆ ಹಿಂದುಳಿದವರು ದಲಿತರು ಬೇಡ್ವಾ ಎಂದು ಪ್ರಶ್ನಿಸಿದ್ದೆ. ಅಮಿತ್ ಶಾ ಅವರು ಬಿಟ್ಟುಬಿಡಿ ಅಂದ್ರು. ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟಿದಾಗ ಎಷ್ಟು ಸೀಟು ಗೆದ್ರು? ಬರೀ 6ಸೀಟು. ಆದ್ರೆ ಕೇಂದ್ರದ ನಾಯಕರು ಭ್ರಮೆಯಲ್ಲಿದ್ದಾರೆ ಯಡಿಯೂರಪ್ಪ ಒಬ್ಬರೇ ಲಿಂಗಾಯತ ನಾಯಕರು ಅಂತಾ. ಗೆದ್ದ 6 ಸೀಟ್ ಕೂಡ ಕೆಜೆಪಿಯದ್ದಲ್ಲ, ಅವರೆಲ್ಲ ಸ್ವತಂತ್ರವಾಗಿ ಸ್ವಂತವಾಗಿ ಗೆದ್ದವರು. ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದರು.

ಶಿವಮೊಗ್ಗ ಗೀತಾ ಶಿವರಾಜ್ ಕುಮಾರ್ ಡಮ್ಮಿ ಕ್ಯಾಂಡಿಡೇಟ್; ಈಶ್ವರಪ್ಪ ಡಬ್ಬ ಸೌಂಡ್: ವಾಗ್ದಾಳಿ ರಾಜಕಾರಣ

ಯಡಿಯೂರಪ್ಪ ಅವರೇ ನನಗೆ ಅನ್ಯಾಯ ಮಾಡಿದ್ರಿ? ನರೇಂದ್ರ ಮೋದಿಯವರು ಯುವಕರು ಬೆಳೆಯಬೇಕು ಅಂತಾರೆ. ಯುವಕರನ್ನು ತುಳಿಯುವುದೇ ಯಡಿಯೂರಪ್ಪನ ಕೆಲಸ. ವಿಜಯೇಂದ್ರ ಶಿಕಾರಿಪುರದಲ್ಲಿ ಗೆದ್ದರು. ಹೇಗೆ ಗೆದ್ದರು? ಚುನಾವಣೆಯಲ್ಲಿ ಕಾಂಗ್ರೆಸ್‌ನವರ ಜೊತತೆ ಹೊಂದಾಣಿಕೆ ಮಾಡಿಕೊಂಡು ಗೆದ್ದರು. ವರುಣದಲ್ಲಿ ಸಿದ್ದರಾಮಯ್ಯ ಗೆದ್ದರೂ ಪರವಾ ಇಲ್ಲ, ಶಿಕಾರಿಪುರದಲ್ಲಿ ವಿಜಯೇಂದ್ರ ಗೆಲ್ಲಬೇಕಾಗಿತ್ತು. ಹೀಗಾಗಿ ಡಮ್ಮಿ ಅಭ್ಯರ್ಥಿ ಹಾಕಿಕೊಂಡರು. ಈಗ ರಾಘವೇಂದ್ರ ಗೆಲ್ಲಬೇಕು ಅಂತಾ ಶಿವಮೊಗ್ಗದಲ್ಲಿ ಡಮ್ಮಿ ಕ್ಯಾಂಡಿಡೇಟು ಹಾಕಿಕೊಂಡಿದ್ದಾರೆ ಅಂತಾ ಜನ ಮಾತಾಡ್ತಾ ಇದ್ದಾರೆ. ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡ್ತಿದ್ದಾರೆ. ಶಿಕಾರಿಪುರದ ಜನರು ಕುರಿಗಳೆಂದು ಭಾವಿಸಿದ್ದಾರೆ. ಈ ಬಾರಿ ನೀವು ಅವರಿಗೆ ಬುದ್ಧಿ ಕಲಿಸಬೇಕು. ರಾಘವೇಂದ್ರ ಅವರನ್ನು ಸೋಲಿಸಬೇಕು. ಸೋಲಿನ ರುಚಿ ಏನು ಅಂತಾ ಗೊತ್ತು ಮಾಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

click me!