ನನ್ನ ಪ್ರಾಮಾಣಿಕತೆ, ಸ್ವಚಾರಿತ್ರ್ಯಕ್ಕೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ. ಆದರೆ ಕರ್ನಾಟಕದಲ್ಲಿ ನಿಯತ್ತು, ಪ್ರಾಮಾಣಿಕತೆ ಎಂಬ ಶಬ್ದಗಳಿಗೆ ಅರ್ಥ ಕಳೆದುಕೊಳ್ಳುವ ರಾಜನೀತಿ ಇದೆ. ಇದು ಮನಸ್ಸಿಗೆ ಅತ್ಯಂತ ನೋವು ತಂದ ಸಂಗತಿಯಾಗಿದೆ ಎಂದು ಮಾಜಿ ಸಿಎಂ ಡಿವಿ ಸದಾನಂದಗೌಡ ಬೇಸರ ವ್ಯಕ್ತಪಡಿಸಿದರು.
ಮಂಗಳೂರು (ಮಾ.24): 30 ವರ್ಷಗಳ ಕಾಲ ಸುದೀರ್ಘವಾಗಿ ಜನಸೇವೆ ಮಾಡುವ ಅವಕಾಶ ಸಿಕ್ಕಿದೆ. 30 ವರ್ಷ ಕಳೆದ ಬಳಿಕ ದೇವರಿಗೆ ಭಕ್ತಿಯ ನಮನ ಸಲ್ಲಿಸಲು ಬಂದಿದ್ದೇನೆ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ತಿಳಿಸಿದರು.
ದಕ್ಷಿಣ ಕನ್ನಡದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ರಾಜಕಾರಣದಿಂದ ದೂರ ಉಳಿದು ಪಕ್ಷದ ಜೊತೆ ನಿರಂತರ ಕೆಲಸ ಮಾಡುತ್ತೇನೆ. ನಮ್ಮಲ್ಲಿ ನರೇಂದ್ರ ಮೋದಿ ಪರಿಕಲ್ಪನೆ ಸಂಘಟನೆ ಇದೆ ಅವರ ಸ್ವಾರ್ಥ ರಹಿತ ರಾಜಕಾರಣವನ್ನು ಮುಂದುವರಿಸಿಕೊಂಡು ಎಲ್ಲಾ ಕಡೆ ಹೋಗಬೇಕು. ಇದು ಕೇವಲ ನರೇಂದ್ರ ಮೋದಿ, ದೆಹಲಿಗೆ ಮಾತ್ರ ಸೀಮಿತವಾಗಬಾರದು ಎಲ್ಲ ರಾಜ್ಯಗಳಲ್ಲೂ ಅದು ಜಾರಿಯಾಗಬೇಕು. ಅವರು ಹೇಳಿದ ಪರಿವಾರವಾದದಿಂದ ಮುಕ್ತರಾಗಬೇಕು. ಭ್ರಷ್ಟಾಚಾರ, ಜಾತಿವಾದದಿಂದ ಮುಕ್ತವಾಗಬೇಕಾದ ರಾಜನೀತಿ ಇರಬೇಕು. ಈ ಚುನಾವಣೆಯಲ್ಲೇ ಅದು ಆಗಬೇಕಿತ್ತು. ಆದರೆ ಚುನಾವಣೆ ಬಳಿಕವಾದರೂ ಇದು ಆಗಬೇಕು.ಆದ್ರೆ ನಮ್ಮ ರಾಜ್ಯದಲ್ಲಿ ಜವಾಬ್ದಾರಿ ಹೊತ್ತಂತವರು ಅ ಮೂರರಿಂದ ಹೊರತಾಗಿಲ್ಲ ಎನ್ನುವ ಮೂಲಕ ಮತ್ತೆ ಪರೋಕ್ಷವಾಗಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು.
ಕಾಂಗ್ರೆಸ್ ಸೇರಲ್ಲ, ಆದರೆ ಬಿಜೆಪಿ ಶುದ್ದ ಮಾಡುವೆ: ಡಿ.ವಿ.ಸದಾನಂದಗೌಡ
ಆ ಪಕ್ಷದಿಂದ ಎಲ್ಲವನ್ನೂ ಕೊಟ್ಟಿದೆ. ಪಕ್ಷಕ್ಕೆ ನಾನು ಏನಾದರೂ ಕೊಡಬೇಕಿದೆ. ಪಕ್ಷದೊಳಗಿನ ಪರಿವಾರವಾದ, ಜಾತಿವಾದ ಇವೆಲ್ಲವುಗಳನ್ನು ಖಂಡಿತವಾಗಿ ಮುಂದೆ ಶುದ್ಧೀಕರಣ ಮಾಡುವ ಕೆಲಸ ಮಾಡುತ್ತೇವೆ. ಈಗ ನರೇಂದ್ರ ಮೋದಿಯವರ ಚುನಾವಣೆ ಒಂದೇ ನಮಗೆ ಮುಂದಿರುವ ಗುರಿ. ನಮ್ಮ ರಾಜ್ಯದಿಂದ 28 ಸೀಟು ಗೆಲ್ಲಬೇಕು. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಹೀಗಾಗಿ ಪಕ್ಷದಲ್ಲಿನ ಸಣ್ಣಪುಟ್ಟ ವಿಚಾರವನ್ನು ಯಾಊ ಮನಸಿಗೆ ಹಚ್ಚಿಕೊಳ್ಳಬಾರದು ಎಂದರು.
ಪ್ರಧಾನಿ ನರೇಂದ್ರ ಮೋದಿಯವರಂಥ ದೈವಾಂಶ ಸಂಭೂತ ದೇಶದ ಎಲ್ಲವನ್ನೂ ಸರಿ ಮಾಡಲು ಹೊರಟಿದ್ದಾರೆ. ಅದನ್ನು ಕೆಳಗಿನ ಹಂತದಿಂದಲೇ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮದು. ನಾನು ಚುನಾವಣಾ ರಾಜಕೀಯದಿಂದ ದೂರು ನಿಂತಿದ್ದೆ. ಆದರೆ ರಾಜ್ಯದಲ್ಲಿನ ಮಾಜಿ ಮುಖ್ಯಮಂತ್ರಿ, ಮಾಜಿ ಉಪಮುಖ್ಯಮಂತ್ರಿ, ಮಾಜಿ ಮಂತ್ರಿಗಳು ನೀವು ಸ್ಪರ್ಧೆ ಮಾಡಬೇಕೆಂದು ಹೇಳಿದ್ರು. ಹೀಗಾಗಿ ನಾನು ಮುಂದೆ ಹೋದೆ. ನನ್ನ ಪ್ರಾಮಾಣಿಕತೆ, ಸ್ವಚಾರಿತ್ರ್ಯಕ್ಕೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ. ಆದರೆ ಕರ್ನಾಟಕದಲ್ಲಿ ನಿಯತ್ತು, ಪ್ರಾಮಾಣಿಕತೆ ಎಂಬ ಶಬ್ದಗಳಿಗೆ ಅರ್ಥ ಕಳೆದುಕೊಳ್ಳುವ ರಾಜನೀತಿ ಇದೆ. ಇದು ಮನಸ್ಸಿಗೆ ಅತ್ಯಂತ ನೋವು ತಂದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ: ಪ್ರಿಯಾಂಕ್ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!
. ಚುನಾವಣೆವರೆಗೂ ಈ ನೋವನ್ನು ನುಂಗಿಕೊಳ್ಳಬೇಕು. ಈಶ್ವರಪ್ಪ ಏನು ಹೇಳಿದ್ರು, ಇನ್ನೊಬ್ಬರು ಏನು ಹೇಳಿದ್ರು ಎಂದು ಯೋಚಿಸಲ್ಲ.ಇದನ್ನು ಲಾಜಿಕಲ್ ಎಂಡ್ ಗೆ ತಗೊಂಡು ಹೋಗಲು ನನಗೆ ಶಕ್ತಿಯಿದೆ. ಸಮಾನ ಮನಸ್ಕರಾಗಿ ಇದಕ್ಕೆ ಕೈಜೋಡಿಸುವುದಾದ್ರೆ ಎಲ್ಲರಿಗೂ ಸ್ವಾಗತಿಸುತ್ತೇನೆ. ಆದ್ರೆ ಎಲ್ಲರೂ ನನ್ನೊಟ್ಟಿಗೆ ಸೇರಿ ಒಂದು ಗುಂಪು ಮಾಡಿ ಎಂದು ಹೇಳೊಲ್ಲ. ಗುಂಪುಗಾರಿಕೆ ರಾಜಕಾರಣ ನಾನು ಯಾವತ್ತೂ ಮಾಡಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಒಂದು ದೆಹಲಿ ಗುಂಪಿತ್ತು, ಇನ್ನೊಂದು ಕರ್ನಾಟಕ ಗುಂಪಿತ್ತು. ನಾವೆಲ್ಲ ಬಿಜೆಪಿ ಗುಂಪಿನಲ್ಲಿದ್ದೆವು.ಬಿಜೆಪಿ ಗುಂಪಿನವರಿಗೆ ಭಾರೀ ದೊಡ್ಡ ಗೌರವ ಸಿಕ್ಕಿಲ್ಲ. ಜನ ಸಹ ನಮ್ಮ ಗುಂಪುಗಾರಿಕೆಗೆ ವೋಟು ಹಾಕೊಲ್ಲ ಎಂದು ಸ್ಪಷ್ಟವಾಗಿ ಹೇಳಿದ್ರು. ಹೇಳಿದಂತೆ ಆಯ್ತು. ಪಾಪ ಮಾಡಿದವರೆಲ್ಲ ಕೊನೆಗೆ ಶುದ್ಧೀಕರಣ ಆಗ್ತಾರೆ ಇದೇ ಮುಂದಿನ ದಿನಗಳಲ್ಲಿ ಆಗುತ್ತೆ ಎಂದರು.