: ಕೋಲಾರ ಲೋಕಸಭಾ ಕ್ಷೇತ್ರದಿಂದ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧಿಸುವ ಎಂ. ಮಲ್ಲೇಶ್ ಬಾಬು ಚುನಾವಣಾ ಅಧಿಕಾರಿಯ ಮುಂದೆ ಪ್ರಮಾಣ ಪತ್ರದ ಮೂಲಕ ಆಧಾಯ ತೆರಿಗೆ ಆಸ್ತಿ ಇತರ ವಿವರಗಳನ್ನು ಸಲ್ಲಿಸಿದ್ದಾರೆ. ಮಲ್ಲೇಶ್ ಬಾಬು ಎಂ.ಬಿ.ಎ ಪದವಿಧರರಾಗಿದ್ದಾರೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,ಕೋಲಾರ.
ಕೋಲಾರ (ಏ.4) : ಕೋಲಾರ ಲೋಕಸಭಾ ಕ್ಷೇತ್ರದಿಂದ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧಿಸುವ ಎಂ. ಮಲ್ಲೇಶ್ ಬಾಬು ಚುನಾವಣಾ ಅಧಿಕಾರಿಯ ಮುಂದೆ ಪ್ರಮಾಣ ಪತ್ರದ ಮೂಲಕ ಆಧಾಯ ತೆರಿಗೆ ಆಸ್ತಿ ಇತರ ವಿವರಗಳನ್ನು ಸಲ್ಲಿಸಿದ್ದಾರೆ. ಮಲ್ಲೇಶ್ ಬಾಬು ಎಂ.ಬಿ.ಎ ಪದವಿಧರರಾಗಿದ್ದಾರೆ. ಅಭ್ಯರ್ಥಿ ಮಲ್ಲೇಶ್ ಬಾಬು ಅವರ ಪತ್ನಿ ಮಂಜುಳಾ ಆಧಾಯ ತೆರಿಗೆ ಇಲಾಖೆಗೆ ಕಳೆದ ಐದು ವರ್ಷಗಳಲ್ಲಿ ಸಲ್ಲಿಸಿರುವ ರಿಟನ್ಸ್ನ್ನು ಪ್ರತ್ಯೇಕವಾಗಿ ನಮೂದಿಸಿದ್ದಾರೆ. 2018-19ನೇ ಸಾಲಿನಲ್ಲಿ 37,53,006-00 ರೂ. ಆಧಾಯ ತೆರಿಗೆ ವಿವರಗಳನ್ನು ಸಲ್ಲಿಸಿದ್ದಾರೆ. 2019-20ನೇ ಸಾಲಿನಲ್ಲಿ 26,34,400-00 ರೂ. ವಿವರಗಳನ್ನು ಸಲ್ಲಿಸಿದ್ದಾರೆ. 2020-21ನೇ ಸಾಲಿನಲ್ಲಿ 23,34,910-00 ರೂ. ವಿವರಗಳನ್ನು ಸಲ್ಲಿಸಿದ್ದಾರೆ. 2021-22ನೇ ಸಾಲಿನಲ್ಲಿ 33,93,820-00ರೂ ವಿವರಗಳನ್ನು ಸಲ್ಲಿಸಿದ್ದಾರೆ. 2022-23ನೇ ಸಾಲಿನಲ್ಲಿ 30,61,760ರೂ ವಿವರಗಳನ್ನು ಸಲ್ಲಿಸಿದ್ದಾರೆ.
undefined
ಅವರ ಪತ್ನಿ ಮಂಜುಳಾ ರವರ ಆಧಾಯ ತೆರಿಗೆ ವಿವರಗಳು ಇಂತಿವೆ 2018-19ನೇ ಸಾಲಿನಲ್ಲಿ ಆಧಾಯ ತೆರಿಗೆ ಇಲಾಖೆಗೆ ವಿವರಗಳನ್ನು ಸಲ್ಲಿಸಿರುವುದಿಲ್ಲ. 2019-20ನೇ ಸಾಲಿನಲ್ಲಿ 3,70,000-00 ರೂ ವಿವರಗಳನ್ನು ಸಲ್ಲಿಸಿದ್ದಾರೆ. 2020-21ನೇ ಸಾಲಿನಲ್ಲಿ 4,26,900-00 ರೂ. ವಿವರಗಳನ್ನು ಸಲ್ಲಿಸಿದ್ದಾರೆ. 2021-22ನೇ ಸಾಲಿನಲ್ಲಿ 4,54,000 ರೂ. ವಿವರಗಳನ್ನು ಸಲ್ಲಿಸಿದ್ದಾರೆ. 2022-23ನೇ ಸಾಲಿನಲ್ಲಿ 4,89,130 ರೂ. ವಿವರಗಳನ್ನು ಸಲ್ಲಿಸಿದ್ದಾರೆ.
ಪುಲ್ವಾಮಾ ದಾಳಿ ಬಿಜೆಪಿ ಮಾಡಿಸಿದ ಕೃತ್ಯ, ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಗುಬ್ಬಿ ಶಾಸಕನ ವಿವಾದ!
ಅಭ್ಯರ್ಥಿ ಮಲ್ಲೇಶ್ ಬಾಬು ಇಂದು ಅವಿಭಕ್ತ ಕುಟುಂಬ ಪಾಲುದಾರರಾಗಿದ್ದು, 2018-19ನೇ ಸಾಲಿನಲ್ಲಿ 17,00,195-00 ರೂ. ಆಧಾಯ ತೆರಿಗೆ ವಿವರಗಳನ್ನು ಸಲ್ಲಿಸಿದ್ದಾರೆ. 2019-20ನೇ ಸಾಲಿನಲ್ಲಿ 15,27,230-00 ರೂ. ವಿವರಗಳನ್ನು ಸಲ್ಲಿಸಿದ್ದಾರೆ. 2020-21ನೇ ಸಾಲಿನಲ್ಲಿ 3,45,040-00 ರೂ. ವಿವರಗಳನ್ನು ಸಲ್ಲಿಸಿದ್ದಾರೆ. 2021-22ನೇ ಸಾಲಿನಲ್ಲಿ 11,21,090 ರೂ. ವಿವರಗಳನ್ನು ಸಲ್ಲಿಸಿದ್ದಾರೆ. 2022-23ನೇ ಸಾಲಿನಲ್ಲಿ 19,89,980 ರೂ. ವಿವರಗಳನ್ನು ಸಲ್ಲಿಸಿದ್ದಾರೆ.
ತಮ್ಮ ವಿರುದ್ಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪ್ರಕರಣಗಳು ಬಾಕಿ ಇರುವುದಾಗಿ ತಿಳಿಸಿದ್ದಾರೆ. ಬಂಗಾರಪೇಟೆ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ನ್ಯಾಯಾಲಯದ ಮುಂದೆ ಐ.ಪಿ.ಸಿ 1860 ಧಾರ್ಮಿಕ ಸಂಸ್ಥೆಗಳ ದುರುಪಯೋಗ ಪ್ರಕರಣ 1988 ಕಾಯ್ದೆ ಪ್ರಕಾರ ಬಾಕಿಯಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿರುತ್ತಾರೆ. ಪ್ರಕರಣ ನ್ಯಾಯಾಲಯದ ಮುಂದೆ ಬಾಕಿಯಿದ್ದು, ಸಿದ್ಧದೋಷಿಯಾಗಿರುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.
ಅಭ್ಯರ್ಥಿ ಮಲ್ಲೇಶ್ ಬಾಬು ವಿವಿಧ ಬ್ಯಾಂಕ್‌ಗಳಲ್ಲಿ ಎಸ್.ಬಿ, ಚಾಲ್ತಿ ಹಾಗೂ ನಿಷ್ಚಿತ ಠೇವಣಿಗಳನ್ನು ಹೊಂದಿದ್ದಾರೆ. ಅವರು 47,28,928 ರೂ. ನಗದು ಕೈಯಲ್ಲಿ ಒಂದಿದ್ದಾರೆ. ಅವರ ಪತ್ನಿ ಮಂಜುಳಾ 1,56,890 ರೂ. ನಗದು ಹೊಂದಿದ್ದಾರೆ. ಮಲ್ಲೇಶ್ ಬಾಬು ವಿವಿಧ ಬ್ಯಾಂಕ್‌ಗಳ ಖಾತೆಗಳಲ್ಲಿ 27,52,178 ರೂ. ಠೇವಣಿ ಹೊಂದಿದ್ದಾರೆ. ಅವರ ಪತ್ನಿ ಮಂಜುಳಾ 2,197 ರೂ ಬ್ಯಾಂಕ್‌ಗಳಲ್ಲಿ ಠೇವಣಿ ಹೊಂದಿದ್ದಾರೆ.
ಮಲ್ಲೇಶ್ ಬಾಬು ವಿವಿಧ ಕಂಪನಿಗಳಲ್ಲಿ ಮ್ಯೂಚುಯಲ್ ಫಂಡ್ ಒಟ್ಟು 54,88,124 ರೂ. ಹೂಡಿಕೆ ಮಾಡಿದ್ದಾರೆ. ಅಂಚೆ-ಕಛೇರಿಯಲ್ಲಿ ಉಳಿತಾಯ ಖಾತೆ ಎನ್.ಎಸ್.ಎಸ್ ಹಾಗೂ ವಿಮಾ ಖಾತೆಗಳಲ್ಲಿ 83,60,258 ರೂ. ಹೂಡಿಕೆ ಮಾಡಿದ್ದಾರೆ. ಅಲ್ಲದೇ ಸನ್‌ಬಿರ್ಲಾ ವಿಮಾ ಕಂಪನಿ ಹಾಗೂ ಗೋಲ್ಡ್ಫೀಲ್ಡ್ ಸೋಸೈಟಿ ಸೇರಿದಂತೆ 28,72,134 ರೂ. ಹೂಡಿಕೆ ಮಾಡಿದ್ದಾರೆ. ವಿವಿಧ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ 2,53,54,357 ರೂ. ಮುಂಗಡ ಸಾಲ ನೀಡಿದ್ದಾರೆ.
ಅಭ್ಯರ್ಥಿ ಮಲ್ಲೇಶ್ ಬಾಬು 42,12,881 ರೂ ಮೌಲ್ಯದ ಮೂರು ವಾಹನಗಳನ್ನು ಹೊಂದಿದ್ದಾರೆ. ಅವರು 7,62,000 ರೂ ಚಿನ್ನದ ಆಭರಣಗಳನ್ನು ಹೊಂದಿದ್ದಾರೆ. ಅವರ ಪತ್ನಿ ಮಂಜುಳಾ 28,00,000 ರೂ ಚಿನ್ನದ ಆಭರಣಗಳನ್ನು ಹೊಂದಿದ್ದಾರೆ. ಅಭ್ಯರ್ಥಿ ಮಲ್ಲೇಶ್ ಬಾಬು ಸ್ಟಾಕ್‌ಇನ್‌ಟ್ರೇಡ್ ಒಟ್ಟು 63,53,723 ರೂ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ.
ಅಭ್ಯರ್ಥಿ ಮಲ್ಲೇಶ್ ಬಾಬು ಎರಡು ಎಕರೇ ಸ್ವಯಾರ್ಜಿತ ಕೃಷಿ ಭೂಮಿಯನ್ನು ಹೊಂದಿದ್ದು, ಪ್ರಸ್ತುತ ಅದರ ಮಾರುಕಟ್ಟೆ ಮೌಲ್ಯ 50,00,000 ರೂ ಆಗಿದೆ. ಕಳೆದ ವರ್ಷ ಮಲ್ಲೇಶ್ ಬಾಬು ಕರಿದಿಸಿದ್ದು, ಅದರ ಅಂದಾಜು ಮೊತ್ತ 7,72,700 ರೂ. ಮತ್ತು 48,96,282 ರೂ ಆಗಿದೆ. ಪ್ರಸಕ್ತ ಮಾರುಕಟ್ಟೆ ಮೌಲ್ಯ 12,25,60,000 ಆಗಿದೆ. ಬೆಂಗಳೂರಿನ ಹೆಚ್.ಎ.ಎಲ್ ಎರಡನೇ ಸ್ಟೇಜ್ ಬಡಾವಣೆಯಲ್ಲಿ 2500 ಚದರ ಅಡಿ ವಾಣಿಜ್ಯ ಕಟ್ಟಡ ಹೊಂದಿದ್ದಾರೆ.
ಎಚ್‌ಡಿಕೆ ಬಳಿ ಇದೆ ಕೋಟ್ಯಂತರ ರೂಪಾಯಿ ಆಸ್ತಿ! ಪತಿಗಿಂತ ಪತ್ನಿಯೇ ಶ್ರೀಮಂತೆ! ಒಟ್ಟು ಆಸ್ತಿ ವಿವರ ಇಲ್ಲಿದೆ
ಮಲ್ಲೇಶ್ ಬಾಬು ವಾಣಿಜ್ಯ ಮತ್ತು ವಸತಿ ಕಟ್ಟಡಗಳನ್ನು ಹೊಂದಿದ್ದು, ಅದರ ಮೌಲ್ಯ 16,75,60,000 ಆಗಿದೆ. ಮಲ್ಲೇಶ್ ಬಾಬು 3,27,75,444 ರೂ. ಸಾಲ ಬ್ಯಾಂಕಿಗೆ ಮರುಪಾವತಿ ಮಾಡಬೇಕಾಗಿದೆ. ಅವರ ಪತ್ನಿ ಮಂಜುಳಾ 17,16,804 ರೂ. ಬ್ಯಾಂಕ್ ಆಫ್ ಬರೋಡಗೆ ಸಾಲ ಮರುಪಾವತಿ ಮಾಡಲಾಗಿದೆ.
ಅಭ್ಯರ್ಥಿ ಮಲ್ಲೇಶ್ ಬಾಬು ಶ್ರೀ ಸಾಯಿ ಸರ್ವಿಸ್ ಸ್ಟೇಷನ್‌ನಲ್ಲಿ ವಾಣಿಜ್ಯ ಪೆಟ್ರೋಲ್ ಬಂಕ್ ಹೊಂದಿದ್ದಾರೆ. ಮಲ್ಲೇಶ್ ಬಾಬು 5,80,12,449 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ 32,59,087 ರೂ. ಚರಾಸ್ತಿ ಹೊಂದಿದ್ದಾರೆ.