ಲೋಕಸಭೆ ಚುನಾವಣೆ ಸಮೀಕ್ಷೆ: ಕರ್ನಾಟಕದಲ್ಲಿ ಈ ಬಾರಿಯೂ ಬಿಜೆಪಿ ಪಾಸ್, ತಮಿಳುನಾಡು- ಕೇರಳದಲ್ಲಿ ಪ್ಲಸ್

By Sathish Kumar KHFirst Published Apr 4, 2024, 9:28 PM IST
Highlights

ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಕಮಾಲ್ ಮಾಡಲಿದೆ ಬಿಜೆಪಿ. ಆದರೆ, ಕರ್ನಾಟಕದಲ್ಲಿ ಹಿಂದಿನಂತೆ ಪಾಸ್‌ ಆಗಲಿದ್ದು, ತಮಿಳುನಾಡು ಮತ್ತು ಕೇರಳದಲ್ಲಿ ಪ್ಲಸ್‌ ಆಗಲಿದೆ..

ಬೆಂಗಳೂರು (ಏ.04): ಲೋಕಸಭಾ ಚುನಾವಣೆ ಘೋಷಣೆಯ ನಂತರ ಇಂಡಿಯಾ ಟಿವಿ, ಸಿಎನ್‌ಎಕ್ಸ್ ನಡೆಸಿಸ ಸಮೀಕ್ಷೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಕದಂಬ ಬಾಹುಗಳನ್ನು ಚಾಚಿಕೊಳ್ಳುತ್ತಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹಿಂದಿನಂತೆ ಪಾಸ್ ಆಗಲಿದ್ದು, ಕಾಂಗ್ರೆಸ್‌ ಕೊಂಚ ಚೇತರಿಕೆ ಕಾಣಿಸಿಕೊಳ್ಳಲಿದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

ಲೋಕಸಭಾ ಚುನಾವಣೆಯ ಕಾವು ದಕ್ಷಿಣ ಭಾರತದಲ್ಲಿಯೂ ಕೂಡ ಜೋರಾಗಿದೆ. ದಕ್ಷಿಣದಲ್ಲಿ ಕರ್ನಾಟಕ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಪ್ರಾದೇಶಕ ಪಕ್ಷಗಳೇ ಹಿಡಿತವನ್ನು ಹೊಂದಿವೆ. ಈಗ 2024ರ ಲೋಕಾ ಚುನಾವಣೆಯಲ್ಲಿ ಬಿಜೆಪಿ ತನ್ನ ಕದಂಬ ಬಾಹುಗಳನ್ನು ತಮಿಳುನಾಡು, ಕೇರಳಕ್ಕೂ ವಿಸ್ತರಣೆ ಮಾಡಲು ಸಜ್ಜಾಗಲಿದೆ. ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಕೊಂಚ ಪೆಟ್ಟು ಬಿದ್ದರೂ, ಬಿಗಿ ಹಿಡಿತ ಸಡಿಲಿಸಿಲ್ಲ. ಹೀಗಾಗಿ, 2019ರ ಚುನಾವಣೆಗಿಂತ ಒಂದೆರಡು ಸ್ಥಾನಗಳು ಮಾತ್ರ ವ್ಯತ್ಯಾಸ ಆಗಬಹುದು ಎಂದು ಇಂಡಿಯಾ ಟಿವಿ ಹಾಗೂ ಸಿಎನ್‌ಎಕ್ಸ್‌ ಸಮೀಕ್ಷೆಯಿಂದ ತಿಳಿದುಬಂದಿದೆ.

ಮೋದಿಗೆ ಹ್ಯಾಟ್ರಿಕ್ ಗೆಲುವು ಕೊಟ್ಟ ಚುನಾವಣಾ ಸಮೀಕ್ಷೆ, ಎನ್‌ಡಿಎ-ಇಂಡಿಯಾ ಕೂಟದ ಬಲಾಬಲ ಬಹಿರಂಗ!

ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೈತ್ರಿಕೂಟ ಮತ್ತು ಸ್ಥಳೀಯ ಪಕ್ಷಗಳು ಪಡೆಯುವ ಬಲಾಬಲವೆಷ್ಟು?
ಆಂಧ್ರ ಪ್ರದೇಶ - 25 ಸ್ಥಾನಗಳು
ವೈಎಸ್​ಆರ್        10        -12
ಟಿಡಿಪಿ                 12        +9
ಬಿಜೆಪಿ                  03        +3

ತೆಲಂಗಾಣ - 17 ಸ್ಥಾನಗಳು
ಬಿಜೆಪಿ                05        +1
ಕಾಂಗ್ರೆಸ್            09        +6
ಬಿಆರ್​ಎಸ್        02        -7
ಎಐಎಂಐಎಂ    01        --

ಕೇರಳ - 20 ಸ್ಥಾನಗಳು
ಯುಡಿಎಫ್         10        -9
ಎಲ್​ಡಿಎಫ್        07        +6
ಬಿಜೆಪಿ                 03        +3

ತಮಿಳುನಾಡು - 39 ಸ್ಥಾನಗಳು
ಡಿಎಂಕೆ                  18        -6
ಎಐಎಡಿಎಂಕೆ        04        +3
ಬಿಜೆಪಿ                    03        +3
ಕಾಂಗ್ರೆಸ್                 08        --

ಕರ್ನಾಟಕ - 28 ಸ್ಥಾನಗಳು
ಬಿಜೆಪಿ            22        -4
ಕಾಂಗ್ರೆಸ್​        04        +3
ಜೆಡಿಎಸ್​        02        +1

ನನ್ನ ರಾಜಕೀಯಕ್ಕೆ ಹಳ್ಳಿಮೈಸೂರೇ ಕಾರಣ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ದಕ್ಷಿಣ ಭಾರತದ 5 ರಾಜ್ಯಗಳಲ್ಲಿನ 129 ಸ್ಥಾನಗಳಲ್ಲಿ ಕೂಟಗಳ ಪಾಲೆಷ್ಟು?:
                          Seats    NDA    I.N.D.I.A    ಇತರೆ    
ಕರ್ನಾಟಕ             28        24          04            00
ತೆಲಂಗಾಣ            17        05          09            03
ಆಂಧ್ರ ಪ್ರದೇಶ      25        15          00            10        
ತಮಿಳುನಾಡು      39        03          26            10
ಕೇರಳ                   20        03          10            07

click me!