ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳದಲ್ಲಿ ಕೇಂದ್ರ ಸರ್ಕಾರ ಸಾಲ ಕೊಡದೇ ಹೋದರೆ ಸಂಬಳ ಹಾಗೂ ಪಿಂಚಣಿ ಕೊಡಲು ಪರದಾಡುವ ಪರಿಸ್ಥಿತಿ ಎದುರಾಗಿದೆ.
ವರದಿ: ಶಿವರಾಜ್.ಸಿ, ಬುಲೆಟಿನ್ ಪ್ರೊಡ್ಯೂಸರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಏ.04): ಇತ್ತೀಚೆಗೆ ಆರ್ಥಿಕ ಸಂಕಷ್ಟದಿಂದ ಸುದ್ದಿಯಾಗಿದ್ದ ಶ್ರೀಲಂಕಾ ಹಾಗೂ ಪಾಕಿಸ್ತಾನ.. ವಿಶ್ವಬ್ಯಾಂಕ್ ಮುಂದೆ ಸಾಲಕ್ಕಾಗಿ ಭಿಕ್ಷಾ ಪಾತ್ರೆ ಹಿಡಿದು ನಿಂತಿತ್ತು, ಐಎಂಎಫ್ ಸಾಲ ಕೊಡದೇ ಹೋದ್ರೆ ದೇಶ ನಡೆಸೋಕೆ ಸಾಧ್ಯವಿಲ್ಲ ಎಂಬಂತಹ ಸ್ಥಿತಿಗೆ ತಲುಪಿದ್ದವು.. ಇದೀಗ ಅಂತಹದೇ ಪರಿಸ್ಥಿತಿ ಭಾರತದ ರಾಜ್ಯವೊಂದಕ್ಕೆ ಬಂದಿದೆ.. ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳದಲ್ಲಿ ಕೇಂದ್ರ ಸರ್ಕಾರ ಸಾಲ ಕೊಡದೇ ಹೋದರೆ ಸಂಬಳ ಹಾಗೂ ಪಿಂಚಣಿ ಕೊಡಲು ಪರದಾಡುವ ಪರಿಸ್ಥಿತಿ ಎದುರಾಗಿದೆ.
ನಮ್ಮ ನೆರೆಯ ರಾಜ್ಯ ಕೇರಳದ ಸಾಲದ ಪ್ರಮಾಣ ಇತ್ತೀಚೆಗೆ ಮೀತಿ ಮೀರಿ ಹೆಚ್ಚಾಳವಾಗಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರ ಕೇರಳದ ಮೇಲೆ ಸಾಲ ತೆಗೆದುಕೊಳ್ಳದಂತೆ ನಿರ್ಬಂಧ ಹೇರಿತ್ತು.. ಇದರಿಂದ ಸಿಟ್ಟಿಗೆದ್ದ ಕೇರಳ ಸರ್ಕಾರ ನಿರ್ಬಂಧ ತೆರವು ಮಾಡುವಂತೆ ಕೇಂದ್ರದ ವಿರುದ್ಧ ಅರ್ಜಿ ಹಾಕಿತ್ತು.. ರಾಜ್ಯವು ಪಡೆಯಬಹುದಾದ ಸಾಲದ ಮೇಲೆ ಕೇಂದ್ರ ಮಿತಿ ಹೇರಿದೆ.. ಕೇಂದ್ರ ಸರ್ಕಾರವು ರಾಜ್ಯದ ವಿಶೇಷ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ.. ಆರ್ಥಿಕ ಒಕ್ಕೂಟ ವ್ಯವಸ್ಥೆಯ ತತ್ವಗಳ ಉಲ್ಲಂಘನೆಯಾಗಿದೆ.. ರಾಜ್ಯಗಳ ಪಾಲಿನ ಹಣವನ್ನು ಕೊಡದೇ ಕೇಂದ್ರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಸುಪ್ರೀಂನಲ್ಲಿ ಕೇರಳ ಸರ್ಕಾರ ವಾದ ಮಂಡಿಸಿತ್ತು.
ಮೋದಿಗೆ ಹ್ಯಾಟ್ರಿಕ್ ಗೆಲುವು ಕೊಟ್ಟ ಚುನಾವಣಾ ಸಮೀಕ್ಷೆ, ಎನ್‌ಡಿಎ-ಇಂಡಿಯಾ ಕೂಟದ ಬಲಾಬಲ ಬಹಿರಂಗ!
ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಕೇಂದ್ರ ಸರ್ಕಾರ, ‘15ನೇ ಹಣಕಾಸು ಆಯೋಗದ ಪ್ರಕಾರ ಕೇರಳ ಜಿಡಿಪಿಯ ಶೇ.3ರಷ್ಟು ಸಾಲ ಪಡೆಯಬಹುದು ಆದರೆ ಕೇರಳ ಸರ್ಕಾರದ ವೆಚ್ಚ ನೋಡಿದರೆ ಇಷ್ಟು ಸಾಲದಲ್ಲಿ ಹಣಕಾಸು ನಿರ್ವಹಣೆ ಸಾಧ್ಯವಿಲ್ಲ.. 2023-24ರಲ್ಲಿ 21,852 ಕೋಟಿ ಸಾಲದ ಮಿತಿ ನೀಡಲಾಗಿತ್ತು.. ಮೊದಲ 6 ತಿಂಗಳಲ್ಲೇ ಕೇರಳ ಸರ್ಕಾರ ತನ್ನ ಸಾಲದ ಮಿತಿ ಮೀರಿತ್ತು.. ಈ ವರ್ಷ 13,608 ಕೋಟಿ ಸಾಲ ಪಡೆಯಲು ಅನುಮತಿ ನೀಡಲಾಗಿದೆ.. ಕೇರಳ ಸರ್ಕಾರ 26 ಸಾವಿರ ಕೋಟಿ ಸಾಲ ಪಡೆಯಲು ಅನುಮತಿ ಕೇಳುತ್ತಿದೆ ಇದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಇಬ್ಬರ ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, ಕೇರಳದ ಇಂದಿನ ಸ್ಥಿತಿಗೆ ಹಣಕಾಸು ನಿರ್ವಹಣೆಯಲ್ಲಿನ ಅಶಿಸ್ತೇ ಕಾರಣ, ಆರ್ಥಿಕ ಅಶಿಸ್ತಿನಿಂದಾಗಿ ನೀವೇ ಈ ಸಮಸ್ಯೆ ಸೃಷ್ಟಿಸಿಕೊಂಡಿದ್ದೀರಿ.. ಕೇಂದ್ರ ಸರ್ಕಾರದಿಂದ ಆದ ಸಮಸ್ಯೆ ಎಂದು ಪರಿಹಾರ ನೀಡಲಾಗದು. ಇಂಥ ಪ್ರಕರಣಗಳಲ್ಲಿ ನಾವು ಮಧ್ಯಂತರ ಪರಿಹಾರ ನೀಡುತ್ತಾ ಹೋದಲ್ಲಿ.. ರಾಜ್ಯಗಳಿಂದ ಹೊಸ ಯೋಜನೆ ಘೋಷಿಸಲು ಹೊಸ ಸಾಲಕ್ಕೆ ಬೇಡಿಕೆ ಸೃಷ್ಟಿಯಾಗಲಿದೆ. ‘ಹೆಚ್ಚುವರಿ ಸಾಲಕ್ಕೆ ಅನುಮತಿ ಕೊಟ್ಟರೆ ಮತ್ತಷ್ಟು ಸಾಲಕ್ಕೆ ಕಾರಣವಾಗುತ್ತೆ. ಈಗಾಗಲೇ ಕೇಂದ್ರ ಸರ್ಕಾರದಿಂದ ನಿಮಗೆ ಸಾಕಷ್ಟು ನೆರವು ಸಿಕ್ಕಿದೆ.. ಹೀಗಾಗಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲಾಗದು ಎಂದು ಛೀಮಾರಿ ಹಾಕಿದೆ. ಅಲ್ಲದೆ ಈ ಪ್ರಕರಣ ಸಂವಿಧಾನದ 145ನೇ ವಿಧಿಯಡಿ ಬರುತ್ತದೆ.. ಈ ಪ್ರಕರಣವನ್ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಿ ನ್ಯಾ. ಸೂರ್ಯಕಾಂತ್, ವಿಶ್ವನಾಥನ್ ಪೀಠ ಆದೇಶಿಸಿದೆ.
ಲೋಕಸಭೆ ಚುನಾವಣೆ ಸಮೀಕ್ಷೆ: ಕರ್ನಾಟಕದಲ್ಲಿ ಈ ಬಾರಿಯೂ ಬಿಜೆಪಿ ಪಾಸ್, ತಮಿಳುನಾಡು- ಕೇರಳದಲ್ಲಿ ಪ್ಲಸ್
ಕೇರಳ ಸರ್ಕಾರದ ತನ್ನ ಜಿಡಿಪಿಯ ಶೇ.25ರಷ್ಟು ಹಣವನ್ನ ಸಾಲ ಪಡೆಯಬಹುದು ಆದ್ರೆ ಕೇರಳ ಸರ್ಕಾರ ಶೇ.44ರಷ್ಟನ್ನ ಈಗಾಗಲೇ ಸಾಲ ಪಡೆದಿದೆ. 15ನೇ ಹಣಕಾಸು ಆಯೋಗದ ಪ್ರಕಾರ ಕೇರಳ ಸರ್ಕಾರದ ಜಿಡಿಪಿ ಸುಮಾರು 9.78 ಲಕ್ಷ ಕೋಟಿಯಾಗಿದ್ದು. ಕೇರಳ ಸರ್ಕಾರ ಶೇ.25ರಷ್ಟು ಅಂದರೆ. 2 ಲಕ್ಷ ಕೋಟಿ 44 ಸಾವಿರ ಸಾಲ ಪಡೆಯಬಹುದು ಆದ್ರೆ ಕೇರಳ ಸರ್ಕಾರ ಈಗಾಗಲೇ 4 ಲಕ್ಷದ 29 ಸಾವಿರ ಕೋಟಿ ಸಾಲ ಪಡೆದಿದೆ. ಇದು ತನ್ನ ಜಿಡಿಪಿಯ ಶೇ.44ರಷ್ಟು. ಪ್ರತಿ ವರ್ಷ ಕೇರಳ ಸರ್ಕಾರ ಸುಮಾರು 28 ಸಾವಿರ ಕೋಟಿ ಹಣವನ್ನ ಬಡ್ಡಿ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ.