ಸಿದ್ದರಾಮಯ್ಯ ಏನು ಟ್ವೀಟ್ ಮಾಡಿದ್ದಾರೋ ಅದಕ್ಕೆ ಸದ್ಯದಲ್ಲೇ ಉತ್ತರ ಕೊಡ್ತೇನೆ: ಎಚ್‌ಡಿ ದೇವೇಗೌಡ ಗರಂ

By Ravi Janekal  |  First Published Mar 31, 2024, 4:43 PM IST

ಸಿದ್ದರಾಮಯ್ಯ ಏನು ಟ್ವೀಟ್ ಮಾಡಿದ್ದಾರೆ ಅದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಹುಡುಗರು ಉತ್ತರ ಕೊಟ್ಟಿದ್ದಾರೆ. ಪಬ್ಲಿಕ್ ಆಗಿ ಅವರು ಟ್ವೀಟ್ ಮಾಡಿರುವುದರಿಂದ ಅದಕ್ಕೆ ಏ.4ರಂದು ಐವತ್ತು ಆರವತ್ತು ಜನ ಸೇರ್ತಿರೋ ದೊಡ್ಡಸಭೆಯಲ್ಲಿ ಆ ವಿಷಯದ ಬಗ್ಗೆ ಮಾತಾಡ್ತೇನೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ತಿಳಿಸಿದರು.


ಹಾಸನ (ಮಾ.31): ಸಿದ್ದರಾಮಯ್ಯ ಏನು ಟ್ವೀಟ್ ಮಾಡಿದ್ದಾರೆ ಅದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಹುಡುಗರು ಉತ್ತರ ಕೊಟ್ಟಿದ್ದಾರೆ. ಪಬ್ಲಿಕ್ ಆಗಿ ಅವರು ಟ್ವೀಟ್ ಮಾಡಿರುವುದರಿಂದ ಅದಕ್ಕೆ ಏ.4ರಂದು ಐವತ್ತು ಆರವತ್ತು ಜನ ಸೇರ್ತಿರೋ ದೊಡ್ಡಸಭೆಯಲ್ಲಿ ಆ ವಿಷಯದ ಬಗ್ಗೆ ಮಾತಾಡ್ತೇನೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸಿದ್ದರಾಮಯ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕುಮಾರಸ್ವಾಮಿ, ಪಕ್ಷದ ಬಗ್ಗೆ ಲಘುವಾಗಿ ವ್ಯಾಖ್ಯಾನ ಮಾಡಿದ್ದಾರೆ. ಕಾಂಗ್ರೆಸ್ ಎಲ್ಲಿದೆ? ಜಸ್ಟ್ ಕರ್ನಾಟಕ, ತೆಲಂಗಾಣ ಸೇರಿ ಮೂರ್ನಾಲ್ಕು ರಾಜ್ಯದಲ್ಲಿದೆ. ನೀವು ಅಹಂನಿಂದ ಮಾತಾಡಿದ್ರೆ ಯಾರು ಕೇಳ್ತಾರೆ. ಮನುಷ್ಯನಿಗೆ ಅಧಿಕಾರದ ಮದ ಆ ಮಾತನ್ನು ಆಡಿಸುತ್ತೆ. ಆ ರೀತಿ ಮಾತನಾಡಬಾರದು. ಪಾಪ ಕುಮಾರಸ್ವಾಮಿಗೆ ಮೊನ್ನೆ ಆಪರೇಷನ್ ಆಗಿದೆ, ಚುನಾವಣೆಗೆ ನಿಂತಿದ್ದಾರೆ. 'ಮಗನನ್ನೇ ಗೆಲ್ಲಿಸಲಾಗದವನು ಚುನಾವಣೆಗೆ ನಿಂತಿದ್ದಾನೆ ಅವನನ್ನು ಮುಗಿಸುತ್ತೀನಿ' ಅಂತಾರೆ. ಕಾಂಗ್ರೆಸ್‌ನ್ನ ಹೀನಾಮಾನವಾಗಿ ಬೈಯ್ದ ದಿನಗಳನ್ನು ಮರೆತಿದ್ದೀರಾ ನೀವು? ಆಗ ಯಾವ್ಯಾವ ಶಬ್ದ ಬಳಕೆ ಮಾಡಿ ಮಾತನಾಡಿದ್ದೀರಿ? ನಿಮ್ಮ ತಲೆಯ ತೂಗಿಸಿಕೊಂಡು ಕಾಂಗ್ರೆಸ್ ಬಗ್ಗೆ ಅತ್ಯಂತ ಅಶ್ಲೀಲ ಭಾಷೆಯನ್ನು ಬಳಸಿದ್ದನ್ನು ಮರೆತಿದ್ದೀರಾ? ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

Tap to resize

Latest Videos

ಏ.5ರಂದು ಹಾಸನ ಜಿಲ್ಲೆಗೆ ಸಿಎಂ, ಡಿಸಿಎಂ ಆಗಮಿಸುತ್ತಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ದೇವೇಗೌಡರು, ಬರಲಿ, ಮೂರು ಸಲ ಬರ್ತಾರಂತೆ. ಪ್ರಜ್ವಲ್ ರೇವಣ್ಣ ವಿರುದ್ಧ ಹೋರಾಟ ಮಾಡಲು ಮೂರು ಸಾರಿ ಬರ್ತಾರಂತೆ ಬರಲಿ. ನನ್ನ ಜನ ಇದ್ದಾರೆ, ಮೂರು ಸಾರಿ ಬರಬೇಡಿ ಅಂತಾ ನಾನ್ಯಾಕೆ ಹೇಳಲಿ ಹಾಸನ ಜನ ನಮ್ಮೊಂದಿಗಿದ್ದಾರೆ ಎಂದರು.

ವಾಲ್ಮೀಕಿ ಸಮಾಜಕ್ಕೆ ಕೈ ಮುಗಿದು ಕೇಳ್ತೀನಿ, ರಾಜಣ್ಣನ ಮಾತನ್ನ ಕೇಳ್ಬೇಡಿ: ಎಚ್‌ಡಿ ದೇವೇಗೌಡ

ಎಚ್‌ಡಿ ಕುಮಾರಸ್ವಾಮಿ-ಸುಮಲತಾ ಭೇಟಿ ಮಾಡುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಗೌಡರು, ನಾನು ಫೋನ್ ಮಾಡಿದಾಗ ಅವರು ಚುಂಚನಗಿರಿಯಲ್ಲಿದ್ದರು. ನಂಜವಾಧೂತ ಸ್ವಾಮೀಜಿ ಭೇಟಿ ಮಾಡಿದ್ದಾರೆ. ಸುಮಲತಾ ಕುಮಾರಸ್ವಾಮಿ ಭೇಟಿಯಾಗ್ತಾರೆ. ಅವರೇ ಹೇಳಿದ್ದಾರೆ ತಪ್ಪೇನಿಲ್ಲ. ಅಂಬರೀಶ್ ತೀರಿ ಹೋದಾಗ ಕುಮಾರಸ್ವಾಮಿ ಯಾವ ರೀತಿ ಗೌರವ ಕೊಟ್ಟರು? ಹೀಗಾಗಿ ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ ಎಂದರು.

ಸೋಲಿನ ಭೀತಿಯಿಂದ ದೇವೇಗೌಡರಿಂದ ಪಕ್ಷಾತೀತ ಹೋರಾಟಕ್ಕೆ ಕರೆ: ಡಿ.ಕೆ.ಶಿವಕುಮಾರ್

ಇನ್ನು ದೆಹಲಿಯ ರಾಮಲೀಲಾ ಮೈದಾನದಲ್ಲಿ I.N.D.I.A ಸಮಾವೇಶ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತುಂಬಾ ಸಂತೋಷ್, ಯಾರು ಪ್ರಧಾನಮಂತ್ರಿ ಆಗೋದು ಹೇಳಲಿ ನೋಡೋಣ. ಪ್ರಧಾನ ಮಂತ್ರಿ ಯಾರು ಅಂತಾ ಒಬ್ಬರು ಹೆಸರು ಹೇಳಲಿ ನೋಡೋಣ. ಒಗ್ಗಟ್ಟು ಪ್ರಶ್ನೆ ಅಲ್ಲಾ, ಆ ಸ್ಥಾನದಲ್ಲಿ ಕುಳಿತು ಕೆಲಸ ಮಾಡುವ ಪರ್ಸನಾಲಿಟಿ ಯಾರಿಗಿದೆ ದಯವಿಟ್ಟು ಅವರ ಹೆಸರು ಹೇಳಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು. ಇದೇ ವೇಳೆ," ನೀವು ಹೇಗೆ ಮ್ಯಾನೇಜ್ ಮಾಡಿದ್ರಿ?' ಎಂಬ ಪ್ರಶ್ನೆಗೆ 'ದೈವದ ಆಜ್ಞೆ' ಎಂದು ಆಕಾಶದ ಕಡೆ ಕೈ ತೋರಿಸಿದರು.ಒಂದು ತಪ್ಪಿಲ್ಲದೆ, ಹದಿಮೂರು ಪಾರ್ಟಿಯನ್ನ ಒಟ್ಟಿಗೆ ಸೇರಿಸಿ ಹತ್ತು ತಿಂಗಳು 21 ದಿನ ಏನು ಕೆಲಸ ಮಾಡಿದ್ದೀನಿ ಅನ್ನೋದನ್ನ ಪುಸ್ತಕ ಇದೆಯೆಲ್ಲಾ ಅದನ್ನು ಓದಿ ಆಮೇಲೆ ಕೇಳಿ ಎಂದರು.

click me!