ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಇಡೀ ರಾಜ್ಯದಲ್ಲಿ ಚಿರಪರಿಚಿತರಾಗಿದ್ದು ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಜೆಡಿಎಸ್ -ಬಿಜೆಪಿ ಕಾರ್ಯಕರ್ತರಲ್ಲಿ ಅತ್ಯಂತ ಬೇಗನೆ ಬಾಂಧವ್ಯ ವೃದ್ಧಿಯಾಗಿದೆ. ಉಭಯ ಪಕ್ಷಗಳಲ್ಲಿ ಆತ್ಮವಿಶ್ವಾಸ ಗಟ್ಟಿಯಾಗುತ್ತಿದೆ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ
ರಾಮನಗರ(ಮಾ.31): ಸರಳ ಸಜ್ಜನಿಕೆಗೆ ಹೆಸರಾದ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಪರವಾಗಿ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗು ತ್ತಿದೆ. ಜೆಡಿಎಸ್, ಬಿಜೆಪಿ ಕಾರ್ಯಕರ್ತ ರಲ್ಲಿ ಅಂಡರ್‌ಕರೆಂಟ್ (ವೇವ್) ಅಲೆ ಎದ್ದಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಬಿಡದಿಯ ಕಬ್ಬಾಳಮ್ಮದೇವಿ ಜಾತ್ರೆ ಅಂಗವಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಇಡೀ ರಾಜ್ಯದಲ್ಲಿ ಚಿರಪರಿಚಿತರಾಗಿದ್ದು ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಜೆಡಿಎಸ್ -ಬಿಜೆಪಿ ಕಾರ್ಯಕರ್ತರಲ್ಲಿ ಅತ್ಯಂತ ಬೇಗನೆ ಬಾಂಧವ್ಯ ವೃದ್ಧಿಯಾಗಿದೆ. ಉಭಯ ಪಕ್ಷಗಳಲ್ಲಿ ಆತ್ಮವಿಶ್ವಾಸ ಗಟ್ಟಿಯಾಗುತ್ತಿದೆ. ಹೀಗಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಎರಡೂ ಪಕಗಳ ಕಾರ್ಯಕರ್ತರು ಉತ್ಸಾಹದಿಂದ ಮತಯಾಚಿಸುತ್ತಿದ್ದಾರೆ ಎಂದರು.
ಹೆಗ್ಡೆಗೆ ಟಿಕೆಟ್ ಖಾತರಿಯಾಗುತ್ತಿದ್ದಂತೆ ಶೋಭಾ ಕರಂದ್ಲಾಜೆ ಕ್ಷೇತ್ರ ಬಿಟ್ಟು ಪಲಾಯನ: ನಟರಾಜ್
ಚನ್ನಪಟ್ಟಣದಲ್ಲಿ ನಿಖಿಲ್ ಪ್ರತಿಷ್ಠಾಪನೆಗಾಗಿ ಕುಮಾರಸ್ವಾಮಿ ಮಂಡ್ಯಕ್ಕೆ ಹೋಗಿದ್ದಾರೆಂಬ ಮಾಗಡಿ ಶಾಸಕ ಬಾಲಕೃಷ್ಣರ ಹೇಳಿಕೆಗೆ ಪ್ರತಿಕ್ರಿ ಯಿಸಿ, ಅದು ಅವರ ಕಲ್ಪನೆಯಷ್ಟೇ, ಬಾಲಕೃಷ್ಣ ಅತ್ಯಂತ ಕೀಳುಮಟ್ಟದ ಅಭಿರುಚಿ ಹೊಂದಿರುವ ವ್ಯಕ್ತಿ. ಅವರು ಹೀಗೇಕೆ ಹೇಳಿದರೆಂದು ನನಗೆ ಬಹಳ ನೋವಾಗುತ್ತದೆ. ಅಂತಹಸ್ವಭಾವದವ ನಾನಲ್ಲ ಎಂದರು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಈ ರಾಜ್ಯದ ಆಸ್ತಿ. ಪಕ್ಷವನ್ನು ಸದೃಢವಾಗಿ ಕಟ್ಟಲು ಮತ್ತು ಕಾರಕರ್ತರಲ್ಲಿ ಆತ್ಮಸ್ಥೆರ್ಯ ಬೆಳೆಸಲು ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವ ಶಕ್ತಿ ರಾಮನಗರದ ಜನರು ತುಂಬಿದ್ದಾರೆ. ಹೀಗಾಗಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಒತ್ತಡದಿಂದ ಅವರು ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಲೋಕಸಭಾ ಚುನಾ ವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಾಗಿಯೇ ಮಂಡ್ಯ ಕ್ಷೇತ್ರಕ್ಕೆ ಹೋಗಲಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆ ಮತ್ತು ಜಿಲ್ಲಾಮಟ್ಟದ ಕಾರ್ ಕರ್ತರ ಸಭೆಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕೆಂದು ಕುಮಾರ ಸ್ವಾಮಿ ಅಭಿಮತ ವ್ಯಕ್ತಪಡಿಸಿದ್ದರು. ಆದರೆ 2019ರ ಸಂಸತ್ ಫಲಿತಾಂಶ, 2023ರ ವಿಧಾನಸಭೆ ಫಲಿತಾಂಶ, ನಂತರದಲ್ಲಿ ನಡೆದ ಎಂಎಲ್ಸಿ ಚುನಾ ವಣೆ ಫಲಿತಾಂಶ ಇವೆಲ್ಲವೂ ಮನಸ್ಸಿ ನಲ್ಲಿಟ್ಟುಕೊಂಡ ಕಾರ್ಯಕರ್ತರು ನೀವು ಬರಬೇಕು. ಸಾಕಷ್ಟು ಅನ್ಯಾ ಯಕ್ಕೆ ಒಳಗಾಗಿರುವ ನಮ್ಮ ಜಿಲ್ಲೆ ಉಳಿಸಬೇಕೆಂದು ಒತ್ತಡ ಹೇರಿದರು.
ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದ ನಂತರ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ ಹಾಗಾಗಿ ನೀವು ಜಿಲ್ಲೆಯಿಂದ ಪ್ರತಿನಿಧಿಸಿದರೆ ಕೇಂದ್ರದಿಂದ ಅನುದಾನ ತಂದು ಅಭಿವೃದ್ಧಿಪಡಿಸಬಹುದಾಗಿದೆ ಎನ್ನವುದು ಪಕ್ಷದ ಕಾರ್ಯಕರ್ತರ ಒತ್ತಾಸೆಯಾಗಿದೆ. ಹೀಗಾಗಿ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಅನಿವಾರ್ಯವಾಯಿತು ಎಂದು ನಿಖಿಲ್ ಹೇಳಿದರು.