ಶ್ಯಾಂ ಪ್ರಸಾದ್ ಮುಖರ್ಜಿ ಆರ್ಟಿಕಲ್ 370 ತೆಗೆದು ಹಾಕುವ ಕನಸು ಕಂಡಿದ್ದರು, ಅದನ್ನ ಪ್ರಧಾನಿ ಮೋದಿ ನನಸು ಮಾಡಿದರು ಎಂದು ಬಿಜೆಪಿ ಅಭ್ಯರ್ಥಿ ಸಂಸದ ಬಿ ವೈ ರಾಘವೇಂದ್ರ ನುಡಿದರು.
ಶಿವಮೊಗ್ಗ (ಮಾ.31): ಶ್ಯಾಂ ಪ್ರಸಾದ್ ಮುಖರ್ಜಿ ಆರ್ಟಿಕಲ್ 370 ತೆಗೆದು ಹಾಕುವ ಕನಸು ಕಂಡಿದ್ದರು, ಅದನ್ನ ಪ್ರಧಾನಿ ಮೋದಿ ನನಸು ಮಾಡಿದರು ಎಂದು ಬಿಜೆಪಿ ಅಭ್ಯರ್ಥಿ ಸಂಸದ ಬಿ ವೈ ರಾಘವೇಂದ್ರ ನುಡಿದರು.
ಇಂದು ಶಿವಮೊಗ್ಗದಲ್ಲಿ ಆಯೋಜಿಸಿದ್ದ ಶಿವಮೊಗ್ಗ ನಗರ ಪೇಜ್ ಪ್ರಮುಖರ ಸಮಾವೇಶದಲ್ಲಿ ಅವರು, ಕರ ಸೇವಕರ ತ್ಯಾಗ, ಬಲಿದಾನ ಮಾಡಿದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಿದೆ. ಕುವೈತ್ ನಲ್ಲಿ 6 ಭಾರತೀಯರು ಗಲ್ಲಿಗೇರಿಸುವುದನ್ನು ತಡೆದು ಜೀವಂತವಾಗಿ ಕರೆ ತರಲಾಯಿತು. ರಷ್ಯಾ ಮತ್ತು ಉಕ್ರೇನ್ ಯುದ್ಧದ ವೇಳೆ ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸುವ ಕೆಲಸ ಮಾಡಲಾಯಿತು. ಈ ಚುನಾವಣೆ ಕೇವಲ ಸಂಸದರನ್ನು ಆಯ್ಕೆ ಮಾಡುವುದಲ್ಲ ದೇಶದ ಸಮಗ್ರ ಅಭಿವೃದ್ಧಿಗೆ ಮೋದಿ ಅವರನ್ನು ಪ್ರಧಾನಿ ಮಾಡುವ ಚುನಾವಣೆಯಾಗಿದೆ ಎಂದರು.
undefined
ಬಿಎಸ್‌ವೈ ವಿರುದ್ಧ ಹಗುರ ಮಾತಾಡುವುದು ನಿಲ್ಲಿಸಲಿ; ಕೆಎಸ್ ಈಶ್ವರಪ್ಪ ವಿರುದ್ಧ ಶಾಸಕ ಚನ್ನಬಸಪ್ಪ ಕಿಡಿ
ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದ 6 ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯ 2,61, 000 ಬೇಡ ಜನರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು 260 ಕೋಟಿ ರೂ ಕೇಂದ್ರ ಸರ್ಕಾರ ನೀಡಿದೆ. ಕೃಷಿ ಮತ್ತು ತೋಟಗಾರಿಕೆ ವಿವಿ, ಇಎಸ್ಐ ಆಸ್ಪತ್ರೆ, ಭದ್ರಾವತಿ ಎಫ್ಎಂ ಟ್ರಾನ್ಸ್ಮಿಟರ್ ಸ್ಥಾಪನೆ, ಗಾರ್ಮೆಂಟ್ಸ್ ಆರಂಭಿಸಿ 25 ಸಾವಿರ ಬಡ ಹೆಣ್ಣು ಮಕ್ಕಳಿಗೆ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಜನೌಷಧಿ ಕೇಂದ್ರದ ಮೂಲಕ ಕಡಿಮೆ ದರದಲ್ಲಿ ಔಷಧ ನೀಡುತ್ತಿದ್ದಾರೆ. ಇನ್ನು ಕೋವಿಡ್ ಸಮಯದಲ್ಲಿ ಉಚಿತ ರೇಷನ್, ಲಸಿಕೆ ಹಾಕುವ ಮೂಲಕ ದೇಶದ ಜನತೆಯ ಮೋದಿ ಕಾಪಾಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಕರೆ ಹಾಕುತ್ತಾರೆ ಇದನ್ನು ನಿಲ್ಲಿಸಲು ಮತ್ತೊಮ್ಮೆ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಬೇಕು ಎಂದರು.
ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ನೇತೃತ್ವದ ಸಮಾವೇಶ!