ನಾನು ಇನ್ನೂ ಸತ್ತಿಲ್ಲ, ಬದುಕಿದ್ದೇನೆ ಕೆಲಸ ಮಾಡಲು ಬದ್ದನಾಗಿದ್ದೇನೆ. ರಾಧಾಕೃಷ್ಣಗೆ ಮತ ಕೊಟ್ಟು ನೋಡಿ, ಮುಂದಿನ ಐದು ವರ್ಷದಲ್ಲಿ ಏನ್ ಬದಲಾವಣೆ ಆಗುತ್ತೇ ಅಂತ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಮೋಷನಲ್ ಆಗಿ ಮಾತನಾಡಿದರು.
ಕಲಬುರಗಿ (ಏ.12): ನಾನು ಇನ್ನೂ ಸತ್ತಿಲ್ಲ, ಬದುಕಿದ್ದೇನೆ ಕೆಲಸ ಮಾಡಲು ಬದ್ದನಾಗಿದ್ದೇನೆ. ರಾಧಾಕೃಷ್ಣಗೆ ಮತ ಕೊಟ್ಟು ನೋಡಿ, ಮುಂದಿನ ಐದು ವರ್ಷದಲ್ಲಿ ಏನ್ ಬದಲಾವಣೆ ಆಗುತ್ತೇ ಅಂತ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಮೋಷನಲ್ ಆಗಿ ಮಾತನಾಡಿದರು. ನಾನು ಏನ್ ಮಾಡಿದ್ದೇನೆ ಅಂತಾ ನೀವು ಅರ್ಥ ಮಾಡಿಕೊಂಡಿದ್ದಿರಾ? ನಾನು ಕೆಲಸಗಾರ ಅಂತಿರಿ.. ಆದ್ರೆ ಮತಗಟ್ಟೆಗೆ ಹೋದಾಗ ಏನ್ ಅನಿಸುತ್ತೋ.. ಏನ್ ಆಗುತ್ತೋ ಗೊತ್ತಿಲ್ಲ.. ನಮ್ಮನ್ನು ಮರೆತು ಬಿಡ್ತಿರಿ. ಸಮಾಜದಲ್ಲಿ ಬದಲಾವಣೆ ತರೋದು ನನ್ನ ಗುರಿ. ನನ್ನ ಗುರಿ ನಿಜವಾಗಿಯೂ ಈ ಭಾಗವನ್ನು ಕಲ್ಯಾಣ ಕರ್ನಾಟಕ ಮಾಡೋದು ಎಂದು ಹೇಳಿದರು.
ನನ್ನ ಗುರಿ ಬಸವಣ್ಣನ ತತ್ವ ಉಳಿಯಬೇಕು ಅನ್ನೋದು. ನನ್ನ ಗುರಿ ಅಂಬೇಡ್ಕರ್ ಸಂವಿಧಾನ ಉಳಿಸೋದು. ದೇಶದ ಪ್ರಜಾಪ್ರಭುತ್ವ ಉಳಿಸೋ ಎಲೆಕ್ಷನ್ ಇದು.. ಕೇವಲ ರಾಧಾಕೃಷ್ಣನ ಎಲೆಕ್ಷನ್ ಅಲ್ಲ. ಕೇವಲ ಕಾಂಗ್ರೆಸ್ ಎಲೆಕ್ಷನ್ ಅಲ್ಲ. ಈಗಾಗಲೆ ಮೋದಿ ಎಲ್ಲ ಮಷಿನರಿ ಬಳಸಿಕೊಂಡು ಪ್ರಜಾಪ್ರಭುತ್ವ ಹಾಳು ಮಾಡ್ತಿದ್ದಾರೆ. ನಮ್ಮ ಸರಕಾರ ಬಂದರೆ ಮನೆ ಯಜಮಾನಿಗೆ ಒಂದು ಲಕ್ಷ ಕೊಡುತ್ತೇವೆ. ಅಪ್ರೇಂಟಿಸ್ ಕೆಲಸ ಮಾಡುವ ಯುವಕರಿಗೆ ಒಂದೂ ಲಕ್ಷ ವೇತನ ಕೊಡುತ್ತೇವೆ. ಈ ರೀತಿ ಒಟ್ಟು 25 ಗ್ಯಾರಂಟಿಗಳಿವೆ ಅದನ್ನೆಲ್ಲವನ್ನು ನಾವು ಮಾಡಿ ತೊರಿಸುತ್ತೇವೆ ಎಂದರು.
ಪ್ರಧಾನಿ ಮೋದಿಗೆ ಸವಾಲ್: ಮೋದಿ ಅವರು ಪದೆ ಪದೆ ಕಲಬುರಗಿಗೆ ಬಂದು ಹೋಗಿದ್ದಾರೆ. ಆದ್ರೆ ಬಂದು ಈ ಭಾಗಕ್ಕೆ ಏನು ಕೊಟ್ಟಿದ್ದಾರೆ ? ಹತ್ತು ವರ್ಷ ಆಡಳಿತ ಮಾಡಿದ್ರು ಏನ್ ಮಾಡಿದ್ದಾರೆ ? ಕಲಬುರಗಿಯಲ್ಲಿ ಏಮ್ಸ್ ಮಾಡಿ ಅಂತಾ ಕೇಳಿದ್ರು ಅದನ್ನು ಮಾಡಿಲ್ಲ. ಅವರಿಗೆ ನನ್ನ ಮೇಲೆ ಏನ್ ಸಿಟ್ಟಿದೆಯೋ ಗೊತ್ತಿಲ್ಲ ಅಥವಾ ಯಾರಾದ್ರು ಕಿವಿ ತುಂಬಿದ್ದಾರೋ ಗೊತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಅವರು ಏನೂ ಕೆಲಸ ಮಾಡಿಲ್ಲ. ನಾನು ಐದು ವರ್ಷ ಕೇಂದ್ರ ಮಂತ್ರಿ ಇದ್ದಾಗ ರಾಜ್ಯಕ್ಕೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನಾನು ಮೋದಿ ಅವರಿಗೆ ಚಾಲೆಂಜ್ ಮಾಡ್ತೇನೆ. ನಾನು ಮಾಡಿದ ಅಭಿವೃದ್ದಿಯಲ್ಲಿ ಕೇವಲ ಹತ್ತು ಪರ್ಸೆಂಟ್ ನೀವು ಮಾಡಿದ್ರೆ ನಾನು ಕ್ಷಮೆ ಕೇಳುತ್ತೇನೆ ಎಂದು ಪ್ರಧಾನಿ ಮೋದಿ ಅವರಿಗೆ ಸವಾಲ್ ಹಾಕಿದರು.
undefined
ಕೇಂದ್ರ ಸರ್ಕಾರ ಅಕ್ಕಿ ನೀಡದೆ ತಾರತಮ್ಯ: ಸಚಿವ ಕೆ.ಎಚ್.ಮುನಿಯಪ್ಪ ಆರೋಪ
ನಮ್ಮ ಗ್ಯಾರಂಟಿ ನೋಡಿ ಅವರು ಮೋದಿ ಗ್ಯಾರಂಟಿ ಅಂತಿದ್ದಾರೆ. ನಮ್ಮ ಗ್ಯಾರಂಟಿಯನ್ನ ಅವರು ಕಾಪಿ ಮಾಡ್ತಿದ್ದಾರೆ. ನಿಮ್ಮ ಗ್ಯಾರಂಟಿ ಎಲ್ಲಿದೆ ತಿಳಿಸಿ. ಯಪ್ಪಾ, ನೀನು ಹತ್ತು ವರ್ಷದಲ್ಲಿ, ವರ್ಷಕ್ಕೆ ಎರಡೆರಡು ಕೋಟಿ ನೌಕರಿ ಕೊಡ್ತಿನಿ ಅಂದಿ.. ಕೊಟ್ಟಿಯಾ ? ಹಾಗಾದ್ರೆ ಯಾರು ಸುಳ್ಳು, ಮೋದಿನಾ ಅಥವಾ ನಾನಾ ? ರಾಮನ ಮೇಲೆ ಆಣೆ ಮಾಡಿ ಹೇಳಿ ನಿಮಗೆ ಹದಿನೈದು ಲಕ್ಷ ರೂ. ಸಿಕ್ತಾ ? ಭ್ರಷ್ಟರನ್ನ ನಹೀ ಛೋಡೆಂಗೆ ಅಂತಿರಲ್ಲ, ಭ್ರಷ್ಟರನ್ನ ನಿಮ್ಮ ಪಕ್ಕದಲ್ಲೇ ಇಟ್ಟುಕೊಂಡು ಕುಳಿತಿದ್ದಿರಲ್ಲ. ಮೋದಿ, ಅಮಿತ್ ಶಾ ಅಂತಹವರಿಂದ ಹುಷಾರಾಗಿರಬೇಕು. ಹೋದ ಸಾರಿ ಏನ್ ಆಯಿತೋ ಆಯಿತು. ಕಳೆದ ಬಾರಿಯ ಸೋಲಿನ ಸೇಡು ತೋರಿಸಿಕೊಳ್ಳಿ. ಈ ಬಾರಿ ಕಾಂಗ್ರೆಸ್‌ನ ಗೆಲ್ಲಿಸಬೇಕು ಕಲಬುರಗಿ ಮರ್ಯಾದೆ ಉಳಿಸಬೇಕು ಎಂದು ಮತದಾರರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.