ವೀರಶೈವ-ಲಿಂಗಾಯತರಿಗೆ ಸಮುದಾಯ ಆಕಾಂಕ್ಷಿಗಳಿಗೆ ಬಿಜೆಪಿ ಟಿಕೆಟ್ ನೀಡುವಂತೆ ಗುಬ್ಬಿಯಲ್ಲಿ ಮುಖಂಡರ ಸಭೆ

By Suvarna News  |  First Published Mar 4, 2023, 7:35 PM IST

ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವೀರಶೈವ ಲಿಂಗಾಯತರಿಗೆ ನೀಡುವಂತೆ ಮುಖಂಡರು ಸಭೆ ನಡೆಸಿ ಒತ್ತಾಯಿಸಿದ್ದಾರೆ.


ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್, ತುಮಕೂರು.

ತುಮಕೂರು (ಮಾ.4): ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವೀರಶೈವ ಲಿಂಗಾಯತರಿಗೆ ನೀಡುವಂತೆ ಮುಖಂಡರು ಸಭೆ ನಡೆಸಿ ಒತ್ತಾಯಿಸಿದ್ದಾರೆ. ಗುಬ್ಬಿ ಹೊರವಲಯದ ಹೇರೂರಿನಲ್ಲಿರುವ  ಸಿದ್ದರಾಮೇಶ್ವರ ಸಮುದಾಯದಲ್ಲಿ ಸಭೆ ನಡೆಸಿದ ಮುಖಂಡರು ಬಿಜೆಪಿ ಮುಖಂಡರಿಗೆ ಸಂದೇಶ ರವಾನಿಸಿದ್ದಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ 52 ಸಾವಿರ ವೀರಶೈವ ಲಿಂಗಾಯತ ಮತದಾರರಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಒಬಿಸಿ ಸಮುದಾಯಕ್ಕೆ ಟಿಕೆಟ್ ನೀಡಿದ್ದಾರೆ. ಆದ್ರೂ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ, ಈ ಭಾರಿ ಬಿಜೆಪಿ ಟಿಕೆಟ್ ವೀರಶೈವ ಲಿಂಗಾಯತರಿಗೆ ನೀಡಬೇಕು ಎಂದು ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.‌

Tap to resize

Latest Videos

ಸಭೆಯಲ್ಲಿ 200 ಕ್ಕೂ ಹೆಚ್ಚು ಮುಖಂಡರು ಭಾಗಿಯಾಗಿದ್ದು, ಬಿಜೆಪಿ ಪಕ್ಷದಲ್ಲಿ ದಿಲೀಪ್ ಕುಮಾರ್, ಗ್ಯಾಸ್ ಬಾಬು, ಎನ್.ಸಿ ಪ್ರಕಾಶ್  ಈ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಈ ಮೂವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದವರು, ಈ ಮೂವರಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ನೀಡಿ, ಆಗ  ಗುಬ್ಬಿಯಲ್ಲಿ ಬಿಜೆಪಿ ಸುಲಭವಾಗಿ ಗೆಲುವು ಸಾಧಿಲಿದೆ ಎಂದರು.

ಶಿಗ್ಗಾವಿಯಲ್ಲಿ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ನಿಲ್ಲಿಸಲು ಸುರ್ಜೇವಾಲಾ ಯತ್ನಿಸುತ್ತಿರೋದೇಕೆ?

ಕಳೆದ ಬಾರಿ ಗುಬ್ಬಿಯಲ್ಲಿ ಯಾದವ ಸಮುದಾಯದ ಬೆಟ್ಟಸ್ವಾಮಿಗೆ ಟಿಕೆಟ್ ನೀಡಲಾಗಿತ್ತು. ಇದ್ರಿಂದ ವೀರಶೈವ ಸಮಾಜ ಆಕ್ರೋಶಗೊಂಡತ್ತು. ಜೊತೆಗೆ ಲಿಂಗಾಯತ ಸಮುದಾಯದ ದಿಲೀಪ್ ಕುಮಾರ್ ಸ್ವತಂತ್ರವಾಗಿ ಸ್ಪರ್ಧಿಸಿ 40ಕ್ಕೂ ಹೆಚ್ಚು ಸಾವಿರ ಮತ ಪಡೆದಿದ್ದರು, ಮತ ವಿಭಜನೆದ ಪರಿಣಾಮ ಬಿಜೆಪಿಗೆ ಸೋಲುಂಟಾಗಿತ್ತು.

70 ಕ್ಷೇತ್ರದ ಟಿಕೆಟ್‌ಗೆ ಕಾಂಗ್ರೆಸ್‌ ಲಿಂಗಾಯತ ನಾಯಕರ ಬೇಡಿಕೆ

ಇದೀಗ ಮತ್ತೆ  ಟಿಕೆಟ್ ಬಂಡಾಯ ಶುರುವಾಗಿದ್ದು, ಬಿಜೆಪಿ ಮುಖಂಡರಿಗೆ ಮತ್ತೆ  ತಲೆ ಬಿಸಿ ತಂದಿದೆ. ಗುಬ್ಬಿಯಲ್ಲಿ ವೀರಶೈವ ಲಿಂಗಾಯತ ವರ್ಸಸ್ ಇತರೆ ಸಮುದಾಯ ನಡುವೆ ಟಿಕೆಟ್ ಗಾಗಿ ಲಾಭಿ ಜೋರಾಗಿದ್ದು, ಬಿಜೆಪಿ ಹೈಕಮಾಂಡ್ ಯಾವ ರೀತಿ ಸಮಸ್ಯೆ ಬಗೆ ಹರಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.

click me!