ಲೋಕಸಭಾ ಚುನಾವಣೆಯ 7 ಮತ್ತು ಅಂತಿಮ ಹಂತದ ಮತದಾನ ಜೂ.1ರ ಶನಿವಾರ ನಡೆಯಲಿದೆ. ಇದರೊಂದಿಗೆ 2 ತಿಂಗಳಿಂದ ನಡೆಯುತ್ತಿದ್ದ ಮತದಾನ ಸುದೀರ್ಘ ಪ್ರಕ್ರಿಯೆಗೆ ತೆರೆ ಬೀಳಲಿದೆ. ಈ ಸುತ್ತಿನಲ್ಲಿ 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭಾ ಕ್ಷೇತ್ರದಲ್ಲಿ 904 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.
ನವದೆಹಲಿ(ಜೂ.01): ಲೋಕಸಭಾ ಚುನಾವಣೆಯ 7 ಮತ್ತು ಅಂತಿಮ ಹಂತದ ಮತದಾನ ಜೂ.1ರ ಶನಿವಾರ ನಡೆಯಲಿದೆ. ಇದರೊಂದಿಗೆ 2 ತಿಂಗಳಿಂದ ನಡೆಯುತ್ತಿದ್ದ ಮತದಾನ ಸುದೀರ್ಘ ಪ್ರಕ್ರಿಯೆಗೆ ತೆರೆ ಬೀಳಲಿದೆ.ಈ ಸುತ್ತಿನಲ್ಲಿ 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭಾ ಕ್ಷೇತ್ರದಲ್ಲಿ 904 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.
ಲೋಕಸಭೆಯ ಜೊತೆಗೆ ಒಡಿಶಾ ವಿಧಾನಸಭೆಯ 42 ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ. ಈ ಬಾರಿ ಚುನಾವಣೆಯಲ್ಲಿ 751 ನೋಂದಾಯಿತ ರಾಜಕೀಯ ಪಕ್ಷ ಗಳು ಸ್ಪರ್ಧೆ ಮಾಡಿದ್ದಾರೆ. ಜೊತೆಗೆ 543 ಕ್ಷೇತ್ರಗಳಿಗೆ ಒಟ್ಟು 8,360 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. 1.09 ಲಕ್ಷ ಮತಗಟ್ಟೆಗಳಲ್ಲಿ ಮತದಾನ ನಡೆಯಲಿ ದ್ದು, ಒಟ್ಟು 10.06 ಕೋಟಿ ಮತದಾರ ರಿದ್ದಾರೆ. 5.24 ಕೋಟಿ ಪುರುಷ ಮತದಾ ರರು, 4.82 ಕೋಟಿ ಮಹಿಳಾ ಮತದಾ ರರು ಹಾಗೂ 3,574 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ. ಜೂ.4ರಂದು 543ಕ್ಷೇತ್ರಗಳಮತ ಎಣಿಕೆ ನಡೆಯಲಿದೆ.
Narendra Modi: ಹೇಗೆ ಶುರುವಾಯ್ತು..ಎಲ್ಲಿಗೆ ಬಂತು ಮೋದಿ ದಂಡಯಾತ್ರೆ..? ವಿಪಕ್ಷಗಳ ಒಗ್ಗಟ್ಟು ಫಲ ಕೊಡುತ್ತಾ..?
ಎಲ್ಲೆಲ್ಲಿ ಚುನಾವಣೆ:
ಉತ್ತರ ಪ್ರದೇಶ, ಬಿಹಾರ, ಹಿಮಾಚಲಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಢ ಇವು ಚುನಾವಣೆ ನಡೆವ ರಾಜ್ಯ/ಕೇಂದ್ರಾಡಳಿತ ಪ್ರದೇಶ.
ಪ್ರಮುಖ ಅಭ್ಯರ್ಥಿಗಳು:
ಪ್ರಧಾನಿ ನರೇಂದ್ರ ಮೋದಿ, ರವಿ ಕಿಶನ್, ಕಂಗನಾ ರಾಣಾವತ್, ಅನುರಾಗ್, ಮಿಸಾ ಭಾರತಿ, ಅಭಿಷೇಕ್ ಬ್ಯಾನರ್ಜಿ.
ಲೋಕಸಭಾ ಚುನಾವಣೆ: ಇಂದು ಸಂಜೆ ಎಕ್ಸಿಟ್‌ಪೋಲ್
ನವದೆಹಲಿ: ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಚುನಾವಣೆ ಜೂ.1 ಶನಿವಾರ ಮುಕ್ತಾಯ ವಾಗಲಿದೆ. ಸಂಜೆ 6.30ಕ್ಕೆ ಚುನಾವ ಣೋತ್ತರ ಟೀವಿ ಸಮೀಕ್ಷೆಗಳು ಪ್ರಕಟವಾಗಲಿವೆ. ಹೀಗಾಗಿ ಜೂ.4ರ ಫಲಿತಾಂ ಶಕ್ಕೂ ಮುನ್ನ ಈ 'ಸಂಭಾವ್ಯ ಫಲಿ ತಾಂಶ' ಪ್ರಕಟಣೆ ಕುತೂಹಲ ಕೆರಳಿ ಸಿದೆ. ಇದೇ ವೇಳೆ, 543 ಲೋಕಸಭಾ ಸ್ಥಾನಗಳ ಜತೆಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭೆ ಚುನಾವಣೆಯ ಚುನಾ ವಣೋತ್ತರ ಸಮೀಕ್ಷೆಗಳೂ ಹೊರಬೀಳಲಿವೆ. ಮತದಾನದ ಅಂತಿಮ ದಿನ ವಾದ ಜೂ.1 ರಂದು ಸಂಜೆ 6 ಗಂಟೆಯವರೆಗೆ ಚುನಾವಣೋತ್ತರ ಸಮೀಕ್ಷೆ ಫಲಿತಾಂ ಶವನ್ನು ಪ್ರಕಟಿಸು ವುದನ್ನು ಚುನಾವಣಾ ಆ ಯೋಗ ಸುದ್ದಿ ವಾಹಿನಿಗಳಿಗೆ ನಿರ್ಬಂಧಿಸಿತ್ತು.