Karnataka Election 2023: ಖಾನಾಪುರದಲ್ಲಿ ಭಾಷಾ ರಾಜಕೀಯವೇ ಮೇಲು!

By Kannadaprabha News  |  First Published Feb 24, 2023, 3:13 PM IST

ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಖಾನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ರಣಕಣ ಸಜ್ಜುಗೊಂಡಿದೆ. ಇಲ್ಲಿ ಏನಿದ್ದರೂ ಪಕ್ಷ, ವೈಯಕ್ತಿಕ ಪ್ರತಿಷ್ಠೆ ಗೌಣ. ಏನಿದ್ದರೂ ಇಲ್ಲಿ ಭಾಷಾ ರಾಜಕೀಯವೇ ಮೇಲು. ಇಲ್ಲಿನ ಮತದಾರ ರಾಜಕೀಯ ಪಕ್ಷಗಳನ್ನು ಗೆಲ್ಲಿಸಿರುವುದು 2 ಬಾರಿ ಮಾತ್ರ.


ಶ್ರೀಶೈಲ ಮಠದ

ಬೆಳಗಾವಿ (ಫೆ.24) : ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಖಾನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ರಣಕಣ ಸಜ್ಜುಗೊಂಡಿದೆ. ಇಲ್ಲಿ ಏನಿದ್ದರೂ ಪಕ್ಷ, ವೈಯಕ್ತಿಕ ಪ್ರತಿಷ್ಠೆ ಗೌಣ. ಏನಿದ್ದರೂ ಇಲ್ಲಿ ಭಾಷಾ ರಾಜಕೀಯವೇ ಮೇಲು. ಇಲ್ಲಿನ ಮತದಾರ ರಾಜಕೀಯ ಪಕ್ಷಗಳನ್ನು ಗೆಲ್ಲಿಸಿರುವುದು 2 ಬಾರಿ ಮಾತ್ರ.

Tap to resize

Latest Videos

ಇಲ್ಲಿ ಸ್ವತಂತ್ರ ಅಭ್ಯರ್ಥಿಗಳೇ ಗೆದ್ದಿರುವುದೇ ಹೆಚ್ಚು. 2008 ರಲ್ಲಿ ಬಿಜೆಪಿ ಹಾಗೂ 2018ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಇದನ್ನು ಹೊರತುಪಡಿಸಿದರೇ ಈ ಕ್ಷೇತ್ರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(Maharashtra Integration Committee) ಬೆಂಬಲಿತ ಅಭ್ಯರ್ಥಿಗಳೇ ಹಿಡಿತ ಸಾಧಿಸುತ್ತ ಬಂದಿದ್ದರು. ಈಗ ಈ ಕ್ಷೇತ್ರ ಕಾಂಗ್ರೆಸ್‌(Karnataka congress) ವಶದಲ್ಲಿದೆ. ಇಲ್ಲಿ ಮರಾಠ ಮತಗಳೇ ನಿರ್ಣಾಯಕ. ಪಕ್ಷ, ವೈಯಕ್ತಿಕ ವರ್ಚಸ್ಸಿಗಿಂತಲೂ ಇಲ್ಲಿ ಭಾಷಾ ರಾಜಕೀಯವೇ(Language politics ) ಮೇಲಾಗಿದೆ.

ಈ ತಿಂಗಳಲ್ಲೇ ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಎಚ್‌.ಡಿ.ಕುಮಾರಸ್ವಾಮಿ

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಮಿನಿ ಫೈಟ್‌!

ಕ್ಷೇತ್ರದಲ್ಲಿ ಮರಾಠಿ ಭಾಷಿಕರೇ(Marathi peoples) ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮರಾಠಿ ಮತಗಳೇ(Marathi votes) ಇಲ್ಲಿ ನಿರ್ಣಾಯಕವಾಗಿದೆ. ಮರಾಠಿಗರು ಹಿಂದುತ್ವದ ಸೂತ್ರಕ್ಕೆ ಬದ್ಧರಾಗಿರುವುದು ಬಿಜೆಪಿಗೆ ಅನುಕೂಲವಾಗಬಹುದು ಎನ್ನುವುದು ಪಕ್ಷದ ಮುಖಂಡರ ಲೆಕ್ಕಾಚಾರ. ಹಾಗಾಗಿ ಬಿಜೆಪಿ ಟಿಕೆಟ್‌(BJP Ticket)ಗಾಗಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡ ಸಂಖ್ಯೆಯಲ್ಲಿದೆ. ವಿಠಲ ಹಲಗೇಕರ(Vittal halagekar), ಮಾಜಿ ಶಾಸಕ ಅರವಿಂದ ಪಾಟೀಲ(Arvind Patil), ಡಾ.ಸೋನಾಲಿ ಸರ್ನೋಬಾತ್‌, ಧನಶ್ರೀ ಸರ್‌ದೇಸಾಯಿ, ಪ್ರಮೋದ ಕೋಚೇರಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ಪಕ್ಷದ ವರಿಷ್ಠರಿಗೆ ತಲೆನೋವಾಗಿದೆ. ಬಿಜೆಪಿ ಟಿಕೆಟ್‌ ಪಡೆಯಲು ಆಕಾಂಕ್ಷಿಗಳು ಕಸರತ್ತು ನಡೆಸಿದ್ದು, ಟಿಕೆಟ್‌ಗಾಗಿ ಮಿನಿ ಫೈಟ್‌(Ticket fight) ಶುರುವಾಗಿದೆ. ಕಾಂಗ್ರೆಸ್‌ ವಶದಲ್ಲಿರುವ ಈ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ಬಿಜೆಪಿ ಪಕ್ಷದ ಬಾವುಟ ಹಾರಿಸಲೇ ಬೇಕು, ಕಾಂಗ್ರೆಸ್‌ನ್ನು ಈ ಬಾರಿ ಸೋಲಿಸಲೇ ಬೇಕು ಎಂದು ಬಿಜೆಪಿ ಪಣತೊಟ್ಟಿದ್ದು, ಪಕ್ಷದ ಬಾವುಟ ಹಾರಿಸಲು ಬಿಜೆಪಿ ರಣತಂತ್ರ ರೂಪಿಸಿದೆ.

ಅಂಜಲಿಗೆ ಬೆಂಬಲವಾಗಿ ನಿಲ್ಲುವರೇ ಮರಾಠಿ ಭಾಷಿಕರು?

ಖಾನಾಪುರ(Khanapur)ದಲ್ಲಿ ಮರಾಠಿ ಮತಗಳೇ ನಿರ್ಣಾಯಕವಾಗಿರುವುದರಿಂದ ಹಾಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌(MLA Dr. Anjali Nimbalkar) ಅವರು ಮರಾಠಿಗರ ಪರವಾಗಿಯೇ ನಿಂತಿದ್ದೇ ಹೆಚ್ಚು. ಸಹಜವಾಗಿ ಕನ್ನಡ ಭಾಷಿಕರನ್ನು ಎದುರು ಹಾಕಿಕೊಂಡಿದ್ದರು. ತಮ್ಮ ಮರಾಠಿ ಪರ ನಿಲುವನ್ನು ಬದಲಾಯಿಸಲೇ ಇಲ್ಲ. ವಿಧಾನಸೌಧದೊಳಗೂ, ಹೊರಗೂ ಮರಾಠಿ ಭಾಷಿಕರಿಗೆ ಅಗತ್ಯ ದಾಖಲೆ ಪತ್ರಗಳನ್ನು ಮರಾಠಿ ಭಾಷೆಯಲ್ಲೇ ನೀಡುವಂತೆ ಒತ್ತಾಯಿಸಿರುವುದು ಮರಾಠಿಗರ ಹಿತಾಸಕ್ತಿಗೆ ಪೂರಕವಾಗಿ ನಡೆದುಕೊಂಡಿರುವುದು ಅಂಜಲಿಗೆ ಪ್ಲಸ್‌ ಪಾಂಟ್‌ ಆಗಬಹುದು.

ಕಾಂಗ್ರೆಸ್‌ ಟಿಕೆಟ್‌ ಮೇಲೆ ಬಿಜೆಪಿ ಲೆಕ್ಕಾಚಾರ?

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಹಾಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರಗೆ ಟಿಕೆಟ್‌ ನೀಡಿದರೇ, ಬಿಜೆಪಿ ಪಕ್ಷದ ವತಿಯಿಂದ ಮಹಿಳಾ ಆಕಾಂಕ್ಷಿಗಳಾದ ಡಾ.ಸೋನಾಲಿ ಸರ್ನೋಬಾತ್‌, ಧನಶ್ರೀ ಸರ್‌ದೇಸಾಯಿ ಅವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸುವರೋ? ಅಥವಾ ಪುರಷರಲ್ಲಿ ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿಗಳಾದ ವಿಠಲ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ, ಪ್ರಮೋದ ಕೋಚೇರಿ ಅವರಿಗೆ ಮಣೆ ಹಾಕುವರೋ ಎಂಬುವುದನ್ನು ಕಾದು ನೋಡಬೇಕಾಗಿದೆ.

 

ರಾಜ್ಯದಲ್ಲಿ ಅಪ್ರಾಪ್ತರಿಗೆ ಕಾಂಡೋಮ್‌ ಮಾರಾಟದ ಮೇಲೆ ಯಾವುದೇ ನಿಷೇಧವಿಲ್ಲ, ಸರ್ಕಾರದಿಂದ ಸ್ಪಷ್ಟನೆ

ಸ್ಪರ್ಧೆಗೆ ಸಿದ್ಧವಾದ ಜೆಡಿಎಸ್‌, ಆಪ್‌

ಕಾಂಗ್ರೆಸ್‌ನ ಹಾಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಮತ್ತೊಮ್ಮೆ ತಮ್ಮ ರಾಜಕೀಯ ಅದೃಷ್ಟಪರೀಕ್ಷೆಗೆ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಇರ್ಫಾನ್‌ ತಾಳಿಕೋಟೆ ಕೂಡ ಕಾಂಗ್ರೆಸ್‌ ಟಿಕೆಟ್‌ನ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಜೆಡಿಎಸ್‌ ನಾಸೀರ್‌ ಭಾಗವಾನ್‌ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಆಮ್‌ ಆದ್ಮಿ ಪಾರ್ಟಿ ಕೂಡ ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಸಿದ್ಧತೆ ನಡೆಸಿದ್ದು, ದರ್ಶನ ಬನ್ನೋಶಿ ಸ್ಪರ್ಧಿಸುವ ಸಾಧ್ಯತೆಯಿದೆ. ಅಲ್ಲದೇ, ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಅಭ್ಯರ್ಥಿಯಾಗಿ ಮುರಳೀಧರ ಪಾಟೀಲ ಕಣಕ್ಕಿಳಿಯಲಿದ್ದಾರೆ

click me!