Vijayapura: ರಾಜ್ಯದಲ್ಲಿಯೇ ಬಬಲೇಶ್ವರ ಮತಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವೆ: ಎಂ.ಬಿ.ಪಾಟೀಲ

By Kannadaprabha News  |  First Published Feb 24, 2023, 2:24 PM IST

ಬಬಲೇಶ್ವರ ಮತಕ್ಷೇತ್ರ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಮತದಾರರ ಆಶೀರ್ವಾದದಿಂದ ಕಾಂಗ್ರೆಸ್‌ ಪಕ್ಷ 130 ರಿಂದ 140 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. 


ವಿಜಯಪುರ (ಫೆ.24): ಬಬಲೇಶ್ವರ ಮತಕ್ಷೇತ್ರ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಮತದಾರರ ಆಶೀರ್ವಾದದಿಂದ ಕಾಂಗ್ರೆಸ್‌ ಪಕ್ಷ 130 ರಿಂದ 140 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ಬಬಲೇಶ್ವರದಲ್ಲಿ ಗುರುವಾರ ಆಯೋಜಿಸಿದ್ದ ಬೃಹತ್‌ ವೇದಿಕೆಯಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಆಡಳಿತ ಅವಧಿಯಲ್ಲಿ ನೀರಾವರಿಗೆ . 14 ಸಾವಿರ ಕೋಟಿ ನೀಡಲಾಗಿತ್ತು. ಈ ಪೈಕಿ .10 ಸಾವಿರ ಕೋಟಿ ಖರ್ಚು ಮಾಡಿ ಮಾಡಲಾಗಿದೆ. 

ಮುಳವಾಡ, ತುಬಚಿ-ಬಬಲೇಶ್ವರ ಏತ ನೀರಾವರಿ, ಮುಳವಾಡ . 36 ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದರು. 2014ರ ಅವಧಿಯಲ್ಲಿ ಗುಜರಾತ ಸಿಎಂ ಆಗಿದ್ದ, ಪ್ರಧಾನಿ ಮೋದಿಯವರು 7 ಅಡಿ ಪೈಪ್‌ ಜಾಹೀರಾತು ತೋರಿಸಿದರು. ಆದರೆ , ಇ ನಾವು 14 ಅಡಿ ಎತ್ತರದ ಪೈಪ್‌ ನಿರ್ಮಾಣ ಮಾಡಿ, ಕೃಷ್ಣ ಹರಿಯುವಂತೆ ಮಾಡಿದ್ದೇವೆ. ವರಣಾ ಅಕ್ವಾದಕ್ಟ್ 3 ಕಿಲೋಮೀಟರ್‌ ಇದೆ. ವಿಜಯಪುರದಲ್ಲಿ 14 ಕಿ.ಮೀ ಉದ್ದದ ಅಕ್ವಾಡಾಕ್ಟ್ ನಿರ್ಮಾಣ ಮಾಡಿದ್ದೇವೆ. ಇದು ಏಷ್ಯಾದ ಅತೀ ದೊಡ್ಡ ಅಕ್ವಾಡಕ್ಟ್ ಆಗಿದೆ ಎಂದರು.

Tap to resize

Latest Videos

ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಿಸಬೇಕು: ಬಿ.ಎಲ್‌.ಸಂತೋಷ್‌

ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಮಾತನಾಡಿ, 2013-18ರ ಸಿದ್ದರಾಮಯ್ಯ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಎಂ.ಬಿ.ಪಾಟೀಲರು ಉತ್ತಮ ಕೆಲಸ ಮಾಡಿ, ಈ ಭಾಗಕ್ಕೆ ಸಂಜೀವಿನಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಸ್ಥಿರ ಹಾಗೂ ಉತ್ತಮ ಆಡಳಿತ, ಜೆಡಿಎಸ್‌ ಹಾಗೂ ಬಿಜೆಪಿ ಸರ್ಕಾರದ ಸಾಧನೆಯನ್ನು ತಾಳೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಬರಲು ಆಶೀರ್ವದಿಸಬೇಕು ಎಂದು ಹೇಳಿದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ದೇಶಕ್ಕೆ ಕಾಂಗ್ರೆಸ್‌ ಕೊಡುಗೆಯನ್ನು ನಾವೆಲ್ಲ ಸ್ಮರಿಸಬೇಕು. ಅನೇಕ ಭಾಗ್ಯಗಳನ್ನು ನೀಡಿದ ಸಿದ್ದರಾಮಯ್ಯ ಕಳಂಕವಿಲ್ಲದ, ಭಿನ್ನಮತಕ್ಕೆ ಅವಕಾಶ ಕೊಡದೆ ಆಡಳಿತ ನೀಡಿದ್ದಾರೆ. ಎಂ.ಬಿ.ಪಾಟೀಲರು ಒಳ್ಳೆಯ ಕಾರ್ಯ ಮಾಡಿದ್ದಾರೆ. ಅವರಿಗೆ 2013ರಲ್ಲಿ 7 ಶಾಸಕರ ಸಹಕಾರದಿಂದ ಅವರಿಗೆ ಮಂತ್ರಿಯಾಗಿ ಒಳ್ಳೆಯ ಕಾರ್ಯ ಮಾಡಿದ್ದಾರೆ. ನಮ್ಮಲ್ಲಿ ಬೇಧ, ಭಿನ್ನಾಭಿಪ್ರಾಯ ಇರಬಹುದು. ಆದರೆ ಪಕ್ಷದ ವಿಚಾರದಲ್ಲಿ ನಾವೆಲ್ಲ ಒಂದು. 2013ರಂತೆ ಈ ಸಲವೂ 8 ಕ್ಷೇತ್ರದಲ್ಲಿ ಒಗ್ಗಟ್ಟನಿಂದ ಕಾರ್ಯ ಮಾಡಬೇಕು. 2023ರಲ್ಲಿ ಮತ್ತೆ ಕಾಂಗ್ರೆಸ್‌ ಬರಬೇಕು ಎಂದು ಹೇಳಿದರು.

ಕಣ್ಣೀರಿಗೆ ಕರಗದೇ ಅಭಿವೃದ್ಧಿಗೆ ಮತ ನೀಡಿ: ಸಿ.ಪಿ.ಯೋಗೇಶ್ವರ್‌

ಮಾಜಿ ಸಚಿವ ಜಮೀರ್‌ ಅಹಮದ್‌ ಮಾತನಾಡಿ, ಪ್ರಜಾ ಧ್ವನಿ ಯಾತ್ರೆಯನ್ನು ಬಸವ ಕಲ್ಯಾಣದಿಂದ ಪ್ರಾರಂಭ ಮಾಡಿದ್ದೇವೆ. ಪ್ರಜಾಧ್ವನಿ ಯಾತ್ರೆಯ ಉದ್ದೇಶ ನಾವು ಏನು ಸಾಧನೆ ಮಾಡಿದ್ದೇವೆ. ಏನು ಮಾಡಬೇಕು ಎಂದುಕೊಂಡಿದ್ದೇವೆ ಎನ್ನುವುದನ್ನು ಹೇಳಿಕೊಳ್ಳಲು ಬಂದಿದ್ದೇವೆ. ಬಿಜೆಪಿಯವರು ಅಭಿವೃದ್ಧಿ ಮೇಲೆ ಮತ ಕೇಳಲು ಬರುವುದಿಲ್ಲ. ಎಂ.ಬಿ. ಪಾಟೀಲ ಅವರಿಗೆ ಈ ಕ್ಷೇತ್ರದಲ್ಲಿ ಎದುರಾಳಿ ಅಭ್ಯರ್ಥಿಗಳೇ ಇಲ್ಲ ಎನಿಸುತ್ತಿದೆ. ಬಿಜೆಪಿ ಅವರು ಕೇವಲ ಹಿಂದೂ ಮುಸ್ಲಿಂ ಜಗಳ ಹಚ್ಚುತ್ತಾರೆ ಎಂದು ದೂರಿದರು.

click me!