ಮಂಡ್ಯದಲ್ಲಿ ಜೆಡಿಎಸ್‌ಗೆ ಸೆಡ್ಡು ಹೊಡೆದ ಕೆ.ವಿ. ಶಂಕರೇಗೌಡರ ಮೊಮ್ಮಗ: ಕುಮಾರಣ್ಣಗೆ ಸಂಕಷ್ಟ

Published : Apr 24, 2023, 01:42 PM ISTUpdated : Apr 24, 2023, 02:02 PM IST
ಮಂಡ್ಯದಲ್ಲಿ ಜೆಡಿಎಸ್‌ಗೆ ಸೆಡ್ಡು ಹೊಡೆದ ಕೆ.ವಿ. ಶಂಕರೇಗೌಡರ ಮೊಮ್ಮಗ: ಕುಮಾರಣ್ಣಗೆ ಸಂಕಷ್ಟ

ಸಾರಾಂಶ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸೆಡ್ಡು ಹೊಡೆದು ಹಾಲಿ ಶಾಸಕ ಎಂ. ಶ್ರೀನಿವಾಸ್‌ ಅವರ ಬೆಂಬಲದೊಂದಿಗೆ ಮಾಜಿ ಸಚಿವ ಕೆ.ವಿ. ಶಂಕರೇಗೌಡರ ಮೊಮ್ಮಗ ಕೆ.ಎಸ್. ವಿಜಯಾನಂದ ಸ್ವಾಭಿಮಾನಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ಮಂಡ್ಯ (ಏ.24): ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸೆಡ್ಡು ಹೊಡೆದು ಹಾಲಿ ಶಾಸಕ ಎಂ. ಶ್ರೀನಿವಾಸ್‌ ಅವರ ಬೆಂಬಲದೊಂದಿಗೆ ಮಾಜಿ ಸಚಿವ ಕೆ.ವಿ. ಶಂಕರೇಗೌಡರ ಮೊಮ್ಮಗ ಕೆ.ಎಸ್. ವಿಜಯಾನಂದ ಸ್ವಾಭಿಮಾನಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ರಾಜ್ಯ ರಾಜಕಾರಣದ ವಿಭಿನ್ನ ಚುನಾವಣಾ ಕಣವಾಗಿರುವ ಮಂಡ್ಯ ವಿಧಾನಸಭಾ ಕ್ಷೇತ್ರವನ್ನು (Mandya Assembly constituency) ಜೆಡಿಎಸ್‌ ಭಧ್ರಕೋಟೆ ಎನ್ನಲಾಗುತ್ತಿತ್ತು. ಆದರೆ, ಈಗ ಜೆಡಿಎಸ್‌ನ ಹಾಲಿ ಶಾಸಕ ಎಂ. ಶ್ರೀನಿವಾಸ್‌ (JDS MLA M Srinivas) ಅವರಿಗೆ ಟಿಕೆಟ್‌ ಕೊಡದೇ ಮನ್‌ಮುಲ್‌ ನಿರ್ದೇಶಕ ಬಿ.ಆರ್. ರಾಮಚಂದ್ರಗೆ (BR Ramachandra) ಟಿಕೆಟ್‌ ನೀಡಿದ್ದರು.  ಈ ಹಿನ್ನೆಲೆಯಲ್ಲಿ ಎಂ. ಶ್ರೀನಿವಾಸ್‌ ಬಂಡಾಯವೆದ್ದು ತಮ್ಮ ಅಳಿಯ ಎಚ್.ಎನ್. ಯೋಗೇಶ್‌ (HN Yogesh) ಅವರನ್ನು ಕಣಕ್ಕಿಳಿಸಿದ್ದರು. ಮತ್ತೊಂದೆಡೆ ಜೆಡಿಎಸ್‌ನ ನಾಯಕ ಮಹಾಲಿಂಗೇಗೌಡ (Mahalingegowda) ಕೂಡ ಜೆಡಿಎಸ್‌ಗೆ ಬಂಡಾಯವೆದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರ ಬೆನ್ನಲ್ಲೇ ಮಂಡ್ಯದ ಪಿಇಟಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಮಾಜಿ ಸಚಿವ ಕೆ.ವಿ. ಶಂಕರೇಗೌಡ (KV Shankaregowda) ಅವರ ಮೊಮ್ಮಗ ಪ್ರಸ್ತುತ ಪಿಇಟಿ ಅಧ್ಯಕ್ಷ ವಿಜಯಾನಂದ ಅವರು ನಾಮಪತ್ರ ಸಲ್ಲಿಕೆ ಮಾಡಿ ತಾನು ಪ್ರಭಲ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿದ್ದರು.

ಮತದಾನಕ್ಕೂ ಮುನ್ನ ಜೆಡಿಎಸ್‌ನ 2ನೇ ವಿಕೆಟ್‌ ಪತನ: ಕಾಂಗ್ರೆಸ್‌ ಒತ್ತಡಕ್ಕೆ ಜೆಡಿಎಸ್‌ ಅಭ್ಯರ್ಥಿ ನಾಮಪತ್ರ ವಾಪಸ್‌

ಬಂಡಾಯ ಅಭ್ಯರ್ಥಿಳಿಂದ ವಿಜಯಾನಂದಗೆ ಬೆಂಬಲ: ಮಂಡ್ಯದಲ್ಲಿ ಪಿಇಟಿ ಅಧ್ಯಕ್ಷ ವಿಜಯಾನಂದ (PET President KS Vijayananda) ಅವರು ತಾನು ಜೆಡಿಎಸ್‌ನ ಬಂಡಾಯ ಅಭ್ಯರ್ಥಿಯಲ್ಲ. ಸ್ವಾಭಿಮಾನಿಯಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಇಂದು ಎಲ್ಲ ಪ್ರಭಲ ಬಂಡಾಯ ಅಭ್ಯರ್ಥಿಗಳು ಒಂದಾಗಿ ಶಾಸಕ ಎಂ. ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ಸಭೆಯನ್ನು ನಡೆಸಿದ್ದಾರೆ. ಈ ವೇಳೆ ಎಲ್ಲ ಬಂಡಾಯ ಅಭ್ಯರ್ಥಿಗಳು ಕೆ.ಎಸ್. ವಿಜಯಾನಂದ ಅವರಿಗೆ ಪೂರ್ಣ ಬೆಂಬಲ ಘೋಷಣೆ ಮಾಡುವ ಮೂಲಕ ನಾಮಪತ್ರವನ್ನು ವಾಪಸ್‌ ಪಡೆಯಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಿಗೆ ಸೆಡ್ಡು ಹೊಡೆದು ಸ್ವಾಭಿಮಾನಿ ಅಭ್ಯರ್ಥಿ ಕೆ.ಎಸ್. ವಿಜಯಾನಂದ ಅವರನ್ನು ಗೆಲ್ಲಿಸಬೇಕು ಎಂದು ಪ್ರಮಾಣವನ್ನು ಮಾಡಿಸಿದ್ದಾರೆ.

ಜೆಡಿಎಸ್‌ ಬಂಡಾಯಗಾರರ ಶಪಥ: ಎಲ್ಲ ಜೆಡಿಎಸ್‌ ಎಲ್ಲ ಬಂಡಾಯಗಾರರು ವಿಜಯಾನಂದ ಅವರಿಗೆ ಬೆಂಬಲ ನೀಡುವುದಾಗಿ ಆಣೆ-ಪ್ರಮಾಣ (Promise) ಮಾಡಿ ಶಪಥ ಮಾಡಿದ್ದಾರೆ. ಶಾಸಕ ಎಂ.ಶ್ರೀನಿವಾಸ್ ನಿರ್ಧಾರಕ್ಕೆ ಒಮ್ಮತದ ಸಹಮತ ತೋರಿಸಿದ್ದಾರೆ. ಶ್ರೀನಿವಾಸ್ ಘೋಷಿಸುವ ವ್ಯಕ್ತಿ ಪರ ಒಟ್ಟಾಗಿ ಪ್ರಚಾರದ ಶಪಥ ಮಾಡಿದ್ದಾರೆ. ಅಂತಿಮವಾಗಿ ಶಾಸಕ ಎಂ.ಶ್ರೀನಿವಾಸ್ ಅವರು ಕೆ.ಎಸ್.ವಿಜಯಾನಂದ ಹೆಸರು ಘೋಷಿಸಿ ಎಲ್ಲರೂ ಇವರಿಗೆ ಬೆಂಬಲ ನೀಡಬೇಕು ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ, ಉಳಿದ ಇಬ್ಬರು ಯೋಗೇಶ್‌ ಮತ್ತು ಮಹಾಲಿಂಗೇಗೌಡ ನಾಮಪತ್ರ (nomination Retake) ಹಿಂಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ. ಸ್ವಾಭಿಮಾನಿ ಪಡೆ ಅಭ್ಯರ್ಥಿಯಾಗಿ ಕೆ.ಎಸ್.ವಿಜಯಾನಂದ ಹೆಸರು ಘೋಷಣೆ ಮಾಡಿದ್ದು, ವಿಜಯಾನಂದ ಅವರ ಚುನಾವಣಾ ಖರ್ಚಿಗೆ ಅನುಕೂಲ ಆಗುವಂತೆ ಸ್ವಯಂ ಪ್ರೇರಿತರಾಗಿ ಹಣವನ್ನು ದೇಣಿಗೆ ನೀಡಲಾಯಿತು.

ಸರ್ಕಾರಿ ನೌಕರರಿಗೆ ಸಂಕಷ್ಟ ತಂದಿಟ್ಟ ಚುನಾವಣಾ ಆಯೋಗ: ಎಫ್‌ಐಆರ್‌ ದಾಖಲು

ಏಪ್ರಿಲ್‌ 13 ರಿಂದ ಆರಂಭವಾಗಿದ್ದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್‌ 21ರವರೆಗೆ ಪೂರ್ಣಗೊಂಡಿದೆ. ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ