ರಾಜಕೀಯ ನಿವೃತ್ತಿ ಬಯಸಿದವರಿಗೆ ಬಿಜೆಪಿಯಿಂದ ಬಲವಂತದ ಟಿಕೆಟ್‌: ಶಾಸಕ ಶರತ್‌ ಬಚ್ಚೇಗೌಡ

By Kannadaprabha NewsFirst Published Apr 24, 2023, 12:55 PM IST
Highlights

ನಾನು ಟಿಕೆಟ್‌ ಆಕಾಂಕ್ಷಿಯಲ್ಲ ನನಗೆ ಟಿಕೆಟ್‌ ಬೇಡ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದವರಿಗೆ ಬಿಜೆಪಿ ಬಲವಂತವಾಗಿ ಟಿಕೆಟ್‌ ನೀಡಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ವ್ಯಂಗ್ಯವಾಡಿದ್ದಾರೆ. 

ಸೂಲಿಬೆಲೆ (ಏ.24): ನಾನು ಟಿಕೆಟ್‌ ಆಕಾಂಕ್ಷಿಯಲ್ಲ ನನಗೆ ಟಿಕೆಟ್‌ ಬೇಡ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದವರಿಗೆ ಬಿಜೆಪಿ ಬಲವಂತವಾಗಿ ಟಿಕೆಟ್‌ ನೀಡಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ವ್ಯಂಗ್ಯವಾಡಿದ್ದಾರೆ. ಹೋಬಳಿಯ ಹಸಿಗಾಳ ಗ್ರಾಮದಲ್ಲಿ ಭಾನುವಾರ ಮತಯಾಚಿಸಿ ಮಾತನಾಡಿದ ಅವರು, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಭ್ಯರ್ಥಿಗಳೆ ಸಿಗದೆ ಹಾಲಿ ವಿಧಾನ ಪರಿಷತ್‌ ಸದಸ್ಯರಿಗೆ ಬಲವಂತ ಮಾಡಿ ಟಿಕೆಟ್‌ ನೀಡಲಾಗಿದೆ. ಹೊಸಕೋಟೆ ಕ್ಷೇತ್ರದಲ್ಲಿ ಕಮಲ ಬಾಡಿ ಹೋಗಿದೆ. ಕಮಲ ಅರಳಿಸಲು ನಕಲಿ ಸೃಷ್ಟಿಮಾಡುತ್ತಿದ್ದಾರೆ. 

ನನ್ನ ಹೆಸರಿನ ಇನ್ನೊಂದು ವ್ಯಕ್ತಿಯನ್ನು ಸೃಷ್ಟಿಮಾಡಿದ್ದಾರೆ. ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಚುನಾವಣೆ ಎದುರಿಸಲು ಆಸಕ್ತಿ ಇಲ್ಲದವರಿಗೆ ಟಿಕೆಟ್‌ ಬೇಡ ಅಂದವರಿಗೆ ಬಿಜೆಪಿ ಟಿಕೇಟ್‌ ನೀಡಿದ ಅಭ್ಯರ್ಥಿ ಬೇಕಾ, ಅನುದಾನಕ್ಕಾಗಿ ವಿಧಾನಸೌಧದ ಬಳಿ ಹೋರಾಟ ಮಾಡಿದ ಯುವ ನಾಯಕ ಬೇಕಾ ಮತದಾರರೇ ನೀವೇ ತೀರ್ಮಾನ ಮಾಡಿ ಎಂದು ಶರತ್‌ ಹೇಳಿದರು. ಯುವ ಮುಖಂಡ ಜಿ.ನಾರಾಯಣಗೌಡ ಮಾತನಾಡಿ, ಮಂತ್ರಿ ಮಂಡಲದ ಸಚಿವರೊಬ್ಬರು ರಾಜ್ಯಕ್ಕೆ ಮಂತ್ರಿ ಎಂಬುದನ್ನು ಮರೆತು ಹೋಗಿದ್ದಾರೆ. ಕೇವಲ ಹೊಸಕೋಟೆ ಕ್ಷೇತ್ರವನ್ನೇ ರಾಜ್ಯವನ್ನಾಗಿ ಮಾಡಿಕೊಂಡಿದ್ದಾರೆ. 

ವರುಣ ಕ್ಷೇತ್ರದಲ್ಲಿ ನನಗೆ 100 ಪಟ್ಟು ಗೆಲ್ಲುವ ವಿಶ್ವಾಸ: ಸಚಿವ ಸೋಮಣ್ಣ

ಸತತ 2 ವರ್ಷಗಳ ಕಾಲ ಕೊರೋನಾದಿಂದ ಎಲ್ಲರೂ ಬಡವರಾಗಿದ್ದಾರೆ. ಆದರೆ ಸಚಿವರು ಮಾತ್ರ 500 ಕೋಟಿ ಹೆಚ್ಚಳ ಲಾಭ ಪಡೆದುಕೊಂಡಿದ್ದಾರೆ. ಸದಾ ನನಗೇನು ಬೇಡ ಎನ್ನುವ ವ್ಯಕ್ತಿಗೆ ರಾಜಕೀಯ ಬಿಟ್ಟು ಸನ್ಯಾಸತ್ವ ಸ್ವೀಕಾರ ಮಾಡಲಿ. ಹಸಿವು ಮುಕ್ತ ಕರ್ನಾಟಕ ಪರಿಕಲ್ಪನೆ ಸಾಕಾರಗೊಳ್ಳಲು ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು. ಕಾಂಗ್ರೆಸ್‌ ನೀಡಿರುವ ಎಲ್ಲಾ ಭಾಗ್ಯಗಳು ಮರಳಿ ಬರಬೇಕು, ಜನಪರ ಸರ್ವಧರ್ಮಗಳ ಸಮ್ಮಿಲನದ ಸರ್ಕಾರ ರಚನೆಯಾಗಬೇಕು ಎಂದು ಹೇಳಿದರು. ತಿಮ್ಮಸಂದ್ರ, ಹಸಿಗಾಳ, ಕಮ್ಮಸಂದ್ರ, ಯನಗುಂಟೆ, ಅತ್ತಿಬೆಲೆ, ಸಾದಪ್ಪನಹಳ್ಳಿ, ವಳಗೆರೆಪುರ ಗ್ರಾಮಗಳಲ್ಲಿ ರೋಡ್‌ ಶೋ ನಡೆಸಿದರು. 

ರಾಜ್ಯದಲ್ಲಿ ಅಮುಲ್‌ಗೆ ಅವಕಾಶ ನೀಡಿದ್ದೇ ಕಾಂಗ್ರೆಸ್‌: ನಿರ್ಮಲಾ ಸೀತಾರಾಮನ್‌

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ವಿ.ಸತೀಶಗೌಡ, ಹಿರಿಯ ಮುಖಂಡ ಬಿ.ಎನ್‌.ಗೋಪಾಲಗೌಡ, ತಾಪಂ ಮಾಜಿ ಸದಸ್ಯರಾದ ಡಾ.ಡಿ.ಟಿ.ವೆಂಕಟೇಶ್‌, ಎಚ್‌.ಎಸ್‌.ಮಂಜುನಾಥ್‌, ಲಕ್ಕೊಂಡಹಳ್ಳಿ ಗ್ರಾಪಂ ಅಧ್ಯಕ್ಷ ರಾಧಾಕೃಷ್ಣ, ಲಾರಿಕೃಷ್ಣಪ್ಪ, ಸೋಮಣ್ಣ, ಕಮ್ಮಸಂದ್ರ ವಿಜಯಕುಮಾರ, ದೇವರಾಜ್‌, ಗಿಡ್ಡಪ್ಪನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಕ್ಬರ್‌ ಆಲಿಖಾನ್‌, ಸುಜಾತರಮೇಶ್‌, ನಾರಾಯಣಸ್ವಾಮಿ, ಶ್ರೀನಿವಾಸ್‌, ಈರಣ್ಣ, ಕಮ್ಮಸಂದ್ರ ಪಿಳ್ಳೇಗೌಡ, ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

click me!