ವಿಧಾನಸಭಾ ಚುನಾವಣೆ ಹಿನ್ನೆಲೆ: ಲಿಂಗಾಯತರ ಮತ ಸೆಳೆಯಲು ಬಿಎಸ್‌ವೈ ಮನೆಯಲ್ಲಿ ಮಹತ್ವದ ಸಭೆ

By Govindaraj S  |  First Published Apr 24, 2023, 1:32 PM IST

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಲಿಂಗಾಯತರ ಮತ ಸೆಳೆಯಲು ಬಿ.ಎಸ್.ಯಡಿಯೂರಪ್ಪ ಮನೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ವೀರಶೈವ ಸಮಾಜದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಬಿಎಸ್‌ವೈ ಭಾಗಿಯಾಗಿದ್ದರು. 


ಶಿವಮೊಗ್ಗ (ಏ.24): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಲಿಂಗಾಯತರ ಮತ ಸೆಳೆಯಲು ಬಿ.ಎಸ್.ಯಡಿಯೂರಪ್ಪ ಮನೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ವೀರಶೈವ ಸಮಾಜದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಬಿಎಸ್‌ವೈ ಭಾಗಿಯಾಗಿದ್ದರು. ಶಿವಮೊಗ್ಗದ ವಿನೋಬನಗರದ ಯಡಿಯೂರಪ್ಪ ನಿವಾಸದ ಮುಂಭಾಗದಲ್ಲಿ  ಜಾಗೃತಿ ಮತದಾರರ ಸಭಾ ವತಿಯಿಂದ ಸಭೆ ಆಯೋಜನೆ ಮಾಡಲಾಗಿದ್ದು, ಕಾಂಗ್ರೆಸ್ ಮುಕ್ತ ಭಾರತ ಆಗಬೇಕೆಂಬ ಕಲ್ಪನೆಯಲ್ಲಿ ಸಭೆ ಆರಂಭವಾಗಿದೆ. ಲಿಂಗಾಯತ ಸಮಾಜದ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪರಿಗೆ ಗೆಲ್ಲಿಸಲು ಲಿಂಗಾಯತರ ಪಣ ತೊಟ್ಟಿದ್ದು, ಸಭೆಯಲ್ಲಿ ಲಿಂಗಾಯತ ಸಮಾಜ ಒಗ್ಗೂಡಿಸಿಕೊಂಡು ಹಾಗೂ ಲಿಂಗಾಯತರ ಮತಗಳ ವಿಭಜನೆಯಾಗದಂತೆ ಕರೆ ನೀಡಲಾಗಿದೆ. 

ಎಲ್ಲಾ ಸಮಾಜಗಳಿಗೂ ಕೂಡ ಬಿಜೆಪಿ ಪಕ್ಷ, ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪಿ.ಎಫ್.ಐ. ಬ್ಯಾನ್ ಆದರೂ ಕೂಡ ಕಾಂಗ್ರೆಸ್ ಅದನ್ನು ಪ್ರಶ್ನೆ ಮಾಡುತ್ತೆ. ದೇಶದ್ರೋಹ ಕೆಲಸ ಮಾಡುವ ಸಂಘಟನೆ ಇರಬೇಕಾ ? ಧರ್ಮ, ಸಂಸ್ಕೃತಿ ಉಳಿಸುವ ಸರ್ಕಾರ ಬರಬೇಕೋ ? ದೇಶದ್ರೋಹ ಕೆಲಸ ಮಾಡುವ ಸರ್ಕಾರ ಬರಬೇಕೋ ? ಶಿವಮೊಗ್ಗದಲ್ಲಿ 60 ಸಾವಿರ ಮತಗಳ ಅಂತರದಿಂದ ಗೆದ್ದೆ ಗೆಲ್ಲುತ್ತೆವೆ. ಒಬ್ಬೊಬ್ಬರು ಹತ್ತು, ಹತ್ತು ಓಟು ಹಾಕಿಸುತ್ತೆವೆ ಎಂದು ಎಲ್ಲರೂ ಪಣ ತೊಡಬೇಕು. ಲಿಂಗಾಯತ ಸಮಾಜದ ಪರವಾಗಿ ನಮ್ಮ ಸರ್ಕಾರವಿದೆ. ಲಿಂಗಾಯತರಿಗೆ ಅನೇಕ ಸ್ಥಾನಮಾನಗಳನ್ನು ಬಿಜೆಪಿ ಸರ್ಕಾರ ನೀಡಿದೆ. ಈಗಾಗಲೇ ಜನರ ಬಳಿಗೆ ತೆರಳದವರು, ಕೇವಲ ಮತಕ್ಕಾಗಿ ಅಷ್ಟೇ ಜನರ ಬಳಿ ತೆರಳುತ್ತಿದ್ದಾರೆ. ಇದನ್ನು ಮತದಾರರು ಗಮನಿಸಬೇಕು ಎಂದು ಈಶ್ವರಪ್ಪ ಹೇಳಿದರು.

Tap to resize

Latest Videos

ರಾಜಕೀಯ ನಿವೃತ್ತಿ ಬಯಸಿದವರಿಗೆ ಬಿಜೆಪಿಯಿಂದ ಬಲವಂತದ ಟಿಕೆಟ್‌: ಶಾಸಕ ಶರತ್‌ ಬಚ್ಚೇಗೌಡ

ಶಿವಮೊಗ್ಗ ನಮಗೆ ಪ್ರತಿಷ್ಠೆ ಕಣ, ಗೆದ್ದೆ ಗೆಲ್ಲುತ್ತೇವೆ: ಬೇರೆ ಬೇರೆ ಸಮಾಜದ ಸಭೆ ಮಾಡ್ತಿದ್ದೇವೆ. ಶಿವಮೊಗ್ಗದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ಹಿಂದುಳಿದ ವರ್ಗದ ಎಲ್ಲಾ ಸಮಾಜ ಬೆಂಬಲ‌ ಕೊಡುತ್ತಿವೆ. ನಮ್ಮ ಸಮಾಜ ಎಲ್ಲಾ ಕಡೆ ಬೆಂಬಲ ಕೊಡ್ತೀವೆ. ಶಿವಮೊಗ್ಗ ನಮಗೆ ಪ್ರತಿಷ್ಠೆ ಕಣ, ಗೆದ್ದೆ ಗೆಲ್ಲುತ್ತೇವೆ. ರಾಜ್ಯದಲ್ಲಿ ವಾತಾವರಣ ಚನ್ನಾಗಿದೆ. ಅಮಿತ್ ಶಾ ಮೋದಿ ಪ್ರವಾಸಕ್ಕೆ ಬರುತ್ತಾರೆ. ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ನಮಗೆ ಕನಿಷ್ಟ 125-130 ಸ್ಥಾನ ಬರುತ್ತದೆ. ರಾಜ್ಯದಲ್ಲಿ ನಾವು ಸರ್ಕಾರ ರಚನೆ ಮಾಡ್ತೇವೆ. ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ. ಸಿದ್ದರಾಮಯ್ಯ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದರು.

ವಿಪಕ್ಷದ ನಾಯಕ ಅನ್ನುವ ಬಗ್ಗೆ ಅರಿವಿಲ್ಲದೇ ಮಾತನಾಡುತ್ತಿದ್ದಾರೆ. ಜನ ಸಿದ್ದರಾಮಯ್ಯ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ. ಸಿದ್ದರಾಮಯ್ಯ ಗೆಲ್ಲೋದು ಕಷ್ಟ ಆಗುತ್ತದೆ. ಆ ರೀತಿ‌ ನಾವು ತಂತ್ರ ಮಾಡ್ತಿದ್ದೇವೆ. ಜನ ಈ ಬಾರಿ ಕಾಂಗ್ರೆಸ್ ಗೆ ರಾಜ್ಯದಾದ್ಯಂತ ತಕ್ಕ ಪಾಠ ಕಲಿಸುತ್ತಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಗ್ಗೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ. ಸಂತೋಷ್  ನಮ್ಮ ಹಿರಿಯ ಮುಖಂಡರು. ಬಿಜೆಪಿ ಮುತ್ಸದಿ, ನಮ್ಮ ‌ನಾಯಕರು. ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸಲ್ಲ. ಅವರ ಬಗ್ಗೆ ಟೀಕೆ ಮಾಡಲು ಯೋಗ್ಯತೆ ಇಲ್ಲ ಎಂದು ತಿಳಿಸಿದರು.

ಸಂತೋಷ್ ಸಂಘಟನೆಗಾಗಿ ಕೆಲಸ ಮಾಡ್ತಿದ್ದಾರೆ. ಅವರ ಬಗ್ಗೆ ‌ಮಾತನಾಡೋದು ಸರಿಯಲ್ಲ. ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ರಾಹುಲ್ ಗಾಂಧಿಗೆ ತಲೆ ತಿರುಗಿದೆ. ವೀರಶೈವರ ಬಗ್ಗೆ ರಾಹುಲ್ ಗಾಂಧಿಗೆ ಏನು ಗೊತ್ತಿದೆ? ಬಸವಣ್ಣನವರ ತತ್ವ ಸಿದ್ದಾಂತ ಏನು ಗೊತ್ತಿದೆ.? ಈಗ ವೀರಶೈವರ ಬಗ್ಗೆ ಏನೋ ತಿಳಿದವರ ರೀತಿ ಮಾತನಾಡುತ್ತಿದ್ದಾರೆ. ಅಮಿತ್ ಶಾ, ಮೋದಿ ಮುಂದೆ ರಾಹುಲ್ ಗಾಂಧಿ ಯಾವ ಲೆಕ್ಕ. ಇದು ಎಲ್ಲಾ ನಡೆಯುವುದಿಲ್ಲ, ಕಾಂಗ್ರೆಸ್ ನವರು ಏನೋ ಹೇಳಬೇಕು ಹೇಳ್ತಿದ್ದಾರೆ. ಮತದಾರರು ಬಿಜೆಪಿ ಪರವಾಗಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ರಾಹುಲ್ ಗಾಂಧಿ ರಾಹು ಇದ್ದಾಗೆ: ಇವತ್ತು ಇಡೀ ಸಮಾಜದ ಪ್ರಮುಖರ ಸಭೆ ನಡೆಸುತ್ತೇವೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ಮಾಡ್ತೇವೆ. ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ಹೇಗೆ ಚುನಾವಣೆ ಗೆಲ್ಲಬೇಕು ಅಂತಾ ಚರ್ಚೆ ಮಾಡಿದ್ದೇವೆ. ಭದ್ರಾವತಿಯಲ್ಲಿ ಪಕ್ಷ ಸಂಘಟನೆ ಸ್ವಲ್ಪ ವೀಕ್ ಇದೆ.‌ ಆದರೆ ಅಲ್ಲಿಯೂ ಗೆಲ್ಲಲ್ಲು ಪ್ರಯತ್ನ ಮಾಡ್ತೀವಿ. ಜಿಲ್ಲೆಯಲ್ಲಿ 7 ಕ್ಕೆ 7 ಗೆಲ್ಲುತ್ತೇವೆ. ಶಿವಮೊಗ್ಗ ಕ್ಷೇತ್ರ ನೂರಕ್ಕೆ ನೂರು ಗೆಲ್ಲುತ್ತೇವೆ. ಕಾಂಗ್ರೆಸ್ ಗೆ ಕಾರ್ಯಕರ್ತರು ಇಲ್ಲ. ಹೀಗಾಗಿ ಅವರ ಸಂಬಂಧಿಕರು ಹೊರಗಡೆಯಿಂದ 8-10 ಕಾರಿನಲ್ಲಿ ಬಂದಿದ್ದಾರೆ. ಅವರು ಪ್ರಚಾರ ಮಾಡ್ತಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಯಡಿಯೂರಪ್ಪ ಅವರಿಗೆ ಕಾಂಗ್ರೆಸ್‌ನವರ ತಂಡ ಬಂದಿದೆ ಅಂತಾ ಯಾರೋ ಮಾಹಿತಿ‌ ನೀಡಿದ್ದಾರೆ. ಅವರಿಗೆ ಕಾರ್ಯಕರ್ತರೇ ಇಲ್ಲ. ಹೀಗಾಗಿ ಹೊರಗಡೆಯಿಂದ ಬಂದು ಪ್ರಚಾರ ಮಾಡ್ತಿದ್ದಾರೆ. ರಾಜ್ಯಕ್ಕೆ ನಡ್ಡಾ, ಅಮಿತ್ ಶಾ, ಮೋದಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರುತ್ತಾರೆ. ನಾಳೆಯಿಂದ 7 ರವರೆಗೆ ರಾಜ್ಯ ಪ್ರವಾಸ ಮಾಡ್ತೇನೆ. ರಾಹುಲ್ ಗಾಂಧಿ‌ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಲಿಂಗಾಯತ ಸಮಾಜ ಬಿಜೆಪಿ ಕಡೆ ಇದೆ.‌ ಇದನ್ನು ರಾಹುಲ್ ಗಾಂಧಿಯೇ ಒಪ್ಪಿಕೊಂಡಾಗೆ ಆಯ್ತು. ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ‌ಕಾಲಿಟ್ಟು ಹೋದ್ರೆ ಸಾಕು ನಾವು ಗೆದ್ದಾಯ್ತು ಎಂದರು.

ವರುಣ ಕ್ಷೇತ್ರದಲ್ಲಿ ನನಗೆ 100 ಪಟ್ಟು ಗೆಲ್ಲುವ ವಿಶ್ವಾಸ: ಸಚಿವ ಸೋಮಣ್ಣ

46 ಸಾವಿರ ಅಂತರದಲ್ಲಿ ಕಳೆದ ಬಾರಿ ಗೆದ್ದಿದ್ದು ಈ ಬಾರಿ  60 ಸಾವಿರ ಅಂತರದಲ್ಲಿ ಗೆಲ್ಲಲ್ಲು ಸಹಕಾರಿ ಆಗುತ್ತದೆ. ಅವರು ಬಂದು ಹೋದ್ರೆ‌ ನಾವು ಹೆಚ್ಚಿನ ಅಂತರದಲ್ಲಿ ಗೆಲ್ಲಲ್ಲು ಸಹಕಾರಿಯಾಗುತ್ತದೆ. ರಾಹುಲ್ ಗಾಂಧಿ ರಾಹು ಇದ್ದಾಗೆ ಅಂತಾ ಅವರ ಒಂದು ಗುಂಪೇ ಹೇಳುತ್ತಿದೆ. ಸಿದ್ದರಾಮಯ್ಯ ವರುಣದಲ್ಲಿ ಗೆಲ್ಲೋದಿಲ್ಲ.‌ ಮುಖ್ಯಮಂತ್ರಿ ಆಗಲ್ಲ ಅನ್ನೋದು ಗೊತ್ತಿದೆ. ಕೋಲಾರದಲ್ಲಿ ಟಿಕೇಟ್ ಸಿಗಲಿಲ್ಲ.‌ ನಾನಂತು ಹಾಳಾಗಿ ಹೋಗಿದ್ದೀನಿ. ಕಾಂಗ್ರೆಸ್ ಹಾಳಾಗಿ ಹೋಗಲಿ‌ ಅಂತಾ ಅನೇಕ ಹೇಳಿಕೆಗಳನ್ನು ಕೊಡ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪರಿಣಾಮ ಬೀರುತ್ತದೆ. ಕಾಂಗ್ರೆಸ್ ಹಾಳಾಗಿ ಹೋಗ್ತದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

click me!