ಕಾಳಿದೇವಿಗೆ ಅಪಮಾನವಾಗಿದ್ದನ್ನು ಸಿದ್ದು ಯಾಕೆ ಖಂಡಿಸಿಲ್ಲ?: ಈಶ್ವರಪ್ಪ

By Govindaraj SFirst Published Jul 6, 2022, 5:00 AM IST
Highlights

75 ವರ್ಷಗಳಿಂದ ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡಿದ್ದೆವು. ಪೈಗಂಬರರನ್ನು ಅಪಮಾನ ಮಾಡಿದ್ದಕ್ಕೆ ಇಡೀ ವಿಶ್ವದೆಲ್ಲೆಡೆ ಮುಸಲ್ಮಾನರು ಪ್ರತಿಭಟನೆ ಮಾಡಿದ್ದರು. ಇದೀಗ ಕಾಳಿದೇವಿ ಬಾಯಲ್ಲಿ ಸಿಗರೇಟು ಇಟ್ಟಿದ್ದರ ಬಗ್ಗೆ ಯಾಕೆ ಖಂಡನೆ ವ್ಯಕ್ತವಾಗುತ್ತಿಲ್ಲ. 

ಕಲಬುರಗಿ (ಜು.06): 75 ವರ್ಷಗಳಿಂದ ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡಿದ್ದೆವು. ಪೈಗಂಬರರನ್ನು ಅಪಮಾನ ಮಾಡಿದ್ದಕ್ಕೆ ಇಡೀ ವಿಶ್ವದೆಲ್ಲೆಡೆ ಮುಸಲ್ಮಾನರು ಪ್ರತಿಭಟನೆ ಮಾಡಿದ್ದರು. ಇದೀಗ ಕಾಳಿದೇವಿ ಬಾಯಲ್ಲಿ ಸಿಗರೇಟು ಇಟ್ಟಿದ್ದರ ಬಗ್ಗೆ ಯಾಕೆ ಖಂಡನೆ ವ್ಯಕ್ತವಾಗುತ್ತಿಲ್ಲ. ಈ ವಿಚಾರವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯಾಕೆ ಖಂಡಿಸಿಲ್ಲ? ಎಂದು ಮಾಜಿ ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಯಾವಾಗ ವ್ಯಕ್ತಿಗಳು ತಿರಸ್ಕೃತರ ಪಟ್ಟಿಯಲ್ಲಿ ಸೇರಿಕೊಡು ಬಿಡುತ್ತಾರೋ, ಅಂತಹವರು ಮತ್ತೆ ತಾವು ಇನ್ನೂ ಜೀವಂತ ಇದ್ದೇವೆ ಎಂದು ಎಲ್ಲರಿಗೂ ಸಾರಿ ಹೇಳುವ ಸಲುವಾಗಿ ಉತ್ಸವ ಸ್ವರೂಪದ ಸಮಾರಂಭಗಳನ್ನು ಮಾಡುತ್ತಾರೆ. ಆ.3ರ ದಾವಣಗೆರೆ ಸಿದ್ದರಾಮೋತ್ಸವ ಇಂತಹದ್ದೇ ಒಂದು ಕಾರ್ಯಕ್ರಮ. ರಾಜ್ಯದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್‌ ಜನರಿಂದ ತಿರಸ್ಕೃತಗೊಂಡಿದೆ. ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಮನೆಗೆ ಕಳುಹಿಸಿದ್ದಾರೆ ಎಂದರು.

Latest Videos

ಕೊಲೆಗೆ ಕೊಲೆಯಿಂದಲೇ ಉತ್ತರ: ಕೆ.ಎಸ್‌.ಈಶ್ವರಪ್ಪ

ಜನರಿಂದ ತಿರಸ್ಕೃತ ಸಿದ್ದರಾಮಯ್ಯರಿಂದ ಉತ್ಸವ: ಯಾವಾಗ ವ್ಯಕ್ತಿಗಳು ತಿರಸ್ಕೃತರ ಪಟ್ಟಿಯಲ್ಲಿ ಸೇರಿಕೊಡು ಬಿಡುತ್ತಾರೋ, ಅಂತಹವರು ಮತ್ತೆ ತಾವು ಇನ್ನೂ ಜೀವಂತ ಇದ್ದೇವೆ ಎಂದು ಎಲ್ಲರಿಗೂ ಸಾರಿ ಹೇಳುವ ಸಲುವಾಗಿ ಉತ್ಸವ ಸ್ವರೂಪದ ಸಮಾರಂಭಗಳನ್ನು ಮಾಡುತ್ತಾರೆ. ಆ.3ರ ದಾವಣಗೆರೆ ಸಿದ್ರಾಮೋತ್ಸವ ಇಂತಹದ್ದೇ ಒಂದು ಕಾರ್ಯಕ್ರಮವೇ ಹೊರತು ಅದಕ್ಕೆ ಮಹತ್ವ ನೀಡೋದು ಅಗತ್ಯವಿಲ್ಲ ಎಂದು ಮಾಜಿ ಮಂತ್ರಿ ಕೆಎಸ್‌ ಈಶ್ವರಪ್ಪ ಟೀಕಿಸಿದರು.

ಕಲಬುರಗಿ ಸಂಚಾರದಲ್ಲಿದ್ದ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಯಾವಾಗ ವ್ಯಕ್ತಿಗಳು ತಿರಸ್ಕೃತವಾದಾಗ ತಾವು ಬದುಕಿದ್ದೇವೆ ಅಂತ ತೋರಿಸಿಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಇದು ಸ್ವಯಂ ಪ್ರೇರಿತವಾಗಿ ಆಚರಿಸಿಕೊಳ್ಳುತ್ತಿರುವ ಕಾರ್ಯಕ್ರಮವಾಗಿದೆ ಎಂದು ಲೇವಡಿ ಮಾಡಿದರು.

ದೇಶದಲ್ಲೇ ಕಾಂಗ್ರೆಸ್‌ ತಿರಸ್ಕತ: ರಾಜ್ಯದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್‌ ಜರಿಜನರಿಂದ ತಿರಸ್ಕೃತಗೊಂಡಿದೆ. ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಮನೆಗೆ ಕಳುಹಿಸಿದ್ದಾರೆ. ಮುಸ್ಲಿಮರಿಗೆ ಅಲ್ಹ ಹು ಅಕ್ಬರ್‌ ಹೇಗೆ ಮುಖ್ಯವೋ, ಹಾಗೇ ಸಿದ್ದರಾಮಯ್ಯಗೆ ಜಮೀರ್‌ ಹು ಅಕ್ಬರ್‌ ಮುಖ್ಯವಾಗಿದ್ದಾರೆ. ಮುಸಲ್ಮಾನರು ಇರುವ ಕ್ಷೇತ್ರದಲ್ಲಿಯೇ ಸಿದ್ದರಾಮಯ್ಯ ಸ್ಪರ್ಧಿಸಲಿ, ಕಾಂಗ್ರೆಸ್‌ ಈಗಿರುವಷ್ಟೂಸೀಟುಗಳನ್ನು ಕೂಡ ಗೆಲ್ಲೋದಿಲ್ಲವೆಂದು ವ್ಯಂಗ್ಯವಾಡಿದರು.

ಆರೆಸ್ಸೆಸ್‌ ಬೈಯುವ ಸಿದ್ದು ಚಾಳಿ ಈಗ ಎಚ್‌ಡಿಕೆಗೆ: ಈಶ್ವರಪ್ಪ ಕಿಡಿ

ಸಂಸಾರದಲ್ಲಿ ಹೆಂಡತಿಯೊಂದಿಗೆ ಸಾಮರಸ್ಯ ಇರದೆ ಹೋದ್ರೆ ಆಕೆ ಅಲ್ಲಿಂದ ಜಾಗ ಕಾಲಿ ಮಾಡದೆ ಇನ್ನೇನು ಮಾಡುತ್ತಾಳೆ, ಹಾಗೇ ಮಹಾರಾಷ್ಟ್ರದಲ್ಲಾಗಿದೆ. ಶಿವಸೇನಿ ಶಾಸಕರು ಹಿಂದುತ್ವದ ವಿಚಾರದಲ್ಲಿ ಸಿಡಿದೆದ್ದು ಹೊರ ಬಂದಿದ್ದಾರೆ. ಯಾವ ಪಕ್ಷದಲ್ಲಿ ಶಿಸ್ತು ಇರುವುದಿಲ್ಲವೋ, ಯಾವ ಪಕ್ಷದಲ್ಲಿ ನಾಯಕತ್ವ ಇರುವುದಿಲ್ಲವೋ, ಆ ಪಕ್ಷ ಪ್ರಜಾಪ್ರಭುತ್ವದಲ್ಲಿ ಉಳಿಯಲ್ಲ. ಮಹಾರಾಷ್ಟ್ರದಲ್ಲಿ ಸಿಎಂ ಸ್ಥಾನಕ್ಕಾಗಿ ಠಾಕ್ರೆ ಮಗ ಹಿಂದೂತ್ವವನ್ನೇ ಮಾರಾಟ ಮಾಡಿದ ಎಂದರು.

click me!