
ಶಿವಮೊಗ್ಗ (ಸೆ.08): ಕರ್ನಾಟಕ ರಾಜ್ಯ ಮುಸಲ್ಮಾನರ ರಾಜ್ಯ ಆಗುತ್ತಿದೆ. ನೇರವಾಗಿ ಮುಸ್ಲಿಮರಿಗೆ ಬೆಂಬಲ ಕೊಡುವ ರಾಜ್ಯ. ಎಲ್ಲೆಲ್ಲಿ ಮುಸ್ಲಿಮರು ಗುಂಡಾಗಿರಿ ಮಾಡುತ್ತಿದ್ದಾರೆ ಅವರ ಮೇಲೆ ಬಿಗಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನಂತರ ಮಾತನಾಡಿದ ಅವರು, ಡಿಜೆ ಹಳ್ಳಿ, ಕೇಜೆ ಹಳ್ಳಿ ಘಟನೆ ಬುದ್ಧಿ ಬಂದಿಲ್ಲ ಎಂದು ಹೇಳುವುದಿಲ್ಲ. ಮುಸಲ್ಮಾನರ ಮನಸ್ಥಿತಿ ಅದೇ ರೀತಿ ಮುಂದುವರಿಯಬೇಕು. ನಿಮ್ಮ ಜೊತೆ ನಾವಿದ್ದೇವೆ ಎಂಬ ಭಾವನೆ ಬರುವ ರೀತಿಯಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ ಎಂದರು.
ಮಂಡ್ಯ ಮದ್ದೂರಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಗಲಾಟೆ ಮಾಡುವ ಮಾಡಿದವರನ್ನು ಒದ್ದು ಒಳಗೆ ಹಾಕುವ ಬಿಟ್ಟು ಹಿಂದೂ ಸಮಾಜ ಅರೆಸ್ಟ್ ಮಾಡುತ್ತಿದ್ದಾರೆ. 144 ಸೆಕ್ಷನ್ ಹಾಕುತ್ತಾರೆ ಹಿಂದೂಗಳನ್ನು ಹೆಚ್ಚಾಗಿ ಅರೆಸ್ಟ್ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಸಾಗರದಲ್ಲಿ ಮುಸ್ಲಿಂ ಹುಡುಗರು ಗಣಪತಿ ಮೆರವಣಿಗೆ ಮೇಲೆ ಹೋಗಿದ್ದರೆ ಪೊಲೀಸರು ತಾಯಿ ಕ್ಷಮೆ ಕೇಳಿದ್ದಾರೆ ಎಂದು ಸಹಕಾರ ಕೊಡುತ್ತಿದ್ದಾರೆ. ಮುಸ್ಲಿಮರ ಮೆರವಣಿಗೆಯಲ್ಲಿ ಮುಗಿಯುವುದಲ್ಲ ಅಡ್ಡ ಹೋಗಿದ್ದರೆ ಬದುಕುತ್ತಿದ್ದರಾ. ಕಗ್ಗೊಲೆಗಳು ಆಗುತ್ತಿದ್ದವು ಬದುಕುತ್ತಿದ್ದರಾ ಎಂದು ತಿಳಿಸಿದರು.
ಮುಸ್ಲಿಮರ ಮನಸ್ಥಿತಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಹಿಂದು ಸಮಾಜ ಜಾಗೃತಿ ಆಗಬೇಕಿದೆ. ಹಿಂದೂ ಸಮಾಜ ಜಾಗೃತಿ ಆಗದಿದ್ದರೆ ಕೆಟ್ಟ ಮನಸ್ಥಿತಿಯ ಮುಸ್ಲಿಮರು ರಾಜ್ಯದ ಕಾಂಗ್ರೆಸ್ ಸರ್ಕಾರ ನಮ್ಮದೇ ಸರ್ಕಾರ ಎಂದು ಅನಿಸಿದೆ. ನಾವೇನೇ ಆಟ ಆಡಿದರೂ ನಮಗೆ ತೊಂದರೆ ಕೊಡುವುದಿಲ್ಲ ಎಂದು ಆಟ ಆಡುತ್ತಿದ್ದಾರೆ. ಈ ಸರ್ಕಾರಕ್ಕೆ ಬುದ್ಧಿ ಇಲ್ಲ ಎಂದು ಹೇಳಲು ಇಷ್ಟಪಡುವುದಿಲ್ಲ. ಮುಸ್ಲಿಮರ ಬಗ್ಗೆ ರಾಜ್ಯ ಸರ್ಕಾರದ ಭಾವನೆ ಹಾಗೆ ಇದೆ. ಅದಕ್ಕಾಗಿ ಮುಸ್ಲಿಮರು ಎದ್ದು ಕುಣಿಯುತ್ತಿದ್ದಾರೆ. ಹಿಂದೂ ಸಮಾಜ ಜಾಗೃತಿ ಧರ್ಮಸ್ಥಳದ ಪ್ರಕರಣದಲ್ಲಿ ಆಗಿದೆ ಎಂದು ಹೇಳಿದರು.
ಎಸ್‌ಐಟಿ ರಚನೆ ಆಗುತ್ತಿದ್ದಂತೆ ನೂರಾರು ಹೆಣಗಳಿದ್ದಾವೆ ಎಂಬ ಭಾವನೆ ಇತ್ತು. ಎಸ್‌ಐಟಿ ಬಿಗಿಯಾದ ಕೆಲಸ ಪ್ರಾರಂಭ ಮಾಡಿದ ಮೇಲೆ ಒಬ್ಬೊಬ್ಬರಾಗಿ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸಾಧು ಸಂತರು ಹಳ್ಳಿ ರಾಜ್ಯದ ಹಿಂದೂ ಸಮಾಜ ಜಾಗೃತ ಆಗಿದೆ. ನಾವೆಲ್ಲ ಹೊಂದಿದ್ದೇವೆ ಧರ್ಮಸ್ಥಳದ ಪರವಾಗಿ ಇದ್ದೇವೆ ರಕ್ಷಣೆ ಮಾಡುತ್ತೇವೆ ಎಂದು ಬಂದಿದ್ದಾರೆ. ವೀರೇಂದ್ರ ಹೆಗಡೆ ಪರ ಧರ್ಮಸ್ಥಳದ ಪರ ಹಿಂದೂ ಸಮಾಜದ ಪರ ಬಂದಿದ್ದಾರೆ. ಕಮ್ಯುನಿಸ್ಟ್ ಸಂಸದ ಬುರುಡೆ ಆತನ ಬಳಿ ಹೋಗಿತ್ತು ಆತನಿಗೆ ಏನು ಕೆಲಸ, ಮುಸಲ್ಮಾನ ಸಮೀರ್ ಆತನಿಗೆ ಏನು ಕೆಲಸ. ಬುರುಡೆ ಅನಾಮಿಕ ನಾನು ಮೊದಲು ಒದ್ದು ಒಳಗೆ ಹಾಕಿ ಎಂದು ಹೇಳಿದ್ದೆ. ಕಾಂಗ್ರೆಸ್‌ನವರು ಗುಂಡಗಳಿಗೆ ಬೆಂಬಲ ಕೊಡುತ್ತಲೇ ಇರುತ್ತಾರೆ. ಇದೇ ಕಾಂಗ್ರೆಸ್ ಸರ್ಕಾರ ಮತ್ತೆ ಮತ್ತೆ ಬರಲ್ಲ ಇರಲ್ಲ. ಪೊಲೀಸರು ಈಗಿನಂತೆ ಕುಣಿದರೆ ರಾಜ್ಯದಲ್ಲಿ ಹಿಂದೂಗಳ ಸರ್ಕಾರ ಬರುತ್ತೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.