ದಸರಾ ಉದ್ಘಾಟನೆ ವಿವಾದ: ಬಾನು ಮುಷ್ತಾಕ್ ವಿರುದ್ಧ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪ್ರತಾಪ್ ಸಿಂಹ

Published : Sep 08, 2025, 12:35 PM IST
ದಸರಾ ಉದ್ಘಾಟನೆ ವಿವಾದ: ಬಾನು ಮುಷ್ತಾಕ್ ವಿರುದ್ಧ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪ್ರತಾಪ್ ಸಿಂಹ

ಸಾರಾಂಶ

ಬಾನು ಮುಷ್ತಾಕ್ ಮುಸ್ಲಿಂ ಎನ್ನುವ ಕಾರಣಕ್ಕೆ ನನ್ನ ವಿರೋಧವಿಲ್ಲ. ಕನ್ನಡಾಂಬೆ ಬಗ್ಗೆ ಬಾನು ಮುಷ್ತಾಕ್ ಹೇಳಿರುವ ಹೇಳಿಕೆ ಬಗ್ಗೆ ನಮ್ಮ ತಕಾರರು ಇದೆ. ಹಿಂದೂ ಸಂಸ್ಕಾರಗಳ ಬಗ್ಗೆ ಬಾನು ಮುಷ್ತಾಕ್‌ಗೆ ಒಪ್ಪಿಗೆ ಇಲ್ಲ ಎಂದರು ಪ್ರತಾಪ್ ಸಿಂಹ.

ಮೈಸೂರು (ಸೆ.08): ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಆಯ್ಕೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಅರ್ಜಿ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಅವರು, ಬಾನು ಮುಷ್ತಾಕ್ ಸಾಧನೆ ಬಗ್ಗೆ ನನಗೆ ಗೌರವವಿದೆ. 100% ದಸರಾ ಧಾರ್ಮಿಕ ಆಚರಣೆ. ನಮ್ಮ ಧಾರ್ಮಿಕ ಆಚರಣೆ ಬಗ್ಗೆ ಬಾನು ಮುಷ್ತಾಕ್‌ಗೆ ಅಸಮಾಧಾನಗಳಿವೆ. ಬಾನು ಮುಷ್ತಾಕ್ ಮುಸ್ಲಿಂ ಎನ್ನುವ ಕಾರಣಕ್ಕೆ ನನ್ನ ವಿರೋಧವಿಲ್ಲ. ಕನ್ನಡಾಂಬೆ ಬಗ್ಗೆ ಬಾನು ಮುಷ್ತಾಕ್ ಹೇಳಿರುವ ಹೇಳಿಕೆ ಬಗ್ಗೆ ನಮ್ಮ ತಕಾರರು ಇದೆ. ಹಿಂದೂ ಸಂಸ್ಕಾರಗಳ ಬಗ್ಗೆ ಬಾನು ಮುಷ್ತಾಕ್‌ಗೆ ಒಪ್ಪಿಗೆ ಇಲ್ಲ ಎಂದರು.

ಕನ್ನಡಾಂಬೆ ಬಗ್ಗೆ ಬಾನು ಮುಷ್ತಾಕ್ ಹೇಳಿರುವ ಬಗ್ಗೆ ಯಾಕೆ ಸಿಎಂ ಮಾತಾಡುತ್ತಿಲ್ಲ. ಕನ್ನಡಾಂಬೆಯ ಅರಿಶಿನ ಕುಂಕುಮ ಬಗ್ಗೆ ಆಡಿರುವ ಮಾತಿನ ಬಗ್ಗೆ ಬಾನು ಮುಷ್ತಾಕ್ ಕ್ಷಮೆ ಕೇಳಿದ್ದರೆ ನಾನು ಕೋರ್ಟ್ ಗೆ ಹೋಗುತ್ತಿರಲಿಲ್ಲ. ಕ್ಷಮೆಯೆ ಕೇಳದವರು ಚಾಮುಂಡಿ ದೇವಿಗೆ ಗೌರವ ಕೊಡುತ್ತೀರಾ ಎಂದು ಹೇಗೆ ನಂಬುವುದು. ಬಾನು ಮುಷ್ತಾಕ್ ಆಡಿರುವ ಮಾತಿಗೆ ಸ್ಪಷ್ಟೀಕರಣ ಕೊಡಲಿಲ್ಲ. ಭುವನೇಶ್ವರಿ ಬಗ್ಗೆ ಹೇಳಿರುವ ಹೇಳಿಕೆ ಬಗ್ಗೆ ಯಾಕೆ ಬಾನು ಮುಷ್ತಾಕ್ ಮಾತಾಡುತ್ತಿಲ್ಲ. ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗುತ್ತದೆ ಎಂದು ಕಾನೂನಾತ್ಮಕವಾಗಿಯೆ ಹೋರಾಟಕ್ಕೆ ಇಳಿದಿದ್ದೇನೆ. ಮುಸ್ಲಿಂರು ಶಾಂತಿ ಪ್ರಿಯರು ಎಂದು ಸಿಎಂ ಮೊನ್ನೆ ಹೇಳಿದ್ದಾರೆ. ಮಂಡ್ಯದಲ್ಲಿ ಗಣೇಶ ಮೂರ್ತಿ ಮೇಲೆ ಕಲ್ಲು ಎಸೆದಿದ್ದು ಯಾರು ಸಿದ್ದರಾಮಯ್ಯ ಅವರೇ? ಹಿಂದೂಗಳಷ್ಟು ಜಾತ್ಯಾತೀತರು ಮತ್ತೊಬ್ಬರು ಇಲ್ಲ.

ಸಿಎಂ ಹಿಂದೂಗಳಿಗೆ ಜಾತ್ಯಾತೀತ ಪಾಠ ಮಾಡಬೇಡಿ. ನಮ್ಮ ಸಂಸ್ಕೃತಿ ಬಗ್ಗೆ ಅಸಡ್ಡೆ ಮಾತಾಡುವ ಬಾನು ಮುಷ್ತಾಕ್ ಅವರು ನಮ್ಮ ಕಣ್ಣಿಗೆ ಘಜ್ನಿ, ಮೊಘಲರ ರೀತಿ ಕಾಣಿಸಿ ಕೊಳ್ಳುತ್ತಾರೆ. ಸಿಎಂ ಮುಸ್ಲಿಂರಿಗೆ ಉತ್ತೇಜನ ಕೊಡುತ್ತಿದ್ದಾರೆ. ಮುಸ್ಲಿಂರು ಶಾಂತಿ ಪ್ರಿಯರು ಎಂದ ಕ್ಷಣ ಮುಸ್ಲಿಂ ಇಲ್ಲಿ ಕಲ್ಲು ಎಸೆದಿದ್ದಾರೆ. ಸಿಎಂ - ಡಿಸಿಎಂ ಇಬ್ಬರಿಗೆ ಕೈ ಮುಗಿದು ಕೇಳ್ತಿನಿ ಬಾನು ಮುಷ್ತಾಕ್ ಭಾಷಣ ಒಪ್ಪುತ್ತೀರಾ ಹೇಳಿ? ಒಪ್ಪುವುದಾದರೆ ಧೈರ್ಯವಾಗಿ ಹೇಳಲಿ. ಸಿಎಂ - ಡಿಸಿಎಂ ಇಬ್ಬರು ಸೇರಿ ಬಾನು ಮುಷ್ತಾಕ್ ರಿಂದ ಕನ್ನಡಿಗರಿಗೆ ಕ್ಷಮೆ ಕೇಳಿಸಲಿ ನಾನು ಈಗಲೂ ಕೇಸ್ ವಾಪಸ್ ಪಡೆಯುತ್ತೇನೆ. ಕೇಸ್ ಮ್ಯಾನೇಜ್ ಮಾಡುವುದರಲ್ಲಿ ಸಿಎಂ ಬಹಳ ಚಾಣಾಕ್ಷರು. ಮುಡಾ ಕೇಸ್ ನಲ್ಲೇ ಅದನ್ನು ನಾವು ನೋಡಿದ್ದೇವೆ. ನಮಗೆ ಕೇಸ್ ಬಗ್ಗೆ ಹೇಳಿ ಕೊಡುವುದಕ್ಕೆ ಬರಬೇಡಿ ಎಂದು ಹೇಳಿದರು.

ಮಂಡ್ಯ ಘಟನೆ ವಿಚಾರವಾಗಿ ಇದು ಕನ್ನಡಿಗರ ಸರಕಾರ ಅಲ್ಲ. ಇದು ತಾಲಿಬಾನಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಕೆಲ ಸಂಘಟನೆಯವರು ಎದ್ದು ಕುಳಿತುಕೊಳ್ಳುತ್ತಾರೆ ಡಿಜೆ ಹಳ್ಳಿ - ಕೆಜೆ ಹಳ್ಳಿ ಕೇಸ್ ವಾಪಾಸ್ ಪಡೆದಿದ್ದಕ್ಕೆ ಮತ್ತೆ ಪುಂಡಾಟಿಕೆ ಶುರು ಮಾಡಿದ್ದಾರೆ. ಹಿಂದೂಗಳು ಶಾಂತಿಯಿಂದ ಗಣೇಶ ಮೆರವಣಿಗೆ ಮಾಡಲು ಅಸಾಧ್ಯವಾದ ವಾತಾವರಣ ನಿರ್ಮಾಣ ಆಗ್ತಿದೆ. ಮುಸ್ಲಿಂರು ಶಾಂತಿ ಪ್ರಿಯರು ಎಂದು ಸಿಎಂ ಹೇಳಿದ್ದಾರೆ. ನಿನ್ನೆ ಗಣೇಶ ಮೂರ್ತಿ ಮೇಲೆ ಕಲ್ಲು ಹೊಡೆದಿದ್ದು ಯಾರು? ಗಣೇಶೋತ್ಸವದ ಮೇಲೆ ಕಲ್ಲು ಹೊಡೆಯುವುದೆ ಇವರ ಸಂಸ್ಕೃತಿನಾ? ಎಂದು ಪ್ರತಾಪ್ ಸಿಂಹ ಆಕ್ರೋಶವನ್ನು ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು
ಸಮಸ್ಯೆಗಳ ನಿವಾರಣೆ, ಸವಾಲುಗಳಿಗೆ ಧಾರ್ಮಿಕ ಗುರುಗಳಿಂದ ಪರಿಹಾರ: ಬಿ.ವೈ.ವಿಜಯೇಂದ್ರ