ಲೋಕಸಭಾ ಎಲೆಕ್ಷನ್: ಕುಮಾರಸ್ವಾಮಿಗೆ ಸ್ಪಷ್ಟ ಸಂದೇಶ ರವಾನಿಸಿದ ಖಂಡ್ರೆ

By Web DeskFirst Published Jan 4, 2019, 4:53 PM IST
Highlights

ಮುಂಬರುವ ಲೋಕಸಭಾ ಚುನಾವಣೆಗೆ ದೋಸ್ತಿ ಪಕ್ಷಗಳ ಸೀಟು ಹೊಂದಾಣಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅವರಿಗೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸ್ಪಷ್ಟ ಸಂದೇಶ ಒಂದನ್ನು ರವಾನಿಸಿದ್ದಾರೆ. ಏನದು? 

ಬೆಂಗಳೂರು, [ಜ.04]: ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಗಳ ನಡುವೆ ಒಂದಲ್ಲ ಒಂದು ಹಗ್ಗಜಗ್ಗಾಟ ನಡೆಯುತ್ತಲೆ ಇವೆ.

ಅಧಿಕಾರ ಹಂಚಿಕೆ ಆಯ್ತು ಇದೀಗ ಮುಂಬರುವ ಲೋಕಸಭಾ ಚುನಾವಣೆಗೆ ಸೀಟು ಹೊಂದಾಣಿಕೆ ವಿಚಾರದಲ್ಲಿ ದೋಸ್ತಿಗಳ ನಡುವೆ ಮತ್ತೊಂದು ವಾರ್ ಶುರುವಾಗಿದೆ.

ನೂತನ ಸಚಿವ ಆರ್.ಬಿ ತಿಮ್ಮಾಪುರ್​ಗೆ ನೀಡಬೇಕಿದ್ದ ಖಾತೆಗೆ JDS ಕನ್ನ

ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು  12 ಸ್ಥಾನಗಳು ಜೆಡಿಎಸ್ ಗೆ ಬೇಕು ಎನ್ನುವ ಸಂದೇಶ ಕಾಂಗ್ರೆಸ್ ನಾಯಕರನ್ನು ಕೆರಳಿಸಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಗರಂ ಆಗಿದ್ದಾರೆ.

ಲೋಕಸಭೆ ಚುನಾವಣೆ: ದೋಸ್ತಿ ಸರ್ಕಾರದಲ್ಲಿ ಮೈತ್ರಿನಾ? ಕುಸ್ತಿನಾ?

ಜೆಡಿಎಸ್ 12 ಸ್ಥಾನ ಕೇಳಬಹುದು ಕಾಂಗ್ರೆಸ್ 24 ಸ್ಥಾನ ಕೇಳಬಹುದು. ಸೀಟು ಹೊಂದಾಣಿಕೆಯಲ್ಲಿ ಯಾರು ಪ್ರತಿಷ್ಠೆಗಿಳಿಯೋದು ಒಳ್ಳಯದಲ್ಲ.  ಪ್ರತಿಷ್ಠೆ ಮುಖ್ಯವಾದರೆ ಲೋಕಸಭೆಯಲ್ಲಿ ಬಿಜೆಪಿ ಲಾಭ ಮಾಡಿಕೊಳ್ಳುತ್ತದೆ ಎಂದು ಖಂಡ್ರೆ ಅವರು ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ತಿವಿದಿದ್ದಾರೆ.

ಲೋಕಸಭಾ ಎಲೆಕ್ಷನ್: ದೇವೇಗೌಡ ದಾಳಕ್ಕೆ ಸಿದ್ದರಾಮಯ್ಯ ಪ್ರತಿದಾಳ

ಯಾವ ಕ್ಷೇತ್ರದಲ್ಲಿ ಯಾರು ಹೆಚ್ಚು ವರ್ಚಸ್ಸು ಹೊಂದಿದ್ದಾರೆ ಅನ್ನೋದು ಮುಖ್ಯವಾಗಿದ್ದು, ಗೆಲ್ಲುವ ಕುದುರೆ ಯಾವ ಪಕ್ಷದಲ್ಲಿದ್ದಾರೆ ಅವರಿಗೆ ಸ್ಥಾನ ಹಂಚಿಕೆ ಮಾಡಿದ್ರೆ ಉತ್ತಮ ಎಂದು ಸಲಹೆ ನೀಡಿದರು.

12 ಸ್ಥಾನಗಳ ವಿಚಾರ ಸಿಎಂ ಕುಮಾರಸ್ವಾಮಿ ಅವರ ವಯಕ್ತಿ ಹೇಳಿಕೆ ಇರಬಹುದು. ಆದ್ರೆ ಈ ಬಗ್ಗೆ ಕಾಂಗ್ರೆಸ್ ಇನ್ನೂ ಜೆಡಿಎಸ್ ಜೊತೆ ಮಾತುಕತೆಗೆ ಇಳಿದಿಲ್ಲ. ಇಲ್ಲಿಯವರೆಗೆ ಕಾಂಗ್ರೆಸ್ ಸೀಟು ಹೊಂದಾಣಿಕೆ ವಿಚಾರದಲ್ಲಿ ಜೆಡಿಎಸ್ ಜೊತೆ ಯಾವುದೇ ಚರ್ಚೆ ಮಾಡಿಲ್ಲ ಎಂದರು.

click me!