ಸಿಟ್ಯಾಕೋ ಸಿಡುಕ್ಯಾಕೋ ಸಾಹುಕಾರ.. ಮಾಧ್ಯಮಗಳ ಮುಂದಷ್ಟೆ ನಿಮ್ಮ ಅವತಾರ!

Published : Jan 03, 2019, 10:31 PM ISTUpdated : Jan 03, 2019, 10:36 PM IST
ಸಿಟ್ಯಾಕೋ ಸಿಡುಕ್ಯಾಕೋ ಸಾಹುಕಾರ.. ಮಾಧ್ಯಮಗಳ ಮುಂದಷ್ಟೆ ನಿಮ್ಮ ಅವತಾರ!

ಸಾರಾಂಶ

ಸಿಟ್ಯಾಕೋ ಸಿಡುಕ್ಯಾಕೋ ಸಾಹುಕಾರ..?  ಸಂಪುಟ ಸಭೆಗಳಿಗೆ ಹೋಗಿಲ್ಲ.. ನಾವೇನ್ ಮಾಡಬೇಕು..?  ಸಚಿವ ಸ್ಥಾನ ಕೊಟ್ಟ ಮೇಲೆ ಏನೇನೂ ಕೆಲಸ ಮಾಡ್ಲಿಲ್ಲ ಏಕೆ..? - ವೈಯಕ್ತಿಕ ಪ್ರತಿಷ್ಠೆಗೆ ಬಿದ್ದು ಕೆಲಸ ಮಾಡಲಿಲ್ವಲ್ಲ..! - 3-4 ದಿನಗಳಲ್ಲಿ ರಾಜೀನಾಮೆ ಕೊಡ್ತೀನಿ ಎಂದಿದ್ದು ನೀವಾ.. ನಾವಾ..?  ಸಾಹುಕಾರರೇ ಉತ್ತರಿಸಿ!

ಬೆಂಗಳೂರು[ಜ.03]  ದೋಸ್ತಿ ಸಂಪುಟದಲ್ಲಿದ್ದ ಸಚಿವ ಸ್ಥಾನ ಈಗಾಗಲೇ ಕೈತಪ್ಪಾಗಿದೆ.. ಆಪ್ತ ಶಾಸಕರು ಕೈಕೊಡ್ತಿದ್ದಾರೆ.. ಮುಂದೇನು ಮಾಡಬೇಕೋ ಎಂಬ ದಾರಿಯ ಬಾಗಿಲು ಮುಚ್ಚಿಯಾಗಿದೆ. ಇದೇ ಕೋಪದ ಕಡಲಲ್ಲಿ ಮುಳುಗಿ ಏಳುತ್ತಿದ್ದಾರೆ ರಮೇಶ್ ಜಾರಕಿಹೊಳಿ. ಆದರೆ ತಮ್ಮ ಕೋಪವನ್ನೆಲ್ಲ ಮಾಧ್ಯಮದವರ ಮೇಲೆ ತೋರಿಸಿದ್ದಾರೆ.

10 ದಿನಗಳಿಂದ ನಾಪತ್ತೆಯಾಗಿ, ನಿನ್ನೆಯಷ್ಟೇ ಪ್ರತ್ಯಕ್ಷ್ಯವಾಗಿ, ಇಂದು ಮಾಧ್ಯಮಗಳ ಎದುರು ಬಂದಿದ್ದ ರಮೇಶ್ ಜಾರಕಿಹೊಳಿ, ವಿನಾಕಾರಣ ನನಗಾಗಿ ಕಾಯಬೇಡಿ.. ನಾಲ್ಕು ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ತೀನಿ  ಎಂದರು.

ನಾಪತ್ತೆಯಾಗಿದ್ದ ರಮೇಶ್ ಜಾರಕಿಹೊಳಿ ಎಲ್ಲಿದ್ದರು?

ಇನ್ನು ರಮೇಶ್ ಜಾರಕಿಹೊಳಿ ಸಾಹೇಬ್ರಿಗೆ ಕೇಳೋದಕ್ಕೆ ಒಂದಿಷ್ಟು ಪ್ರಶ್ನೆಗಳಿವೆ. 14 ಸಂಪುಟ ಸಭೆಗಳಿಗೆ ಸಾಹಾಕಾರರು ಹೋಗ್ಲಿಲ್ಲ.. ಅದಕ್ಕೆ ನಾವೇನ್ ಮಾಡ್ಬೇಕು ಹೇಳಿ? ಸಚಿವ ಸ್ಥಾನ ಸಿಕ್ಕಿತ್ತಲ್ವಾ? ಕೆಲಸ ಯಾಕ್ ಮಾಡ್ಲಿಲ್ಲ..? ಹೆಬ್ಬಾಳ್ಕರ್ ಜತೆ ವೈಯಕ್ತಿಕ ಪ್ರತಿಷ್ಠೆಗೆ ಬಿದ್ದು ಕೆಲಸ ಮಾಡಲಿಲ್ವಲ್ಲ ಅದ್ಕೆ ಏನ್ ಹೇಳ್ಬೇಕು?ಮೂರ್ನಾಲ್ಕು ದಿನಗಳಲ್ಲಿ ರಾಜೀನಾಮೆ ಕೊಡ್ತೀನಿ ಎಂದಿದ್ದು ನೀವಾ.. ನಾವಾ..? ಕಣ್ತಪ್ಪಿಸಿ ಓಡಾಡೋದ್ಯಾಕೆ..? ಬಚ್ಚಿಟ್ಟುಕೊಳ್ಳುವಂತದ್ದು ಏನಿದೆ? ಮಾಧ್ಯಮದ ಪ್ರಶ್ನೆಗೆ ಸಾಹೇಬರು ಉತ್ತರಿಸುತ್ತಾರೋ ಗೊತ್ತಿಲ್ಲ.

ರಮೇಶ್ ಜಾರಕಿಹೊಳಿಯವ್ರನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ನಾನಾ ತಂತ್ರ ಹೆಣೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ಸತೀಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾತಾಡಿದ ಗುಂಡೂರಾವ್, ಅವ್ರು ನೇರವಾಗಿ ಬಂದು ಮಾತಾಡ್ಬೇಕಲ್ವಾ ಅಂದಿದ್ದಾರೆ. ಒಟ್ಟಾರೆ, ಕಾಂಗ್ರೆಸ್ ಬಂಡಾಯದ ಕುದುರೆ ಅರ್ಥಾತ್ ರಮೇಶ್ ಜಾರಕಿಹೊಳಿ ಬಂಡಾಯದ ಕಥನ ಎಂದೂ ಮುಗಿಯದ ಧಾರಾವಾಹಿಯಾಗಿ ಬದಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕ ಹೆಸರಲ್ಲಿ ಪ್ರತ್ಯೇಕ ರಾಜ್ಯವಾಗಲಿ: ಶಾಸಕ ರಾಜು ಕಾಗೆ ಆಗ್ರಹ
ಸಿಎಂ ಸಿದ್ದರಾಮಯ್ಯ ಹೇಳಿಕೆಯೇ ನಮಗೆ ಅಂತಿಮ ಮಾರ್ಗದರ್ಶನ: ಸಚಿವ ದಿನೇಶ್ ಗುಂಡೂರಾವ್