Karnataka Politics: ಬಿಜೆಪಿ ಸಂಸದ ಜಾಧವ್‌ಗೆ 2 ನಾಲಿಗೆ: ಪ್ರಿಯಾಂಕ್‌ ವಾಗ್ದಾಳಿ

Kannadaprabha News   | Asianet News
Published : Dec 09, 2021, 01:01 PM ISTUpdated : Dec 09, 2021, 01:04 PM IST
Karnataka Politics: ಬಿಜೆಪಿ ಸಂಸದ ಜಾಧವ್‌ಗೆ 2 ನಾಲಿಗೆ: ಪ್ರಿಯಾಂಕ್‌ ವಾಗ್ದಾಳಿ

ಸಾರಾಂಶ

*  ಹಣಕ್ಕಾಗಿ ತತ್ವ ಸಿದ್ಧಾಂತ ಬಲಿಕೊಟ್ಟವರಿಂದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ *  ಸಂಸದರ ದ್ವಂದ್ವ ನಿಲುವನ್ನು ಪ್ರಶ್ನಿಸಿದರೆ ಅಪಪ್ರಚಾರ ಅಂತಾರೆ *  ಲೀಗಲ್‌ ನೊಟೀಸ್‌ ಕೊಡಲಿ ಮತ್ತೆರಡು ಕ್ಲಾರಿಫಿಕೇಷನ್‌ ಕೊಡ್ತೇನೆ  

ಕಲಬುರಗಿ(ಡಿ.09):  ತತ್ವ ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ರು. 20-25 ಕೋಟಿ ದುಡ್ಡಿಗೆ ತಮ್ಮನ್ನು ತಾವೇ ಮಾರಿಕೊಂಡು ಬೇರೆ ಪಕ್ಷಗಳಿಗೆ ಹೋದವರಿಂದ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರಾಗಲೀ, ತಾವಾಗಲೀ ಯಾವುದೇ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಅವರ ನೀತಿ ಪಾಠ ಬೇರೆ ಕಡೆ ಇಟ್ಟುಕೊಳ್ಳಲಿ ಶಾಸಕ, ಕೆಪಿಸಿಸಿ(KPCC) ವಕ್ತಾರ ಪ್ರಿಯಾಂಕ್‌ ಖರ್ಗೆ(Priyank Kharge) ಸಂಸದ ಉಮೇಶ್‌ ಜಾಧವ್‌(Umesh Jadhav) ಅವರಿಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌(Congress) ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್‌ ಖರ್ಗೆ ಅವರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ನಿನ್ನೆ ಹೇಳಿದ್ದಾರೆ. ಸಂಸದರ ದ್ವಂದ್ವ ನಿಲುವನ್ನು ಪ್ರಶ್ನಿಸಿದರೆ ಅಪಪ್ರಚಾರ ಎನ್ನುತ್ತಾರೆ. ಜೊತೆಗೆ ಲೀಗಲ್‌ ನೊಟೀಸ್‌(Legal Notice) ಕೊಡುವುದಾಗಿ ಹೇಳಿದ್ದಾರೆ. ಪರವಾಗಿಲ್ಲ ನನಗೆ ಲೀಗಲ್‌ ನೊಟೀಸ್‌ ಕೊಡಲಿ ಮತ್ತೆರಡು ಕ್ಲಾರಿಫಿಕೇಷನ್‌ ಕೊಡ್ತೇನೆ ಎಲ್ಲ ಸೇರಿಸಿ ಲೀಗಲ್‌ ನೊಟೀಸು ಕೊಡಲಿ ಎಂದು ಸವಾಲ್‌ ಹಾಕಿದರು.

ಭ್ರಷ್ಟಾಚಾರದ ಹಣದಿಂದ ಬಿಜೆಪಿ ಆಡಳಿತ : ಪ್ರಿಯಾಂಕ್‌ ಖರ್ಗೆ ಟೀಕೆ

ಚಿಂಚೋಳಿ (ಅವರನ್ನ ಕಲಬುರಗಿ ಸಂಸದರು ಎನ್ನುವುದನ್ನು ಬಿಟ್ಟಿದ್ದೇವೆ) ಸಂಸದರಿಗೆ ಎರಡು ನಾಲಿಗೆ ಇವೆ. ಕಲಬುರಗಿ ಏರ್‌ಪೋರ್ಟ್‌(Kalaburagi Airport) ಬಸವಣ್ಣನವರ(Basavanna) ಹೆಸರು ಇಡುವುದಾಗಿ ಚುನಾವಣೆ(Election) ಸಂದರ್ಭದಲ್ಲಿ ಮತಗಿಟ್ಟಿಸಲು ಹೇಳಿದ್ದರು. ಆದರೆ, ಸಂಸತ್ತಿನಲ್ಲಿ ಎದ್ದುನಿಂತು ಏರ್‌ಪೋರ್ಟ್‌ಗೆ ಸಂತ ಸೇವಾಲಾಲ್‌ ಅವರ ಹೆಸರಿಡುವಂತೆ ಮನವಿ ಮಾಡುತ್ತಾರೆ. ಇದು ದ್ವಂದ್ವ ಅಲ್ಲವೇ? ಎಂದು ಟೀಕಿಸಿದರು.

ಏರ್‌ಪೋರ್ಟ್‌ ಅಥಾರಿಟಿಯವರು ಶರಣಪ್ರಕಾಶ್‌ ಪಾಟೀಲ್‌ ಉಸ್ತುವಾರಿ ಸಚಿವರಿದ್ದಾಗ ನಮ್ಮ ಬಳಿ ಏರ್‌ಪೋರ್ಟ್‌ ಬಳಿಯ ಸೇವಾಲಾಲ್‌ ದೇವಾಲಯ ತೆರುವುಗೊಳಿಸುವುದಾಗಿ ಹೇಳಿದ್ದರು. ದೇವಾಲಯ ತೆರವುಗೊಳಿಸುವುದಕ್ಕೂ ಮೊದಲು ಮತ್ತೊಂದು ದೇವಾಲಯ ನಿರ್ಮಿಸಲು ಹೇಳಿ ಜೊತೆಗೆ ಅದಕ್ಕೆ ನಾವೂ ಕೂಡಾ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದೆವು. ಅವರು ಒಪ್ಪಿದ್ದರು. ಆದರೆ, ಇವರು ಎಂಪಿ ಯಾದ ಮೇಲೆ ಎಲ್ಲಿ ಹೋಯ್ತು? ಅಷ್ಟಕ್ಕೂ ದೇವಾಲಯ ಧ್ವಂಸ ಮಾಡಿದ್ದು ಯಾರು? ಸಮಾಜದಲ್ಲಿ ಒಳ್ಳೆ ಹೆಸರು ಗಳಿಸಲು ತಹಸೀಲ್ದಾರ ಅವರನ್ನು ಸಸ್ಪೆಂಡ್‌ ಮಾಡಿಸಿದ್ದು ಯಾಕೆ? ದೇವಾಲಯ ಧ್ವಂಸವಾಗಲು ತಹಸೀಲ್ದಾರರು ಹೇಗೆ ಹೊಣೆಗಾರರಾಗುತ್ತಾರೆ? ಏರ್ಪೋರ್ಟ್‌ ಅಥಾರಿಟಿಯವರ ಮೇಲೆ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಖರ್ಗೆ ಅವರು ಸೋತಿದ್ದು ಯಾಕೆ ಎಂದು ಅರ್ಥವಾಗಬೇಕು ಎಂದು ಸಂಸದರು ಹೇಳಿದ್ದಾರೆ. ಖರ್ಗೆ ಅವರು ಐವತ್ತು ವರ್ಷ ರಾಜಕೀಯದಲ್ಲಿದ್ದವರು. ಅವರು ಸೋತಿದ್ದು ಯಾಕೆ ಎಂದು ಅವರಿಗೆ ಹಾಗೂ ಕಾಂಗ್ರೆಸ್‌ನವರಿಗೆ ಮನವರಿಕೆಯಾಗಿದೆ. ಆದರೆ, ಜಾಧವ್‌ ಅವರು ಎಂ.ಪಿ. ಯಾಗಿದ್ದು ಯಾಕೆ ಎಂದು ಮನವರಿಕೆಯಾಗಿದೆಯಾ? ದೂರದರ್ಶನ ಕೇಂದ್ರ ಸೇರಿದಂತೆ ಖರ್ಗೆ ಅವರು ತಂದ ಯೋಜನೆಗಳನ್ನು ಉಳಿಸಿಕೊಳ್ಳಲಾಗದ ಯೋಗ್ಯತೆ ಇಲ್ಲದ ಸಂಸದರು ಹಾಗೂ ಸರ್ಕಾರ ನಮಗೆ ಪಾಠ ಮಾಡಲು ಬರುತ್ತಿದ್ದಾರೆ. ಖರ್ಗೆ ಅವರು ಇವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಕುಟುಕಿದರು.

ನಾನು ಸಮಾಜ ಕಲ್ಯಾಣಸಚಿವನಾಗಿದ್ದಾಗ ಚಿಂಚೋಳಿಗೆ(Chincholi) 30 ಕೋಟಿ ಬಿಡಗಡೆ ಮಾಡಿದ್ದೆ, ಇವರ ಸರ್ಕಾರ ಬಂದ ಮೇಲೆ 20 ಕೋಟಿ ವಾಪಸ್‌ ಪಡೆದುಕೊಂಡಿದ್ದಾರೆ. ಸ್ವಂತ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನ ಉಳಿಸಿಕೊಳ್ಳಲು ಆಗದವರು ಜಿಲ್ಲೆಯನ್ನು ಹೇಗೆ ಅಭಿವೃದ್ಧಿಗೊಳಿಸುತ್ತಾರೆ. ಕಲಬುರಗಿ ಜಿಲ್ಲೆ ಹೊಸ ಯೋಜನೆ ತರುವ ಸಲುವಾಗಿ ಹಾಗೂ ಈಗಾಗಲೇ ಜಾರಿಯಾಗಿದ್ದ ಯೋಜನೆಗಳನ್ನು ಉಳಿಸಿಕೊಳ್ಳಲು ಎಷ್ಟು ಪತ್ರ ಬರೆದಿದ್ದಾರೆ? ಈ ತರ ಪತ್ರ ಬರೆಯುವ ಬದಲು ಬರೀ ವರ್ಗಾವಣೆ ಶಿಫಾರಸ್ಸು ಪತ್ರಗಳೇ ಜಾಸ್ತಿ ಬರೆದಿದ್ದಾರೆ. ನಿಮ್ಮ ರೆಮ್‌ಡಿಸಿವರ್‌ ನಾಟಕವನ್ನು ಎಲ್ಲರೂ ನೋಡಿದ್ದಾರೆ. ಜಿಲ್ಲೆಗೆ ಬಂದ ರೆಮ್‌ಡಿಸಿವರ್‌(Remdesivir) ಎಲ್ಲಿ ಹೋದವು? ತೆಗೆದುಕೊಂಡು ಹೋದವರು ಯಾರು? ಅವರು ಯಾವ ಪಕ್ಷದವರು ಎಂದು ಎಲ್ಲರಿಗೂ ಗೊತ್ತಿದೆ. ನಿಮ್ಮ ಲೀಗಲ್‌ ನೊಟೀಸ್‌ನಲ್ಲಿ ಈ ಎಲ್ಲ ಸೇರಿಸಿ ಹಾಕಿ ಎಂದು ಸವಾಲಾಕಿದರು.

Jan Swaraj Yatra| 'ಪ್ರಿಯಾಂಕಾ ಎಂದರೆ ಹೆಣ್ಣಾ ಗಂಡಾ?: ಪ್ರತಾಪ್‌ ಸಿಂಹ

ಕಬ್ಬಲಿಗ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವುದಾಗಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಈಗ ಆ ಭರವಸೆ ಏನಾಗಿದೆ? ಎಂದಾದರೂ ಈ ಬಗ್ಗೆ ಮಾತನಾಡಿದ್ದಾರ? ಲಂಬಾಣಿ ಸಮಾಜವನ್ನು ಎಸ್‌ಟಿ ಸೇರಿಸುವಂತೆ ಪ್ರಧಾನಮಂತ್ರಿಗೆ ಮಾ.5,2020ರಂದು ಬರೆದು ಪತ್ರ ಬರೆದು ಪ್ರಧಾನಿಯನ್ನು ಭೇಟಿಯಾಗಿ ಒತ್ತಾಯಿಸಿದ್ದು ಸುಳ್ಳಾ ? ಮೊದಲು ಸಂಸದರು ಒಪ್ಪಿರಲಿಲ್ಲ ಆಮೇಲೆ ಮಾಧ್ಯಮದವರು ಒತ್ತಡ ಹಾಕಿದ ಮೇಲೆ ಒಪ್ಪಿದ್ದರು.

ರಾಷ್ಟ್ರೀಯ ಎಸ್‌ಸಿ ಹಾಗೂ ಎಸ್‌ಟಿ ಕಮಿಷನ್‌ ನವರು ರಾಜ್ಯ ಸರ್ಕಾರಕ್ಕೆ(Government of Karnataka) ಪತ್ರ ಬರೆದು ಬಂಜಾರ ಸಮುದಾಯವನ್ನು ಎಸ್‌ಸಿ ಪಟ್ಟಿಯಿಂದ ತೆಗೆದು ಎಸ್‌ಟಿಗೆ ಸೇರಿಸಬೇಕೆ ಎನ್ನುವ ಬಗ್ಗೆ ವರದಿ ಸಲ್ಲಿಸಲು ಕೇಳಿದಾಗ ರಾಜ್ಯದಲ್ಲಿ ಬಂದು ಬಂಜಾರ ಸಮುದಾಯವನ್ನು ಎಸ್‌ಸ್ಸಿನಲ್ಲೇ ಉಳಿಸುವಂತೆ ಆಗ್ರಹಿಸಿ ಶಾಸಕ ಪಿ.ರಾಜೀವ್‌ ಜತೆ ಸೇರಿ ಪತ್ರ ಚಳುವಳಿ ಮಾಡಿದರು. ಇದರಿಂದಾಗಿ ಸಂಸದರಿಗೆ ಎರಡು ನಾಲಿಗೆ ಇದೆ ಎಂದು ತಿಳಿಯುತ್ತದೆ. ಒಂದು ಕಡೆ ಕೋಲಿ ಕಬ್ಬಲಿಗ ಹಾಗೂ ಮತ್ತೊಂದು ಕಡೆ ಬಂಜಾರ ಸಮುದಾಯಕ್ಕೆ ಗೊಂದಲ ಮೂಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು - Jaya Bachchan ಬಾಯ್ಕಾಟ್‌ ಆಗ್ತಾರಾ?