Vidhan Parishat Election: 'ಕಾಂಗ್ರೆಸ್ಸಿಗರೇ ಬಿಜೆಪಿಗೆ ಮತ ಹಾಕಲು ಸಿದ್ದರಾಗಿದ್ದಾರೆ'

By Kannadaprabha NewsFirst Published Dec 8, 2021, 2:47 PM IST
Highlights

*   ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಬಿಜೆಪಿ ಪರವಾಗಿರುವ ವಾತಾವರಣ ಸೃಷ್ಟಿ
*   ಕಾಂಗ್ರೆಸ್‌ ಪಕ್ಷದ ಆಡಳಿತ ವೈಖರಿ ವಿರುದ್ಧ ಬೇಸತ್ತ ಜನ 
*   ಗ್ರಾಪಂಗಳಿಗೆ ಬಿಜೆಪಿ ಕೊಡುಗೆ ಶೂನ್ಯ: ಲಾಡ್‌  

ಹೂವಿನಹಡಗಲಿ(ಡಿ.08):  ಉತ್ತಮ ಸನ್ನಡತೆ ಹೊಂದಿರುವ ಜತೆಗೆ ಸಮಾಜಕ್ಕೆ ಸಾಕಷ್ಟು ದಾನ ಮಾಡಿರುವ, ವೈ.ಎಂ. ಸತೀಶಗೆ(YM Satish) ತಾಲೂಕಿನ ಕಾಂಗ್ರೆಸ್‌ ಪಕ್ಷದ ಸದಸ್ಯರೆ ಬಿಜೆಪಿಗೆ(BJP) ಮತ ಹಾಕಲು ಮುಂದೆ ಬಂದಿದ್ದಾರೆ ಎಂದು ಮಾಜಿ ಶಾಸಕ ಬಿ. ಚಂದ್ರನಾಯ್ಕ(B Chandra Naik) ಹೇಳಿದರು. ಮಂಗಳವಾರ ಇಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 537 ಮತದಾರರು(Voters) ಇದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಬಿಜೆಪಿ ಪರವಾಗಿರುವ ವಾತಾವರಣ ಸೃಷ್ಟಿಯಾಗಿದೆ. ಕಾಂಗ್ರೆಸ್‌(Congress) ಪಕ್ಷದ ಆಡಳಿತ ವೈಖರಿ ವಿರುದ್ಧ ಜನ ಬೇಸತ್ತು ಹೋಗಿದ್ದಾರೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಭಾಗೀಯ ಸಂಘಟನಾ ಕಾರ್ಯದರ್ಶಿ ಎಚ್‌. ಪೂಜೆಪ್ಪ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ 25 ಸ್ಥಾನಗಳಲ್ಲಿ 15ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ. ಕಾಂಗ್ರೆಸ್‌ ಅಭ್ಯರ್ಥಿ ಕೊಂಡಯ್ಯ(KC Kondaiah) ಚುನಾವಣೆ(Election) ಬಂದಾಗ ಮಾತ್ರ ಹೊರಗೆ ಬರುತ್ತಾರೆ, ನಂತರದಲ್ಲಿ ಮಾಯವಾಗುತ್ತಾರೆ. ಮತ ಹಾಕಿದ ಜನರ ನೋವು- ನಲಿವು ಆಲಿಸುವವರು ಯಾರೆಂದು? ಪ್ರಶ್ನಿಸಿದರು.

MLC Election: ಡೋಂಗಿ ದೇಶ​ಭ​ಕ್ತ​ರಿಗೆ ಮತ ಹಾಕ​ದಿ​ರಿ: ಶ್ರೀನಿವಾಸ ಮಾನೆ

ಮಂಡಲ ಅಧ್ಯಕ್ಷ ಎಸ್‌. ಸಂಜೀವ ರೆಡ್ಡಿ ಮಾತನಾಡಿ, ಬಳ್ಳಾರಿ(Ballari) ವಿಜಯನಗರ(Vijayanagara) ಅವಳಿ ಜಿಲ್ಲೆಯ ಕಾಂಗ್ರೆಸ್‌ ನಾಯಕರಿಗೆ ಬೇಡವಾಗಿರುವ ಕೊಂಡಯ್ಯನವರಿಗೆ ಟಿಕೆಟ್‌ ನೀಡಬಾರದೆಂದು ಪತ್ರ ಬರೆದಿದ್ದಾರೆ. ಆದರೆ, ಕೇಂದ್ರದಲ್ಲಿ ತಮ್ಮ ಪ್ರಭಾವ ಬಳಸಿಕೊಂಡು ಕೊಂಡಯ್ಯ ಟಿಕೆಟ್‌ ಪಡೆದಿದ್ದಾರೆ. ಅವರ ಪರವಾಗಿ ಶಾಸಕರು, ನಾಯಕರು ಬೇಕಾಬಿಟ್ಟಿಯಾಗಿ ಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿದರು.

ಕೊಂಡಯ್ಯನವರಿಗೆ ಹಿರಿತನ ಹಾಗೂ ಅನುಭವ ಇದೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಾರೆ, ಅವರ ವಿರುದ್ಧ ಪತ್ರ ಬರೆಯುವಾಗ ಕೊಂಡಯ್ಯನವರ ಬಗ್ಗೆ ತಿಳಿಯಲಿಲ್ಲವೇ?, ಆ ನಾಯಕರಿಗೆ ಬೇಡವಾಗಿರುವ ಕೊಂಡಯ್ಯನವರು ಗ್ರಾಪಂ ಸದಸ್ಯರ ಮನ ಗೆಲ್ಲಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಬಳ್ಳಾರಿಯಲ್ಲಿನ ಪಕ್ಷದ ನಿವೇಶನವನ್ನೇ ನುಂಗಿರುವ ಕೊಂಡಯ್ಯನವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಆದರೆ, ಬಿಜೆಪಿ ಅಭ್ಯರ್ಥಿ ವೈ.ಎಂ. ಸತೀಶ ಇವರು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘಕ್ಕೆ 100 ಎಕರೆಗೂ ಹೆಚ್ಚು ಭೂಮಿ ದಾನ ಮಾಡಿದ್ದಾರೆ. ಈ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳ ಶಿಕ್ಷಣ ಸೌಲಭ್ಯಕ್ಕೆ ಅನುಕೂಲ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜ್ಯೋತಿ ಮಹೇಂದ್ರ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಪಿ. ವಿಜಯಕುಮಾರ, ಕೆ.ಬಿ. ವೀರಭದ್ರಪ್ಪ, ಮೋಹನ್‌ ರೆಡ್ಡಿ, ಮಧು ನಾಯ್ಕ, ಎಂ.ಬಿ. ಬಸವರಾಜ, ಈಟಿ ಲಿಂಗರಾಜ, ಕೊಟ್ರೇಶ ನಾಯ್ಕ, ದುದಾನಾಯ್ಕ ಉಪಸ್ಥಿತರಿದ್ದರು. ಗ್ರಾಪಂ ಸದಸ್ಯರು, ಪುರಸಭೆ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು. ಪರಶುರಾಮ ಸ್ವಾಗತಿಸಿದರು. ಪ್ರದೀಪ ನಿರ್ವಹಿಸಿದರು.

Council Election Karnataka: ಬಿಜೆಪಿಗೆ ಯಾವ ಪಕ್ಷದ ಮೈತ್ರಿ ಅನಿವಾರ್ಯವಲ್ಲ

ಗ್ರಾಪಂಗಳಿಗೆ ಬಿಜೆಪಿ ಕೊಡುಗೆ ಶೂನ್ಯ

ಸಂಡೂರು(Sandur): ಗ್ರಾಮ ಪಂಚಾಯಿತಿಗಳಿಗೆ ಬಿಜೆಪಿಯವರ ಕೊಡುಗೆ ಶೂನ್ಯ ಎಂದು ಮಾಜಿ ಸಚಿವ ಸಂತೋಷ ಲಾಡ್‌(Santosh Lad) ಹೇಳಿದರು.

ಸಮೀಪದ ಕೃಷ್ಣಾ ನಗರದ ಶಾಸಕರ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಧಾನ ಪರಿಷತ್‌ ಚುನಾವಣೆಯ(Vidhan Parishat Election) ಪ್ರಚಾರ(Campaign) ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜಕೀಯ(Politics) ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಬುನಾದಿಯಿದ್ದಂತೆ. ಗ್ರಾಮ ಪಂಚಾಯಿತಿ ವ್ಯವಸ್ಥೆ ಆರಂಭಕ್ಕೆ, ಪಂಚಾಯಿತಿಗಳಿಗೆ ಅನುದಾನದ ಶಕ್ತಿ ಒದಗಿಸಿದ್ದು, ಸರ್ವರಿಗೂ ಸಮಪಾಲು ಸಮಬಾಳು ಎಂಬ ನಂಬಿಕೆಯಿಂದ ಎಲ್ಲ ವರ್ಗದವರನ್ನೂ ಸಮಾನವಾಗಿ ಕಂಡ ಹೆಗ್ಗಳಿಕೆ ಕಾಂಗ್ರೆಸ್‌ ಪಕ್ಷಕ್ಕಿದೆ. ನರೇಗಾ ಯೋಜನೆಯಿಂದ ಹಿಡಿದು ಗ್ರಾಮೀಣ ಪ್ರದೇಶಕ್ಕೆ ಅನೇಕ ಸವಲತ್ತುಗಳನ್ನು ಕೊಟ್ಟಿದ್ದು ಕಾಂಗ್ರೆಸ್‌. ಪ್ರಧಾನಿ ನರೇಂದ್ರ ಮೋದಿ(Narendra Modi) ತಮ್ಮ ಅವಧಿಯಲ್ಲಿ ಪಂಚಾಯಿತಿಗಳಿಗೆ ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
 

click me!