ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೋದಿ ನಿಂತರೂ ಬಿಜೆಪಿ ಗೆಲ್ಲುವುದಿಲ್ಲ: ಎಂ.ಲಕ್ಷ್ಮಣ್ ಭವಿಷ್ಯ

By Kannadaprabha NewsFirst Published Jan 1, 2024, 10:43 PM IST
Highlights

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿಯೇ ಬಂದು ನಿಂತರೂ ಜನ ಸೋಲಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಖಚಿತವೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಭವಿಷ್ಯ ನುಡಿದಿದ್ದಾರೆ. 

ಮಡಿಕೇರಿ (ಜ.01): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿಯೇ ಬಂದು ನಿಂತರೂ ಜನ ಸೋಲಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಖಚಿತವೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಭವಿಷ್ಯ ನುಡಿದಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರಿಗೆ ಈ ಈ ಬಾರಿ ಟಿಕೆಟ್ ಇಲ್ಲ ಎನ್ನುವ ಮಾಹಿತಿ ಇದೆ. ಹೀಗಾಗಿ ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯ ಬಗ್ಗೆ ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಸೋಮಾರಿ ಸಿದ್ದ ಎಂದು ಕರೆಯುವ ಮೂಲಕ ಅಗೌರವ ತೋರಿದ್ದಾರೆ. 

ಸಿದ್ದರಾಮಯ್ಯ ಎಲ್ಲಿ, ಪ್ರತಾಪ್ ಸಿಂಹ ಎಲ್ಲಿ. ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು ಎಂದರು. ಪ್ರತಾಪ್ ಸಿಂಹ ಅವರು ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಮೈಸೂರು- ಬೆಂಗಳೂರು ಹೈವೆ ನಾವೇ ಮಾಡಿದ್ದು ಅಂತಾರೆ. ಹೆದ್ದಾರಿ ಅನುಮೋದನೆ ಸಂದರ್ಭ ಅವರು ಎಂಪಿ ಆಗಿರಲಿಲ್ಲ. ಹೈವೇ ವಿಚಾರದಲ್ಲಿ ನಾವೆ ಮಾಡಿದ್ದು ಅಂತ್ತೀರಲ್ಲ ನಿಮ್ಮನೆಯಿಂದ ತಂದು ಮಾಡಿದ್ದ, ಇದೆಲ್ಲದರ ಹಿಂದೆ ಕಾಂಗ್ರೆಸ್ ಸರ್ಕಾರ ಕೊಡುಗೆ ಕೂಡ ಇದೆ. ಸಂಸದರಾಗಿ ಕೊಡಗು ಜಿಲ್ಲೆಗೆ ತಾವು ಏನು ಕೊಡುಗೆ ನೀಡಿದ್ದೀರಾ ಎನ್ನುವುದನ್ನು ಪತ್ರಿಕಾ ಪ್ರಕಟಣೆ ಮೂಲಕವಾದರೂ ಬಹಿರಂಗಪಡಿಸಿ ಎಂದು ಒತ್ತಾಯಿಸಿದರು.

ಯತ್ನಾಳ್‌ ಮಾಹಿತಿ ಮೇಲೆ ತನಿಖೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಜಗದೀಶ್‌ ಶೆಟ್ಟರ್‌

ಅಪಪ್ರಚಾರಗಳಿಗೆ ಕಿವಿಗೊಡಬೇಡಿ: ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಲ್ಲ, ವಿಚಾರಣೆ ಮಾಡುತ್ತೇವೆ ಎಂದು ಸರ್ಕಾರ ಹೇಳಿರುವ ವಿಚಾರವನ್ನು ಕೆಲ ಬಿಜೆಪಿ ಮುಖಂಡರು ಕಾಂಗ್ರೆಸ್ ಮುಸ್ಲಿಂ ಪರವಾಗಿಲ್ಲ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ವಿಷ ಹರಡುತಿದ್ದಾರೆ. ಯಾರು ಕೂಡ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದ ಲಕ್ಷ್ಮಣ್, ಪ್ರಭಾಕರ್ ಭಟ್ ಮೊದಲೇ ಶ್ರೀರಂಗಪಟ್ಟಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಬಳಿಕ ಹೈಕೋರ್ಟಿನಲ್ಲಿ ಕೇಸು ವಜಾಕ್ಕೆ ಮನವಿ ಮಾಡಿದ್ದರು. ಕಾಂಗ್ರೆಸ್‌ ಯಾವುದೇ ಕಾರಣಕ್ಕೂ ಸಮಾಜದಲ್ಲಿ ಘರ್ಷಣೆ ಮಾಡುವುದಕ್ಕೆ ಬಿಡುವುದಿಲ್ಲ ಎಂದರು. ಕಾಂಗ್ರೆಸ್ ಪಕ್ಷ ಹಿಂದೂ, ಮುಸ್ಲಿಂ ಸೇರಿದಂತೆ ದೇಶದ ಎಲ್ಲ ಜನರ ಪರವಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿಚಾರಣೆ ನಡೆಯುತ್ತಿದ್ದು, ತಪ್ಪಿದ್ದರೆ ಕಾನೂನು ಕ್ರಮವಾಗಲಿದೆ ಎಂದರು.

ಸಾಮಾಜಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ: ಸಿದ್ದರಾಮಯ್ಯ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಣ್ಣಪುಟ್ಟ ವಿಚಾರಗಳಿಗೂ ದಿನಕ್ಕೆ ಮೂರು ಬಾರಿ ಸುದ್ದಿಗೋಷ್ಠಿ ಕರೆದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅದರ ಬಗ್ಗೆ ಜನರಿಗೆ ತಿಳಿಸಲಿ ನಾವು ಎದುರಿಸಲು ಸಿದ್ಧರಿದ್ದೇವೆ. ಆದರೆ ಅವರದ್ದೇ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ 40 ಸಾವಿರ ಕೋಟಿ ಲೂಟಿ ಆಗಿದೆ ಎಂದು ನೇರ ಆರೋಪ ಮಾಡಿದ್ದಾರೆ. ಆದರೂ ಅವರನ್ನು ಕರೆದು ಕೇಳಲು ನಿಮಗೆ ಆಗುತ್ತಿಲ್ಲ, ಕೊನೆ ಪಕ್ಷ ಅವರಿಗೆ ನೋಟಿಸ್ ಕೊಡಲು ನಿಮಗೆ ಧೈರ್ಯ ಇಲ್ವಾ. ಯಾಕೆ ಅವರ ಆರೋಪಕ್ಕೆ ಉತ್ತರ ನೀಡುತ್ತಿಲ್ಲ ಎಂದು ಲಕ್ಷ್ಮಣ್ ಪ್ರಶ್ನಿಸಿದರು. ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್ ಹಾಗೂ ಮೈಸೂರು ಕಾಂಗ್ರೆಸ್ ಪ್ರಮುಖ ಬಿ.ಎಂ.ರಾಮು ಸುದ್ದಿಗೋಷ್ಠಿಯಲ್ಲಿ ಇದ್ದರು.

click me!