ರಾಜ್ಯದ ರೈತರ ಹಿತದೃಷ್ಟಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರು ಹಂಚಿಕೆ ಪ್ರಾಧಿಕಾರವು ತಮಿಳುನಾಡಿಗೆ 5 ಸಾವಿರ ಕ್ಯುಸೆಕ್ನೀರು ಬಿಡುವಂತೆ ಆದೇಶಿಸಿದೆ.
ಮೈಸೂರು (ಸೆ.15): ರಾಜ್ಯದ ರೈತರ ಹಿತದೃಷ್ಟಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರು ಹಂಚಿಕೆ ಪ್ರಾಧಿಕಾರವು ತಮಿಳುನಾಡಿಗೆ 5 ಸಾವಿರ ಕ್ಯುಸೆಕ್ನೀರು ಬಿಡುವಂತೆ ಆದೇಶಿಸಿದೆ. ಆದರೆ ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದೆ. ಮೊದಲು ಜಲಾಶಯದಲ್ಲಿನ ನೀರಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ನಮ್ಮ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಇರುವುದನ್ನು ಪರಿಶೀಲಿಸಿದರೆ ಪರಿಸ್ಥಿತಿ ಅರ್ಥವಾಗುತ್ತದೆ. ವಿರೋಧ ಪಕ್ಷದ ನಾಯಕರು ಟೀಕೆಗೆ ಸೀಮಿತವಾಗಬಾರದು. ಸರ್ವಪಕ್ಷ ಸಭೆಯಲ್ಲಿ ಸರ್ಕಾರಕ್ಕೆ ಸಲಹೆ ನೀಡಬೇಕು. ಸುಮ್ಮನೆ ಟೀಕಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಕಿವಿಮಾತು ಹೇಳಿದರು. ಬಿಜೆಪಿಯ 25 ಸಂಸದರಿದ್ದರೂ ಯಾರೊಬ್ಬರು ಪ್ರಧಾನಿ ಬಳಿ ಮಾತನಾಡಿಲ್ಲ. ಇದು ನಾಚಿಕೆಗೇಡು ಎಂದರು.
ಉದಯನಿಧಿ ಸನಾತನ ಧರ್ಮ ಹೇಳಿಕೆ ಅವಿವೇಕತನದ್ದು: ಭಾಸ್ಕರ್ ರಾವ್
ಕಾಂಗ್ರೆಸ್ಗೆ ಮೈತ್ರಿ ಲಾಭ: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭವೇ ಹೊರತು ಅವರಿಗೆ ಯಾವುದೇ ಅನುಕೂಲವಾಗದು. ಕಾಂಗ್ರೆಸ್ 22 ರಿಂದ 25 ಕ್ಷೇತ್ರದಲ್ಲಿ ಜಯ ಗಳಿಸಲಿದೆ. ಈ ಬಾರಿ ಸಂಸದ ಪ್ರತಾಪ ಸಿಂಹಗೆ ಸೋಲು ಖಚಿತ. ಸೋಲುವ ಭೀತಿಯಿಂದ ಕಂಡ ಕಂಡವರ ಕಾಲು ಹಿಡಿಯುತ್ತಿದ್ದಾರೆ. ಅವರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದಿಲ್ಲ. 3 ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ. ಒಂದು ವೇಳೆ ಪ್ರತಾಪ ಸಿಂಹ ಗೆದ್ದರೆ ನಾನು ಊರು ಬಿಟ್ಟು ಹೋಗುತ್ತೇನೆ ಎಂದು ಅವರು ಟೀಕಿಸಿದರು.
ಮಹಿಷಾ ದಸರಾ ಆಚರಣೆ ವಿಚಾರದಲ್ಲಿ ಪ್ರತಾಪ ಸಿಂಹ ಪೊಲೀಸರು ಮತ್ತು ಅಧಿಕಾರಿಗಳಿಗೆ ಧಮ್ಕಿ ಹಾಕುವುದನ್ನು ಬಿಟ್ಟು ಬಾಯಿ ಮುಚ್ಚಿಕೊಂಡು ಇರಬೇಕು. ತಮ್ಮ ಸರ್ಕಾರ ಇದ್ದಾಗ ಪ್ರತಾಪ ಸಿಂಹ ರೌಡಿಸಂ ಮಾಡಿ ಆಗಿದೆ. ಈಗ ಸುಮ್ಮನಿರಬೇಕು ಎಂದರು. ಮಹಿಷಾಸುರ ಕಳಂಕ ಇರುವ ವ್ಯಕ್ತಿಯಾಗಿದ್ದರೆ ಇಲ್ಲಿ ಯಾಕೇ ಪ್ರತಿಮೆ ಹಾಕುತ್ತಿದ್ದರು. ಹೊರಗಡೆಯಿಂದ ಬಂದ ಜನರು ನಮಸ್ಕರಿಸುತ್ತಾರೆ. ದಸರಾ ಅಂದರೆ ಹಬ್ಬ. ಅವರವರ ಆಚಾರ-ವಿಚಾರ ಆಚರಿಸಿಕೊಳ್ಳಲಿ. ಇದು ಕೋಮುವಾದಿ ಸರ್ಕಾರವಲ್ಲ, ಜಾತ್ಯಾತೀತ ಕಾಂಗ್ರೆಸ್ ಸರ್ಕಾರ ಎಂಬುದನ್ನು ಪ್ರತಾಪಸಿಂಹ ಅರಿತುಕೊಳ್ಳಬೇಕು ಎಂದು ಅವರು ತಿರುಗೇಟು ನೀಡಿದರು.
ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ದುರಹಂಕಾರದ ಮಾತುಗಳನ್ನಾಡುತ್ತಿದೆ: ಅಶ್ವತ್ಥನಾರಾಯಣ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕಿಂತ ಆರೋಗ್ಯ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದರೆ ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬ ಧಮ್ಕಿ ಹಾಕುತ್ತಿದ್ದಾನೆ ಎಂದು ಅವರು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ಅಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಎಂ. ಮಹೇಶ್, ಗಿರೀಶ್, ನಾಗೇಶ್ ಇದ್ದರು.