ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ, ದಕ್ಷಿಣದ ಪಪ್ಪು ಉದಯನಿಧಿ ಸ್ಟಾಲಿನ್: ಶ್ರೀರಾಮುಲು

By Govindaraj S  |  First Published Sep 14, 2023, 11:59 PM IST

ಆ ಇಬ್ಬರು ನಾಯಕರು ಹೆಚ್ಚು ಕಡಿಮೆ ಒಂದೇ ಬಾರಿ ರಾಜಕೀಯಕ್ಕಿಳಿದವರು. ಒಂದೇ ಪಕ್ಷದಲ್ಲಿದ್ದವರು ಒಂದೇ ಸಮುದಾಯದವರು ಕೂಡ ಹೌದು. ಆದ್ರೇ ರಾಜಕೀಯ ಕಾರಣಗಳಿಂದ ಇಬ್ಬರು ಬೇರೆ ಬೇರೆ ಪಕ್ಷಕ್ಕೆ ಹೋಗದಷ್ಟೇ ಅಲ್ಲದೇ ಪರಸ್ಪರ ಸ್ಪರ್ಧೆ ಮಾಡೋ ಮೂಲಕ ಓರ್ವ ನಾಯಕ ಸೋತ್ರೇ ಮತ್ತೊಬ್ಬ ನಾಯಕ ಗೆದ್ದು, ಇದೀಗ ಮಂತ್ರಿಯಾಗಿದ್ದಾರೆ. 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ಸೆ.14): ಆ ಇಬ್ಬರು ನಾಯಕರು ಹೆಚ್ಚು ಕಡಿಮೆ ಒಂದೇ ಬಾರಿ ರಾಜಕೀಯಕ್ಕಿಳಿದವರು. ಒಂದೇ ಪಕ್ಷದಲ್ಲಿದ್ದವರು ಒಂದೇ ಸಮುದಾಯದವರು ಕೂಡ ಹೌದು. ಆದ್ರೇ ರಾಜಕೀಯ ಕಾರಣಗಳಿಂದ ಇಬ್ಬರು ಬೇರೆ ಬೇರೆ ಪಕ್ಷಕ್ಕೆ ಹೋಗದಷ್ಟೇ ಅಲ್ಲದೇ ಪರಸ್ಪರ ಸ್ಪರ್ಧೆ ಮಾಡೋ ಮೂಲಕ ಓರ್ವ ನಾಯಕ ಸೋತ್ರೇ ಮತ್ತೊಬ್ಬ ನಾಯಕ ಗೆದ್ದು, ಇದೀಗ ಮಂತ್ರಿಯಾಗಿದ್ದಾರೆ. ಆದ್ರೇ, ಲೋಕಸಭೆ ಚುನಾವಣೆಯ ಹುರುಪಿನಲ್ಲಿರೋ ಗಣಿನಾಡಿನ  ಮಾಜಿ ಸಚಿವ ಶ್ರೀರಾಮುಲು ಮತ್ತು ಹಾಲಿ ಸಚಿವ ನಾಗೇಂದ್ರ ನಡುವೆ ಇದೀಗ ಸನಾತನ ಧರ್ಮ ಮತ್ತು  ಪಪ್ಪು ( ರಾಹುಲ್ ಗಾಂಧಿ ವಿಚಾರದಲ್ಲಿ ) ವಿಚಾರವಾಗಿ ವಾಕ್ಸಮರ ನಡೆಯುತ್ತಿದೆ.  

Tap to resize

Latest Videos

undefined

ಒಂದೇ ಪಕ್ಷದಲ್ಲಿದ್ದವರ ಮಧ್ಯೆ ಇದೀಗ ಪಪ್ಪು ವಿಚಾರದಲ್ಲಿ ವಾಗ್ವಾದ: ಬಳ್ಳಾರಿಯಲ್ಲಿ ಆಂದ್ರ ಶೈಲಿಯ ಬೈದಾಟದ ರಾಜಕೀಯಕ್ಕೆ ನಾಂದಿ ಹಾಡಿದ ಸಚಿವ ನಾಗೇಂದ್ರ ಮತ್ತು ಮಾಜಿ ಶಾಸಕ ಶ್ರೀರಾಮುಲು… ಸನಾತನ ಧರ್ಮ ಮತ್ತು ಪಪ್ಪು ವಿಚಾರವಾಗಿ ಪರಸ್ಪರ ನಿಂದಿಸಿಕೊಂಡ ನಾಯಕರು.. ಹೌದು, ಬಳ್ಳಾರಿ ಅಂದ್ರೇ ಮೊದಲಿನಿಂದಲೂ ಅದೊಂದು ರೀತಿಯಲ್ಲಿ ರೆಬಲ್ ರಾಜಕೀಯ  ಅಂದಿನ ಕಾಲದ ದಿವಾಕರ ಬಾಬು ಅವರಿಂದ ಹಿಡಿದು ಮೊನ್ನೆ ಮೊನ್ನೆ ವರೆಗಿನ ಜನಾರ್ದನ ರೆಡ್ಡಿ ವರೆಗಿನ ರಾಜಕೀಯದಲ್ಲಿ ವಾಕ್ಸಮರಕ್ಕೆ ಇಲ್ಲಿ ಹೆಚ್ಚು ಮಹತ್ವವಿದೆ. 

ಬಿಜೆಪಿ ಜತೆ ಮೈತ್ರಿ ಆಗದಿದ್ದರೆ ಜೆಡಿಎಸ್‌ಗೆ ಉಳಿಗಾಲವಿಲ್ಲ: ಮಾಜಿ ಸಂಸದ ಶಿವರಾಮೇಗೌಡ

ಆದ್ರೇ  ಕಳೆದೊಂದು ದಶಕದಿಂದ ವಾಕ್ಸಮರಕ್ಕೆ ಇಲ್ಲಿಯ ನಾಯಕರು ಒಂದಷ್ಟು ಬ್ರೇಕ್ ಹಾಕಿದ್ರು. ಆದ್ರೇ, ಮೊನ್ನೆ ಸನಾತನ ಧರ್ಮದ ವಿಚಾರವಾಗಿ ತಮಿಳುನಾಡಿನ ಸಚಿವ ಉದಯನಿಧಿ  ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಶ್ರೀರಾಮುಲು ಉತ್ತರ ಭಾರತದಲ್ಲಿ ರಾಹುಲ್ ಗಾಂಧಿ ಹೇಗೆ  ಪಪ್ಪು ರೀತಿಯಲ್ಲಿದ್ದಾರೋ ದಕ್ಷಿಣದಲ್ಲಿ ಉದಯನಿಧಿ ಕೂಡ ಒಬ್ಬ ಪಪ್ಪು ಎಂದ್ರು.  ಇವರಿಬ್ಬರಷ್ಟೇ ಅಲ್ಲ ಎಷ್ಟೇ ಜನ ಪಪ್ಪುಗಳು ಬಂದ್ರೂ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲುವ ಮೂಲಕ ಮೋದಿ ಪ್ರಧಾನಿಯಾಗ್ತಾರೆ ಎಂದ್ರು.

ಸೋತು ಸುಣ್ಣವಾಗಿರೋ ಬಿಜೆಪಿ ನಾಯಕರು ಪಾಠ ಹೇಳೋ ಅಗತ್ಯವಿಲ್ಲ: ಇನ್ನೂ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವ ಸಾಧಿಸಿರೋ ಸಚಿವ ನಾಗೇಂದ್ರ ಅವರು ಶ್ರೀರಾಮುಲು ಹೇಳಿಕೆಗೆ ಒಂದಷ್ಟು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀರಾಮುಲು ಅವರು ತಾವಷ್ಟೇ ಸೋತಿರದಲ್ಲದೇ ಅಲ್ಲ. ಇಡೀ ಜಿಲ್ಲೆಯಲ್ಲಿ ಬಿಜೆಪಿಯ ಕ್ಷೇತ್ರಗಳನ್ನು ಕಳೆದುಕೊಂಡಿದ್ದಾರೆ. ಜಿಲ್ಲೆಯ ಐದು ಕ್ಷೇತ್ರದ ಪೈಕಿ ಒಂದರಲ್ಲೂ ಅವರು ಗೆದ್ದಿಲ್ಲ. ಇನ್ನೂ ಲೋಕಸಭೆ ಚುನಾವಣೆಯಲ್ಲೂ ಸೋಲ್ತಾರೆ ಆ ಬಳಿಕ ಯಾರು ಪಪ್ಪು ಎಂದು ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಮೊನ್ನೆ ಚುನಾವಣೆಯಲ್ಲಿ ಅವರ ಡಿಪಾಸಿಟ್ ಕಳೆಯುತ್ತಿದ್ದೇವೆ ಪ್ರಜಾಪ್ರಭುತ್ವದಲ್ಲಿ ನಮಗೂ ವಿರೋಧಿಗಳು ಇರಲಿ ಎಂದು ಬಿಟ್ಡಿದ್ದೇವೆ ಎಂದಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ಹೋರಾಟ ಅನಿವಾರ್ಯ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ

ಆಂಧ್ರ ಶೈಲಿಯ ವಾಕ್ಸಮರ: ಕಳೆದ ವಾರ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಪರಸ್ಪರ ಬೈದಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ರು. ಇದೀಗ ಅವರ ದಾರಿಯಲ್ಲಿಯೇ ಶ್ರೀರಾಮುಲು ಮತ್ತು ನಾಗೇಂದ್ರ ವಾಗ್ದಾಳಿ ಮಾಡಿಕೊಂಡಿದ್ಧಾರೆ. ವಿಧಾನಸಭೆ ಚುನಾವಣೆ ಗೆಲುವಿನ ಹುರಪಿನಲ್ಲಿರೋ ಕಾಂಗ್ರೆಸ್ ಮತ್ತು ಸೋತು ಅದರ ಸೇಡನ್ನು ಲೋಕಸಭೆಯಲ್ಲಿ ತಿರಿಸಿಕೊಳ್ಳುವ ತವಕದಲ್ಲಿ ಬಿಜೆಪಿಯ ನಾಯಕರು ಪರಸ್ಪರ ವಾಗ್ದಾಳಿ ನಡೆಸಿಕೊಳ್ಳುತ್ತಿದ್ದಾರೆ. ಆದ್ರೇ ಇದರ ಪರಿಣಾಮ ಲೋಕಸಭೆ ಚುನಾವಣೆ ಮೆಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎನ್ನುವದನ್ನು ಕಾದುನೋಡಬೇಕಿದೆ.

click me!