ಉದಯನಿಧಿ ಸನಾತನ ಧರ್ಮ ಹೇಳಿಕೆ ಅವಿವೇಕತನದ್ದು: ಭಾಸ್ಕರ್ ರಾವ್

Published : Sep 14, 2023, 11:01 PM IST
ಉದಯನಿಧಿ ಸನಾತನ ಧರ್ಮ ಹೇಳಿಕೆ ಅವಿವೇಕತನದ್ದು: ಭಾಸ್ಕರ್ ರಾವ್

ಸಾರಾಂಶ

ಸನಾತನ ಧರ್ಮ ಹಾಗೂ ಹಿಂದೂ ಧರ್ಮ ಎರಡೂ ಒಂದೇ ಆಗಿದ್ದು, ಈ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಅವಿವೇಕತನದ್ದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ರಾವ್ ತಿಳಿಸಿದರು. 

ಮೈಸೂರು (ಸೆ.14): ಸನಾತನ ಧರ್ಮ ಹಾಗೂ ಹಿಂದೂ ಧರ್ಮ ಎರಡೂ ಒಂದೇ ಆಗಿದ್ದು, ಈ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಅವಿವೇಕತನದ್ದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ರಾವ್ ತಿಳಿಸಿದರು. ಮಹಾಸಭಾಕ್ಕೆ ನೇಮಕಗೊಂಡ ಹಿನ್ನೆಲೆಯಲ್ಲಿ ಈ ಭಾಗದಲ್ಲಿನ ವಿಪ್ರ ಸಮುದಾಯ ಸಂಘಟಿಸಲು ಆಗಮಿಸಿದ್ದ ಅವರು, ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಉದಯನಿಧಿ ಸ್ಟಾಲಿನ್ ಜವಾಬ್ದಾರಿಯುತ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಎಲ್ಲಾ ಧರ್ಮಗಳಲ್ಲೂ ಅಸಮಾನತೆ, ಭಿನ್ನಾಭಿಪ್ರಾಯ ಇದ್ದೇ ಇದೆ. ಆದರೆ ಅದನ್ನು ಸರಿಪಡಿಸಲು ಶ್ರಮಿಸುವ ಬದಲು ಧರ್ಮವನ್ನು ಹೀಗಳೆಯವುದು ಆ ಧರ್ಮದಲ್ಲಿರುವವರ ಮನಸ್ಸನ್ನು ನೋಯಿಸುವ ಕೆಲಸವಾಗಿದೆ. ಇದು ಸಂವಿಧಾನ ವಿರೋಧಿಯೂ ಹೌದು ಎಂದರು. ರಾಜ್ಯದಲ್ಲಿನ ಸಚಿವರು ನೀಡಿರುವ ವಿವಾದಾತ್ಮಕ ಹೇಳಿಕೆ ಬಗೆಗಿನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆ ರೀತಿ ಮಾತನಾಡುವುದು ಸರಿಯಲ್ಲ. ಸಿಎಂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರೇ ತಿರುಗಿ ಬಿದ್ದು ಸಚಿವರನ್ನು ವಜಾಗೊಳಿಸುವಂತೆ ಒತ್ತಾಯಿಸುವುದಾಗಿ ಅವರು ಎಚ್ಚರಿಸಿದರು.

ದೇವೇಗೌಡರ ಕುಟುಂಬದ ಬಗ್ಗೆ ಸುಳ್ಳು ಹೇಳುವುದನ್ನು ಮೊಯ್ಲಿ ಬಿಡಲಿ: ಎಚ್.ಡಿ.ಕುಮಾರಸ್ವಾಮಿ

ಈ ವೇಳೆ ವಿಪ್ರ ಸಮುದಾಯದ ಸಂಘಟನೆಗಾಗಿ ತಮ್ಮನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ವಿಪ್ರರಲ್ಲಿ ಶ್ರೀಮಂತರೂ ಇದ್ದಾರೆ. ಕಡು ಬಡವರೂ ಇದ್ದಾರೆ. ಹೀಗಾಗಿ ಕಡುಬಡವರನ್ನು ಗುರುತಿಸಿ, ಅವರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮೇಲೆ ಬರುವ ನಿಟ್ಟಿನಲ್ಲಿ ಮಹಾಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಹೀಗಾಗಿ ಮುಂದಿನ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ವಿಪ್ರ ಮಹಿಳೆಯರ ಸಮಾವೇಶ ಹಮ್ಮಿಕೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಿ.ಆರ್. ನಟರಾಜ ಜೋಯಿಸ್, ಕೆ. ರಘುರಾಂ, ಪುಷ್ಪಾ ಅಯ್ಯಂಗಾರ್, ಎನ್. ಶ್ರೀನಿವಾಸ್, ರವೀಂದ್ರ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ