ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿದೆ. ಈಗ ಸರ್ಕಾರದ ಮೇಲೆ ಕಮಿಷನ್ ಹಾಗೂ ಭ್ರಷ್ಟಾಚಾರದ ಆರೋಪ ಪರಾಕಾಷ್ಠೆಗೆ ತಲುಪಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಮಂಗಳೂರು (ಆ.10): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿದೆ. ಈಗ ಸರ್ಕಾರದ ಮೇಲೆ ಕಮಿಷನ್ ಹಾಗೂ ಭ್ರಷ್ಟಾಚಾರದ ಆರೋಪ ಪರಾಕಾಷ್ಠೆಗೆ ತಲುಪಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ. ಗುರುವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಗಾವಣೆ ದಂಧೆಯಲ್ಲಿ ಸರ್ಕಾರ ನಿರತವಾಗಿದೆ. ಹಾಲಿ ಸ್ಥಳದಲ್ಲೇ ಸರ್ಕಾರಿ ಸಿಬ್ಬಂದಿ ಮುಂದುವರಿಯಬೇಕಾದರೂ ಲಕ್ಷಾಂತರ ರು. ಮೊತ್ತ ನೀಡಬೇಕಾಗಿದೆ.
ಈ ಬಗ್ಗೆ ಸದನದ ಒಳ, ಹೊರಗೆ ಬಿಜೆಪಿ ಪ್ರಸ್ತಾಪಿಸಿ ಹೋರಾಟ ನಡೆಸಿದೆ. ಬಿಬಿಎಂಪಿ ಕಾಮಗಾರಿ ವಿಚಾರದಲ್ಲಿ ಗುತ್ತಿಗೆದಾರರು ಸಚಿವರ ವಿರುದ್ಧವೇ ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ದೂರಿನ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ‘ಪೇ ಸಿಎಂ- ಪೇ ಡಿಸಿಎಂ’ ಎಂದು ಫಲಕ ಹಾಕುವ ಪರಿಸ್ಥಿತಿ ಬಂದೊದಗಿದೆ. ಅಧಿಕಾರಿಗಳ ಹುದ್ದೆಯನ್ನು ಹರಾಜಿಗೆ ಇರಿಸಿದಂತಾಗಿದೆ. ಈ ಬಗ್ಗೆ ಬಿಜೆಪಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಿದೆ, ಕೊನೆ ಹಂತದಲ್ಲಿ ಸರ್ಕಾರದ ರಾಜಿನಾಮೆಗೂ ಒತ್ತಾಯಿಸಲಿದೆ ಎಂದರು.
ನನ್ನ ಸಾಯಿಸಿ ಉಪಚುನಾವಣೆ ಕುತಂತ್ರ: ಪ್ರಭು ಚವ್ಹಾಣ್ ಆರೋಪ
ಲೋಕಸಭೆ ಚುನಾವಣೆಗೆ ಸಜ್ಜಾಗಿ: ಪಕ್ಷದ ಕಾರ್ಯಕರ್ತರು ಲೋಕಸಭೆ ಚುನಾವಣೆಗೆ ಸಜ್ಜಾಗಬೇಕು. ನರೇಂದ್ರ ಮೋದಿ ಅವರ ಸಾಧನೆಗಳನ್ನು ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನತೆಗೆ ತಿಳಿಸಬೇಕು. ಮತ್ತೆ ದೇಶಕ್ಕೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಪಟ್ಟಣದ ರಾಜರಾಜೇಶ್ವರಿ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡ ಬಿಜೆಪಿ ಜಿಲ್ಲಾ ಮಂಡಲಗಳ ಸಂಯುಕ್ತ ಮೋರ್ಚಾಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ತ್ರಿವಳಿ ತಲಾಖ್ ಅನ್ನು ನಿಷೇಧಿಸಿದ ಬಿಜೆಪಿ ಸರ್ಕಾರದ ನಿರ್ಧಾರವು ಮುಸ್ಲಿಂ ಮಹಿಳೆಯರಲ್ಲಿ ಸುರಕ್ಷತೆಯ ಪ್ರಜ್ಞೆ ಹೆಚ್ಚಿಸಿದೆ.
ತಿಮ್ಮಾಪೂರಗೆ ನೂರಂದ್ರು ಗೊತ್ತಿಲ್ಲ..ಸಾವಿರ ಅಂದ್ರೂ ಗೊತ್ತಿಲ್ಲ: ಗೋವಿಂದ ಕಾರಜೋಳ
ಮುಂಬರುವ ರಕ್ಷಾ ಬಂಧನದ ಹಬ್ಬವನ್ನು ಮುಸ್ಲಿಂ ಮಹಿಳೆಯರ ಜೊತೆ ಆಚರಣೆ ಮಾಡುವಂತೆ ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದರು. ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಿಂದಗಿ ಮಂಡಲದ ಅಧ್ಯಕ್ಷ ಈರಣ್ಣ ರಾವೂರ ಅವರು ಸನ್ಮಾನಿಸಿ ಗೌರವಿಸಿದರು. ಹೂವಿನ ಹಿಪ್ಪರಗಿಯ ಭೀಮರಾಯ ಹೂಗಾರ ಅವರು ರಚಿಸಿದ ರಾಜಕಾರಣಿ ಹೇಗಿರಬೇಕು? ಲಕ್ಷ ನುಡಿಮುತ್ತುಗಳ ಕೃತಿಯನ್ನು ಮಾಜಿ ಸಚಿವ ಕೋಟಾಶ್ರಿನಿವಾಸ ಪೂಜಾರಿ ಲೋಕಾರ್ಪಣೆ ಮಾಡಿದರು.