ಕೊಡಗಿನ ಭದ್ರಕೋಟೆಯಲ್ಲಿ ಬಿಜೆಪಿ ಮತ್ತೆ ಕಮಲ ಅರಳಿಸಲು ಪ್ಲಾನ್

By Gowthami K  |  First Published Mar 4, 2023, 7:49 PM IST

ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ಮತ್ತೆ ಕಮಲ ಅರಳಿಸಲು ಹಾಲಿ ಶಾಸಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಹಾಲಿ ಶಾಸಕರಿಗೆ ಈ ಬಾರಿಯೂ ಟಿಕೆಟ್ ಫಿಕ್ಸ್ ಎನ್ನಲಾಗುತ್ತಿದೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನ್ಯೂಸ್

ಕೊಡಗು (ಫೆ.4): ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ಮತ್ತೆ ಕಮಲ ಅರಳಿಸಲು ಹಾಲಿ ಶಾಸಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಹಾಲಿ ಶಾಸಕರಿಗೆ ಈ ಬಾರಿಯೂ ಟಿಕೆಟ್ ಫಿಕ್ಸ್ ಎನ್ನಲಾಗುತ್ತಿದ್ದು, ಇಬ್ಬರು ಶಾಸಕರು ತಮ್ಮ ಎದುರಾಳಿಗಳು ಯಾರೇ ಆದರೂ ಮತಗಳು ವಿಭಜನೆ ಆಗದಂತೆ ನೋಡಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಪ್ರತೀ ಪಟ್ಟಣ, ಮಂಡಲಗಳ ವ್ಯಾಪ್ತಿಯಲ್ಲಿ ಬಿಜೆಪಿಯ ಹಿರಿಯರು, ಪಕ್ಷಕ್ಕಾಗಿ ಸಾಕಷ್ಟು ದುಡಿದವರನ್ನು ಗೌರವಿಸಬೇಕು ಎನ್ನುವ ನೆಪದಲ್ಲಿ ಪ್ರತೀ ಮಂಡಲಗಳ ವ್ಯಾಪ್ತಿಯಲ್ಲಿ ನೂರಾರು ಜನರಿಗೆ ಶಾಸಕರು ಸನ್ಮಾನ ಮಾಡುತ್ತಿದ್ದಾರೆ. ಹಿರಿಯರಿಗೆ ಸನ್ಮಾನ ಮಾಡಲಾಗುತ್ತಿದ್ದು, ಶಾಲು, ಹಾರ ಹಾಕಿ ಸನ್ಮಾನ ಮಾಡುವ ಜೊತೆಗೆ ಫ್ಲಾಸ್ಕ್ ವಿತರಣೆ ಮಾಡಲಾಗುತ್ತಿದೆ.  ಶುಕ್ರವಾರಷ್ಟೇ ಮಡಿಕೇರಿ ಗ್ರಾಮಾಂತರ ಮತ್ತು ನಗರ ಮಂಡಲ ವ್ಯಾಪ್ತಿಯ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶನಿವಾರ ಕುಶಾಲನಗರ ಪುರಸಭೆ ವ್ಯಾಪ್ತಿಯ ಪೇಜ್ ಪ್ರಮುಖರ ಸಮಾವೇಶ ಆಯೋಜಿಸಲಾಗಿತ್ತು. ಒಂದೊಂದು ಮಂಡಲದಲ್ಲೂ ಕನಿಷ್ಠ 150 ರಿಂದ 200 ಜನರನ್ನು ಸನ್ಮಾನಿಸಲಾಗುತ್ತಿದೆ. ಮಡಿಕೇರಿ ನಗರದ ಗೌಡ ಸಮಾಜದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ 800 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

Tap to resize

Latest Videos

undefined

ಈ ಕಾರ್ಯಕ್ರಮದಲ್ಲಿ 200 ಜನರನ್ನು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಗಿತ್ತು. ಕುಶಾಲನಗರದಲ್ಲಿ ನಡೆದ ಪೇಜ್ ಪ್ರಮುಖರ ಸಮಾವೇಶದಲ್ಲಿ 150 ಜನರಿಗೂ ಶಾಲು ಹೊದಿಸಿ, ಹಾರ ಹಾಕುವುದರ ಜೊತೆಗೆ ನೂರಾರು ರೂಪಾಯಿ ಬೆಲೆ ಬಾಳುವ ಫ್ಲಾಸ್ಕ್ ಕೂಡ ವಿತರಣೆ ಮಾಡಲಾಗಿದೆ. ಮಡಿಕೇರಿ ಮತ್ತು ವಿರಾಜಪೇಟೆ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದು ಕಾಂಗ್ರೆಸ್ನಿಂದ ಯಾರೇ ಅಭ್ಯರ್ಥಿ ಆದರೂ ಬಿಜೆಪಿಯ ಮತಗಳು ವಿಭಜನೆ ಆಗದಂತೆ ಪ್ಲಾನ್ ರೂಪಿಸಲಾಗಿದೆ.

ಹೀಗಾಗಿಯೇ ಪ್ರತೀ ಮಂಡಲಗಳ ವ್ಯಾಪ್ತಿಯಲ್ಲಿ ಬಿಜೆಪಿ ನೂರಾರು ಜನರನ್ನು ಸನ್ಮಾನಿ ಗೌರವಿಸುವ ಮೂಲಕ ಮತಗಳನ್ನು ಗಟ್ಟಿಯಾಗಿ ಕ್ರೋಢೀಕರಿಸಿಕೊಳ್ಳುತ್ತಿದೆ. ಸಮಾವೇಶಕ್ಕೂ ಮುನ್ನ ಮುಳ್ಳುಸೋಗೆ ಗ್ರಾಮದಿಂದ ಕುಶಾಲನಗರದ ರೈತ ಸಹಕಾರ ಭವನದವರೆಗೆ ಬೈಕ್ ಜಾಥಾ ನಡೆಯಿತು. ನೂರಾರು ಜನರು ಬೈಕ್ ಜಾಥಾದಲ್ಲಿ ಭಾಗವಹಿಸಿ ಬಿಜೆಪಿಯ ಶಕ್ತಿ ಪ್ರದರ್ಶನ ನಡೆಸಿದರು. ಬೈಕ್ ಜಾಥಾದಲ್ಲಿ ಶಾಸಕ ಅಪ್ಪಚ್ಚು ರಂಜನ್ ಸ್ವತಃ ಬೈಕ್ ಚಾಲನೆ ಮಾಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಕುಲದೇವಿ ಕಾವೇರಿಗೆ ಅಪಮಾನಿಸಿದ ಕುಟುಂಬಸ್ಥರಿಗೆ ಮತ ಹಾಕ್ತೀರಾ: ಅಪ್ಪಚ್ಚು ರಂಜನ್ ಪ್ರಶ್ನೆ

ಸಮಾವೇಶದಲ್ಲಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ಗುಜರಾತಿನ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಹೊರಟಾಗ ಅಮೆರಿಕ ವೀಸಾ ತಡೆಹಿಡಿದಿತ್ತು. ಆದರೆ ಪ್ರಧಾನಿ ಆದಾಗ ಅಮೆರಿಕವೇ ರಿಕ್ವೆಕ್ಸ್ಟ್ ಮಾಡಿ ಅಮೆರಿಕಕ್ಕೆ ಬರಮಾಡಿಕೊಂಡಿತು. ಅಂದು ದೇಶವು ಭಿಕ್ಷುಕರ ರಾಷ್ಟ್ರವಾಗಿತ್ತು. ಇಂದು ಬೇರೆ ದೇಶಗಳಿಗೆ ಎಷ್ಟು ಬೇಕಾದರೂ ಸಾಲ ಕೊಡುವಂತಹ ಮಟ್ಟಿಗೆ ದೇಶ ಬೆಳೆದಿದೆ. ಇಂದು ಭಾರತ ವಿಶ್ವಗುರು ಆಗುತ್ತಿದೆ. ಬಿಜೆಪಿ ಎಲ್ಲರ ಪಕ್ಷವಾಗಿದ್ದು ಎಲ್ಲರನ್ನೂ ಒಂದೇ ಭಾವನೆಯಿಂದ ನೋಡುತ್ತದೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು, ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದು, ಈಗ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿರುವುದು ಬಿಜೆಪಿಯೇ ಎಂದರು.

KODAGU: ಲೋಕಾಯುಕ್ತ ದಾಳಿಗೆ ಸರ್ಕಾರವೇ ಸೂಚನೆ ನೀಡಿತ್ತಾ?: ಶಾಸಕ ಬೋಪಯ್ಯ

ಸಿದ್ದರಾಮಯ್ಯ ಅವರು  ಶಾದಿಭಾಗ್ಯ ಮಾಡಿ ಕೇವಲ ಮುಸಲ್ಮಾನರಿಗೆ ಅನುಕೂಲವಾಗುವಂತೆ ಮಾಡಿದರು. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಮಾಡಿ ಎಲ್ಲಾ ಸಮುದಾಯದ ಹೆಣ್ಣುಮಕ್ಕಳಿಗೆ ಅನುಕೂಲ ಆಗುವಂತೆ ಮಾಡಿದರು. ಕುಶಾಲನಗರವನ್ನು ತಾಲ್ಲೂಕು ಮಾಡಿದ್ದು, ಪುರಸಭೆ ಮಾಡಿದ್ದು ಬಿಜೆಪಿ ಸರ್ಕಾರ ಎಂದರು. ಕೊಡಗಿನಿಂದ ಕಾಂಗ್ರೆಸ್ ನಿಂದ ಗೆದ್ದು ಹೋಗಿ ಮಂತ್ರಿ ಮುಖ್ಯಮಂತ್ರಿ ಆಗಿದ್ದವರು ಕೊಡಗಿಗೆ ಏನು ಮಾಡಿದರು. ಕನಿಷ್ಠ ಒಂದು ಎಂಜಿನಿಯರಿಂಗ್ ಕಾಲೇಜು ತರಲು ಆಗಿರಲಿಲ್ಲ. ಆದರೆ ನಾವು ವಿಶ್ವ ವಿದ್ಯಾಲನಿಲಯ ಕೇಂದ್ರ, ಮೆಡಿಕಲ್ ಕಾಲೇಜು ತಂದಿದ್ದು ನಾನು ಎಂದರು. ಕೊಡಗು ಜಿಲ್ಲೆಗೆ 4000 ಸಾವಿರ ಕೋಟಿ ಅನುದಾನ ತಂದಿದ್ದರೆ, ಅದರಲ್ಲಿ 2 ಸಾವಿರ ಕೋಟಿ ಮಡಿಕೇರಿ ಕ್ಷೇತ್ರಕ್ಕೆ ತಂದಿದ್ದೇನೆ. ಹೀಗಾಗಿ ಬಿಜೆಪಿ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕಾಗಿದೆ ಎಂದರು. 

click me!