
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಇಂದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ ಪಕ್ಷದ ನಾಲ್ವರು ಶಾಸಕರಿಗೆ "ದೆಹಲಿ ದಲ್ಲಾಳಿಗಳು" ಲಂಚ ನೀಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತೆಲಂಗಾಣದ ಫಾರ್ಮ್‌ಹೌಸ್‌ನಲ್ಲಿ ಬುಧವಾರ ನಡೆದ ಘಟನೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ತೆಲಂಗಾಣದ ಮುನುಗೋಡಿನಲ್ಲಿ ಪ್ರಮುಖ ಉಪ ಚುನಾವಣೆಗೂ ಮುನ್ನ ಬಿಆರ್‌ಎಸ್ ಎಂದು ಮರುನಾಮಕರಣಗೊಂಡಿರುವ ತೆಲಂಗಾಣ ರಾಷ್ಟ್ರ ಸಮಿತಿಗೆ ಬಿಜೆಪಿ ವಿರುದ್ಧ ಅಸ್ತ್ರ ದೊರೆತಂತಾಗಿದೆ.
‘ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿಯ ರಾಜಕೀಯವನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಆರೋಪಿಸಿದ ತೆಲಂಗಾಣ ಮುಖ್ಯಮಂತ್ರಿ, ‘ನೇಕಾರರ ಕುಟುಂಬದ ಒಂದೇ ಒಂದು ಮತವೂ ಬಿಜೆಪಿಗೆ ಹೋಗದಂತೆ ನೋಡಿಕೊಳ್ಳುತ್ತೇನೆ’ ಎಂದರು. "ನಿಮಗೆ ಇನ್ನೇನು ಬೇಕು ಪಿಎಂ ಮೋದಿ? ಪ್ರಧಾನಿಗಿಂತ ದೊಡ್ಡ ಹುದ್ದೆ ಇಲ್ಲ, ಅಲ್ಲವೇ? ಒಂದಲ್ಲ ಎರಡು ಬಾರಿ ಪ್ರಧಾನಿಯಾದಿರಿ. ಆದರೂ, ಯಾಕೆ ಈ ಗಲಾಟೆ? ಏಕೆ ಈ ನೀಚತನ ಮತ್ತು ಏಕೆ ಈ ಅರಾಜಕತೆ?" ಮುನುಗೋಡಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದೆ.
ಇದನ್ನು ಓದಿ: Telangana ಶಾಸಕರ ಖರೀದಿ ಯತ್ನ ಆರೋಪ: ಅಮಿತ್ ಶಾ ಬಂಧಿಸಿ ಎಂದ Manish Sisodia
"ನಿಮಗೆ ಇನ್ನೇನು ಬೇಕು ಪಿಎಂ ಮೋದಿ? ಪ್ರಧಾನಿಗಿಂತ ದೊಡ್ಡ ಹುದ್ದೆ ಇಲ್ಲ, ಅಲ್ಲವೇ? ಒಂದಲ್ಲ ಎರಡು ಬಾರಿ ಪ್ರಧಾನಿಯಾದಿರಿ. ಆಗ ಯಾಕೆ ಈ ಗಲಾಟೆ? ಏಕೆ ಈ ನೀಚತನ ಮತ್ತು ಏಕೆ ಈ ಅರಾಜಕತೆ?" ಎಂದೂ ಕೆ. ಚಂದ್ರಶೇಖರ್ ರಾವ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುನುಗೋಡಿನಲ್ಲಿ ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದ್ದು, ಈ ವೇಳೆ ನಡೆ ಸಭೆಯಲ್ಲಿ ಸಿಎಂ ಈ ಹೇಳಿಕೆಗಳನ್ನು ನೀಡಿದ್ದಾರೆ.
ಆದರೆ, ಆಡಳಿತ ಪಕ್ಷದ ಶಾಸಕರ ಖರೀದಿ ಯತ್ನ ಅಥವಾ ಕುದುರೆ ವ್ಯಾಪಾರವನ್ನು ತಳ್ಳಿಹಾಕಿದ ಬಿಜೆಪಿ, ಇದು ಮುಖ್ಯಮಂತ್ರಿಯವರ ಚಿತ್ರಕಥೆ, ನಿರ್ದೇಶನ ಮತ್ತು ನಿರ್ಮಾಣದ ನಾಟಕ ಎಂದು ಘೋಷಿಸಿದೆ. ಅಲ್ಲದೆ, ಬಿಜೆಪಿ ನ್ಯಾಯಾಲಯ ಮತ್ತು ಚುನಾವಣಾ ಆಯೋಗದ ಮೊರೆಯನ್ನೂ ಹೋಗಿದೆ.
ಇದನ್ನೂ ಓದಿ: ಟಿಆರ್‌ಎಸ್‌ಗೆ ತಿರುಗುಬಾಣವಾದ ಅಪರೇಷನ್ ಕಮಲ ಆರೋಪ: ಮೂವರ ಬಿಡುಗಡೆಗೆ ಕೋರ್ಟ್ ಸೂಚನೆ
"ಕೆಲವು ದೆಹಲಿ ದಲ್ಲಾಳಿಗಳು ತೆಲಂಗಾಣದ ಸ್ವಾಭಿಮಾನಕ್ಕೆ ಸವಾಲು ಹಾಕಲು ಬಂದರು... ಅವರು ನಾಲ್ಕು ಶಾಸಕರಿಗೆ ₹ 100 ಕೋಟಿ ನೀಡಿದರು," ಎಂದು ಚಂದ್ರಶೇಖರ್ ರಾವ್ ಹೇಳಿದರು. ಅಲ್ಲದೆ, ಆಪರೇಷನ್ ಕಮಲ ಪ್ರಯತ್ನ ಎಂದು ಹೇಲಲಾದ ಘಟನೆ ನಡೆಯುತ್ತಿದ್ದ ಫಾರ್ಮ್‌ಹೌಸ್‌ಗೆ ಪೊಲೀಸರನ್ನು ಕರೆದ ನಾಲ್ವರು ಶಾಸಕರನ್ನು ಸ್ಟೇಜ್ ಮೇಲೆ ಕರೆಸಿ ಪರೇಡ್ ಮಾಡಿದ್ದಾರೆ.
ಈ ಘಟನೆಯಲ್ಲಿ ಒಬ್ಬರು ಉಸ್ಯಮಿ ಸೇರಿ ಮೂವರನ್ನು ಬಂಧಿಸಲಾಗಿದೆ. ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ನಂದ ಕುಮಾರ್ ಮತ್ತು ಸಿಂಹಯಾಜಿ ಸ್ವಾಮ್ಯತ್ ಎಂಬ ಮೂವರನ್ನು 14 ದಿನಗಳ ಜೈಲು ಕಸ್ಟಡಿಗೆ ಕಳುಹಿಸಲಾಗಿದೆ.
ತೆಲಂಗಾಣವನ್ನು ವಶಪಡಿಸಿಕೊಳ್ಳಲು ಅವರು (ಬಿಜೆಪಿ) ಬಯಸಿದ್ದರು... ನಾನು ರೈತರಿಗೆ ಹೇಳುತ್ತಿದ್ದೇನೆ -- ನಾವು ಮತ ಚಲಾಯಿಸುವಾಗ ಎಚ್ಚರಿಕೆಯಿಂದ ಮತ ಚಲಾಯಿಸಬೇಕು. ಇಂತಹ ರಾಜಕೀಯದಿಂದ ನಾವು ಲಂಚ ಪಡೆಯುವುದಿಲ್ಲ, ಮೋಸ ಹೋಗುವುದಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿದರು.
ಇದನ್ನೂ ಓದಿ: ಕೆಸಿಆರ್ ಪಕ್ಷದ ನಾಲ್ವರು ಶಾಸಕರಿಗೆ BJPಯಿಂದ ತಲಾ 50 ಕೋಟಿ ಆಫರ್..?
ಬುಧವಾರ ತೆಲಂಗಾಣ ರಾಷ್ಟ್ರ ಸಮಿತಿ ಶಾಸಕ ಪೈಲಟ್ ರೋಹಿತ್ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದು, ಬಿಜೆಪಿಗೆ ಸೇರಿದ ರಾಮಚಂದ್ರ ಭಾರತಿ ಮತ್ತು ನಂದಕುಮಾರ್ ತಮ್ಮನ್ನು ಭೇಟಿ ಮಾಡಿ ಬಿಜೆಪಿ ಸೇರಲು ₹ 100 ಕೋಟಿ ಆಮಿಷ ಒಡ್ಡಿದ್ದರು ಎಂದು ಆರೋಪಿಸಿದ್ದರು. ತಪ್ಪಿದಲ್ಲಿ ಕೇಂದ್ರೀಯ ತನಿಖಾ ದಳದಂತಹ ಕೇಂದ್ರೀಯ ಸಂಸ್ಥೆಗಳ ಮೂಲಕ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಅವರು ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮುನುಗೋಡಿನ ಉಪಚುನಾವಣೆಯ ಮುನ್ನ ಈ ಆರೋಪಗಳು ಕೇಳಿ ಬಂದಿವೆ. ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ಪಕ್ಷದ ರಾಷ್ಟ್ರೀಯ ಪಕ್ಷ "ಭಾರತ್ ರಾಷ್ಟ್ರ ಸಮಿತಿ (BRS)" ಅನ್ನು ಪ್ರಾರಂಭಿಸಿದ ನಂತರದ ಮೊದಲ ಚುನಾವಣೆ ಇದಾಗಿದೆ ಎನ್ನುವುದು ಪ್ರಮುಖ ಅಂಶವಾಗಿದೆ.
ಇದನ್ನೂ ಓದಿ: ಅಧಿಕಾರ ಹಿಡಿಯಲು ಹೊರಟ ಬಿಜೆಪಿಗೆ ಶಾಕ್, ರಿಷಿ ಸುನಕ್ ಕಾರಣ ನೀಡಿ ಹಿರಿಯ ನಾಯಕ ರಾಜೀನಾಮೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.